ಬೆಂಗಳೂರು/ ರಾಮನಗರ(ಡಿ. 27) ರಾಮನಗರದ ಬೆಟ್ಟದಲ್ಲಿ ಯೇಸು ಪ್ರತಿಮೆ ಸ್ಥಾಪನೆ ವಿಚಾರ ದೊಡ್ಡ ಸುದ್ದಿಯಾಗಿರುವಾಗಲೇ ರಾಜಕೀಯ ನಾಯಕರು ಭಿನ್ನ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಡಿಕೆ ಶಿವಕುಮಾರ್ ಭೂಮಿ ನೀಡಿದ ವಿಚಾರ ಸಮರ್ಥಿಸಿಕೊಂಡಿದ್ದು ತಪ್ಪೇನಿದೆ? ಎಂದು ಪ್ರಶ್ನೆ ಮಾಡಿದ್ದಾರೆ. ಅತ್ತ ಮಾತನಾಡಿರುವ ಸುರೇಶ್ ಕುಮಾರ್ ಭೂಮಿ ನೀಡಿಕೆ ವಿಚಾರದಲ್ಲಿ ಗೋಲ್ ಮಾಲ್ ಅನುಮಾನ ಹೊರಹಾಕಿದ್ದಾರೆ.

ಪ್ರತಿಮೆ  ಸ್ಥಾಪನೆಗೆ ಮುಂದಾಗಿರುವ ಡಿಕೆಶಿಗೆ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಯೇಸು ಪ್ರತಿಮೆ ಮಾಡಲಿ ನಮ್ಮದೇನೂ ಅಭ್ಯಂತರ ಇಲ್ಲ. ಡಿಕೆಶಿ ಅವರೇ ಆರಾಧಿಸುವ ಕೆಂಪೇಗೌಡರು ಇದ್ದಾರೆ, ಸ್ವಾಮೀಜಿ ಇದ್ದಾರೆ.. ಹಿಂದೂ ದೇವರುಗಳಿವೆ.. ವೋಟ್ ಬ್ಯಾಂಕ್ ಗಾಗಿ ಇಂಥ ಕೆಲಸ ಮಾಡಲು ಮುಂದಾದರೆ ಅದು ತಪ್ಪು ಎಂದು ಈಶ್ವರಪ್ಪ ಹೇಳಿದ್ದಾರೆ.

ಯೇಸು ಪ್ರತಿಮೆಗೆ ಮುಂದಾದ ಡಿಕೆಶಿಗೆ ಗೋಲ್ ಮಾಲ್ ಸಂಕಷ್ಟ

ಡಿಕೆಶಿ ನಡೆಯನ್ನು ಸಂಸದ ಅನಂತ್ ಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ. ಇಲ್ಲೊಬ್ಬ ತಿಹಾರ್ ರಿರ್ಟನ್ಡ್ ಮಹನೀಯ ಯಾವುದೋ ಹುದ್ದೆಯ ಆಸೆಯಿಂದ ಇಟಲಿಯಮ್ಮನ ಮೆಚ್ಚಲು ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಸಂಚು ರೂಪಿಸಿದವರನ್ನೇ ಓಲೈಸಿ ಒಕ್ಕಲಿಗರಿಗೆ ಅನ್ಯಾಯ ಮಾಡುತ್ತಿದ್ದೀರಾ ಎಂದು ಹಿಂದೂ ಜಾಗರಣ ವೇದಿಕೆಯ ಜಗದೀಶ್ ಕಾರಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

"

 

"

 

"