ರಾಮನಗರ ಜಿಲ್ಲೆಯಲ್ಲಿ ನಾರೀಯರೇ ಪ್ರಬಲ, ಮಹಿಳಾ ಮತದಾರರನ್ನು ಸೆಳೆಯಲು ಮುಂದಾದ ಅಭ್ಯರ್ಥಿಗಳು!

2023 ಸಾರ್ವತ್ರಿಕ ಚುನಾವಣೆಗೆ ಮತದಾರರ ಅಂತಿಮ ಪಟ್ಟಿಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದ್ದು, ರಾಮನಗರ ಜಿಲ್ಲೆಯಲ್ಲಿ ಮಹಿಳಾ ಮತದಾರರೇ ಹೆಚ್ಚಿದ್ದಾರೆ. ಹೀಗಾಗಿ ಅಭ್ಯರ್ಥಿಗಳು ಮಹಿಳೆಯರ ಮತ ಸೆಳೆಯಲು ಮುಂದಾಗಿದ್ದಾರೆ.

Ramanagara district  have highest women voters gow

ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್

ರಾಮನಗರ (ಏ.4): 2023 ಸಾರ್ವತ್ರಿಕ ಚುನಾವಣೆಗೆ ಮತದಾರರ ಅಂತಿಮ ಪಟ್ಟಿಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದ್ದು, ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ 4,35,572 ಪುರುಷ ಹಾಗೂ 4,50,573 ಮಹಿಳಾ ಮತದಾರರು ಹಕ್ಕು ಚಲಾಯಿಸಲಿದ್ದು, ಪುರುಷರಿಗಿಂತ 15,001ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಜಿಲ್ಲೆಯ ಒಟ್ಟು ನಾಲ್ಕು ವಿಧಾನಸಭೆ ಕ್ಷೇತ್ರಗಳ ಪೈಕಿ  ಮಾಗಡಿ, ರಾಮನಗರ, ಕನಕಪುರ ಹಾಗೂ ಚನ್ನಪಟ್ಟಣದಲ್ಲಿ ಮಹಿಳಾ ಮತದಾರರೇ ನಿರ್ಣಾಯಕರಾಗಿದ್ದಾರೆ. ಮತದಾರರ ಪಟ್ಟಿಯ ಅಂತಿಮ ಪರಿಷ್ಕರಣೆಯ ಬಳಿಕ ಮಹಿಳಾ ಮತದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವುದು ಬಹಿರಂಗವಾಗಿದ್ದು, ಒಟ್ಟಾರೆ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅದೇ ರೀತಿ ಮತದಾರರ ವಿಷಯಕ್ಕೆ ಬಂದಲ್ಲಿ ಜಿಲ್ಲೆಯಲ್ಲಿ ನಾರೀಯರ ಬಲ ಹೆಚ್ಚಿದ್ದು, ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿದ್ದಾರೆ.

ನಾರಿಯರ ಕ್ಷೇತ್ರದಲ್ಲಿ ಮೇಲು ಗೈ :
ಮತದಾರರ ಸಂಖ್ಯೆ ಗಣನೆಗೆ ತೆಗೆದುಕೊಂಡರೆ ಮಾಗಡಿ ವಿಧಾನಸಭಾ ಕ್ಷೇತ್ರ ಅತಿದೊಡ್ಡ ಕ್ಷೇತ್ರವಾಗಿದೆ. ಇಲ್ಲಿ 2.26 ಲಕ್ಷದಷ್ಟು ಮಂದಿ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ರಾಮನಗರ ತಾಲೂಕಿನ ಬಿಡದಿ, ಕೂಟಗಲ ಹಾಗೂ ಮಾಗಡಿ ತಾಲ್ಲೂಕಿನ ಮಾಗಡಿ ಪಟ್ಟಣ, ಕಸಬಾ, ಕುದೂರು, ಮಾಡಬಾಳ್, ತಿಪ್ಪಸಂದ್ರ ಹೋಬಳಿಗಳನ್ನು ಈ ಕ್ಷೇತ್ರವು ಹೊಂದಿದೆ. ಈ ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಜಿಲ್ಲೆಯಲ್ಲಿ ಚನ್ನಪಟ್ಟಣ ಎರಡನೇ ದೊಡ್ಡ ಕ್ಷೇತ್ರ ಎನಿಸಿದೆ. ಇಡೀ ತಾಲೂಕು ಒಂದೇ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದೆ. ಇಲ್ಲಿ ಚನ್ನಪಟ್ಟಣ ನಗರದ ಜೊತೆಗೆ ಕಸಬಾ, ಮಳೂರು ಹಾಗೂ ವಿರೂಪಾಕ್ಷಿಪುರ ಹೋಬಳಿಗಳಿವೆ. ಇಲ್ಲಿನ 2.24 ಲಕ್ಷ ಜನರು ಮತದಾನದ ಹಕ್ಕು ಹೊಂದಿದ್ದಾರೆ. ಇಲ್ಲಿ ಪುರುಷರಿಗಿಂತ 6620 ಮಹಿಳಾ ಮತದಾರರು ಹೆಚ್ಚಾಗಿದ್ದಾರೆ.

ಕನಕಪುರ ಕ್ಷೇತ್ರದಲ್ಲಿ ಈ ಬಾರಿ 2.21  ಲಕ್ಷ ಮಂದಿ ಮತ ಚಲಾವಣೆ ಮಾಡಲಿದ್ದಾರೆ. ಕನಕಪುರ ತಾಲೂಕಿನ ಸಾತನೂರು, ಉಯ್ಯಂಬಳ್ಳಿ, ಕೋಡಿಹಳ್ಳಿ, ಕನಕಪುರ ನಗರ ಹಾಗೂ ಕಸಬಾ ಹೋಬಳಿಗಳು ಇದರ ವ್ಯಾಪ್ತಿಗೆ ಬರುತ್ತವೆ. ಇಲ್ಲಿಯೂ ಸಹ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ರಾಮನಗರ ಕ್ಷೇತ್ರ ನಗರ ಪ್ರದೇಶದ ಜೊತೆಗೆ ಕಸಬಾ, ಕೈಲಾಂಚ ಹಾಗೂ ಕನಕಪುರ ತಾಲೂಕಿನ ಹಾರೋಹಳ್ಳಿ, ಮರಳವಾಡಿ ಎರಡು ಹೋಬಳಿಗಳನ್ನು ಒಳಗೊಂಡಿದೆ. ಇಲ್ಲಿ ಈ ಬಾರಿ 2.11  ಲಕ್ಷ ಜನರು ಮತದಾನ ಮಾಡುವ ಅವಕಾಶ ಪಡೆದಿದ್ದಾರೆ.

ವಿಜಯ ಮಲ್ಯನಂತೆ ನಾನು ಓಡಿ ಹೋಗಲ್ಲ, ಕುತಂತ್ರದಿಂದ ನನ್ನನ್ನು ಜೈಲಿಗಟ್ಟಿದರು:

ಕಳೆದ ಚುನಾವಣೆಯಲ್ಲಿ ಮಾಗಡಿ ಕ್ಷೇತ್ರದಲ್ಲಿ ಮಾತ್ರ ಪುರುಷ ಮತದಾರರು ಹೆಚ್ಚಾಗಿದ್ದರು. ಈ ಬಾರಿ ಆ ಕ್ಷೇತ್ರದಲ್ಲಿಯೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಿಶೇಷ ಪರಿಷ್ಕರಣೆಯ ಬಳಿಕ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ. ಜಾಗೃತಿಯ ಕಾರಣಕ್ಕೆ ಮಹಿಳೆಯರು ಹೆಚ್ಚಾಗಿ ನೋಂದಣಿ ಮಾಡಿಸಿ ಕೊಂಡಿದ್ದಾರೆ ಎಂಬುದು ಅಧಿಕಾರಿಗಳ ವಿಶ್ಲೇಷಣೆಯಾಗಿದೆ.

ಶಹಾಪುರ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಮೂವರು ಆಕಾಂಕ್ಷಿಗಳ ಫೈಟ್, ಟಿಕೆಟ್‌ಗಾಗಿ ಬೆಟ್ಟಿಂಗ್!

ರಾಜಕೀಯ ಪಕ್ಷಗಳ ಕಸರತ್ತು
ಒಟ್ಟಾರೆ ಈಗ ಚುನಾವಣೆಯಲ್ಲಿ ಮಹಿಳಾ ಮತದಾರರೇ ನಿರ್ಣಾಯಕ ಅಂಶವಾಗಿದ್ದು, ಪ್ರತಿ ರಾಜಕೀಯ ಪಕ್ಷಗಳು ಮಹಿಳಾ ಮತದಾರರಿಗೆ  ಸೆಳೆಯಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ಆರಂಭಿಸಿವೆ.  ಮಹಿಳಾ ಸಮುದಾಯವನ್ನು ಪ್ರಭಾವಿಸಬಲ್ಲವರಿಗೆ ಮಣೆ ಹಾಕಲು ಮುಂದಾಗಿವೆ. ಅಲ್ಲದೆ, ಮಹಿಳಾ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಹಲವು ತಂತ್ರಗಳನ್ನು ಹೆಣೆಯುತ್ತಿವೆ. ಟಿಕೆಟ್ ಆಕಾಂಕ್ಷಿಗಳು, ರಾಜಕೀಯ ನಾಯಕರು ಮಹಿಳಾ ಮತದಾರರ ಮನೆ ಕದ ತಟ್ಟುತ್ತಿದ್ದಾರೆ.

Latest Videos
Follow Us:
Download App:
  • android
  • ios