'ಅಭಯ ಪಾಟೀಲ ಬೋಗಸ್‌ ಹಿಂದೂ'

ಅಭಯ್‌ ಪಾಟೀಲ್‌ ಅವರ ಎಲ್‌ಸಿಯಲ್ಲಿ ಹಿಂದೂ ಎಂಬ ಶಬ್ದ ಇದ್ದರೆ ನಾವೇ 10 ಲಕ್ಷ ಕೊಡುತ್ತೇವೆ: ರಾಜಶೇಖರ ತಳವಾರ 

Rajashekhar Talawar Slams BJP MLA Abhay Patil grg

ಬೆಳಗಾವಿ(ನ.15):  ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ವಿರುದ್ಧ ವ್ಯವಸ್ಥಿತ ಷಡ್ಯಂತ್ರ, ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ಸತೀಶ ಜಾರಕಿಹೊಳಿ ಬೆಂಬಲಿಗರು, ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಬೆಳಗಾವಿಯಲ್ಲಿ ಸೋಮವಾರ ಬೃಹತ್‌ ಪ್ರತಿಭಟನಾ ರಾರ‍ಯಲಿ ನಡೆಸುವ ಮೂಲಕ ಶಕ್ತಿ ಪ್ರದರ್ಶನ ನಡೆಸಿದರು.

ನಗರದ ಸಿಪಿಎಡ್‌ ಮೈದಾನದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಕ್ಲಬ್‌ ರಸ್ತೆ, ಚನ್ನಮ್ಮ ವೃತ್ತದಲ್ಲಿ ಹಾಯ್ದು ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್‌ ಪ್ರತಿಭಟನಾ ರಾರ‍ಯಲಿ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. 10 ಸಾವಿರಕ್ಕೂ ಅಧಿಕ ಜನರು ಪ್ರತಿಭಟನಾ ರಾರ‍ಯಲಿಯಲ್ಲಿ ಪಾಲ್ಗೊಂಡಿದ್ದರು. ಚನ್ನಮ್ಮ ವೃತ್ತದಲ್ಲಿ ಒಂದು ಗಂಟೆ ಕಾಲ ಧರಣಿ ಕುಳಿತ ಪ್ರತಿಭಟನಾಕಾರರು, ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮತ್ತಿತರ ನಾಯಕ ಭಾವಚಿತ್ರಗಳನ್ನು ದಹನಗೊಳಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

ಯಾವುದೇ ಕ್ಷೇತ್ರದಲ್ಲಿ ನಿಂತರೂ ಸಿದ್ದು ಸೋಲು ಖಚಿತ: ಸಚಿವ ಕಾರಜೋಳ

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮಾನವ ಬಂಧುತ್ವ ವೇದಿಕೆ ಸಂಚಾಲಕ ರವೀಂದ್ರ ನಾಯಿಕ, ಸತೀಶ ಜಾರಕಿಹೊಳಿ ದಲಿತರು, ಶೋಷಿತ ವರ್ಗದಿಂದ ಬಂದವರು. ಶೋಷಿತರು, ಬಡವರ ಪರವಾಗಿ ಧ್ವನಿ ಎತ್ತುತ್ತಿರುವ ಇವರ ಧ್ವನಿಯನ್ನು ಅಡಗಿಸುವ ಉದ್ದೇಶದಿಂದ ಆ ಹೇಳಿಕೆಯನ್ನು ತಿರುಚಿ, ಇಡೀ ರಾಜ್ಯ, ದೇಶಾದÜ್ಯಂತ ಅಪಪ್ರಚಾರ ಮಾಡಿ ಅವರ ತೇಜೋವಧೆ ಮಾಡುವ ಮನುವಾದಿಗಳ ಪ್ರಯತ್ನವನ್ನು ನಾವು ಖಂಡಿಸುತ್ತೇವೆ ಮತ್ತು ಅದನ್ನು ಧಿಕ್ಕರಿಸುತ್ತೇವೆ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಹುಟ್ಟಿದಾಗಿನಿಂದ ಸಾಯುವವರೆಗೂ ಅವರು ಧರ್ಮವನ್ನು ಬಿಟ್ಟು ಹೋಗುವವರೆಗೂ ನಿರಂತರವಾಗಿ ನೋವು, ಅಪಮಾನ ಮಾಡಿದ ಸಿದ್ಧಾಂತವಿದು. ಅವರ ಸಿದ್ಧಾಂತದ ವಿರುದ್ಧ ಯಾರೇ ಮಾತನಾಡಿದರೂ ಷಡ್ಯಂತ್ರ ಮಾಡಿ ಅವರ ಧ್ವನಿಯನ್ನು ಹತ್ತಿಕ್ಕುವ ವ್ಯವಸ್ಥಿತ ಪ್ರಯತ್ನ ದೇಶದಲ್ಲಿ ನಡೆದಿದೆ. ಹಿಂದುಳಿದ ಜನ ನಾವು ಜಾಗೃತರಾಗಿದ್ದೇವೆ. ನಿಮ್ಮ ವಿರುದ್ಧದ ಹೋರಾಟವನ್ನು ನಾವು ಇಲ್ಲಿಗೆ ನಿಲ್ಲಿಸೋದಿಲ್ಲ ಎಂದು ಎಚ್ಚರಿಸಿದರು.

ಭೀಮ ಆರ್ಮಿ ಬೆಳಗಾವಿ ಸಂಚಾಲಕ ಸಂತೋಷ ದೊಡಮನಿ ಮಾತಾಡಿದರು. ರೈತ ಮುಖಂಡ ಸಿದಗೌಡ ಮೊದಗಿ ಮಾತನಾಡಿ, ಅಂಗನವಾಡಿ ಮಕ್ಕಳ ತತ್ತಿ ತಿನ್ನುವಾಗ, ನಾಡಿನಾದ್ಯಂತ ಭೂಮಿ ಖರೀದಿ ಮಾಡಿ ಮಾರುತ್ತಿರುವಾಗ, ನಾಡಿನ ರೈತರು ಬಂದಾಗ ಎಲ್ಲಿ ಹೋಗಿತ್ತು ನಿಮ್ಮ ಚರ್ಚೆ? ಇದನ್ನು ಕೂಡ ಮುಕ್ತವಾಗಿ ಚರ್ಚೆ ಮಾಡಲು ಬನ್ನಿ. ನಿಮ್ಮ ಪಕ್ಷದಲ್ಲಿ ಮಾತ್ರ ಹಿಂದುಗಳಿಲ್ಲ. ಎಲ್ಲಾ ಪಕ್ಷಗಳಲ್ಲಿಯೂ ಹಿಂದೂಗಳಿದ್ದಾರೆ. ಅವರಲ್ಲಿ ಇದು ಚರ್ಚೆ ಆಗುತ್ತಿಲ್ಲ. ಆದರೆ ನಿಮ್ಮಲ್ಲಿ ಮಾತ್ರ ಯಾಕೆ ಚರ್ಚೆಯಾಗುತ್ತಿದೆ. ನೀವು ಬಂದು ಚರ್ಚೆ ಮಾಡಬೇಕಿತ್ತು. ನಿಮ್ಮದೇ ಡಬಲ್‌ ಎಂಜಿನ್‌ ಸರ್ಕಾರ ಆಡಳಿತದಲ್ಲಿದೆ. ಒಂದು ತನಿಖಾ ಸಮಿತಿ ರಚನೆ ಮಾಡಿ, ಎಲ್ಲ ವಿಶ್ವವಿದ್ಯಾಲಯಗಳಿಂದ ತಜ್ಞರು ಬಂದು ಚರ್ಚೆ ಮಾಡಲಿ. ಸಾಮಾಜಿಕ ಹೋರಾಟಕ್ಕೆ ಬೆಲೆ ಬರಬೇಕು. ಈ ಚಳವಳಿ ಇಲ್ಲಿಂದ ಆರಂಭವಾಗಲಿ ಎಂದು ಕರೆ ನೀಡಿದರು.

Belagavi ಪೊಲೀಸ್ ವಶದಲ್ಲಿದ್ದ ಆರೋಪಿ ಸಾವು, ಮಗಳಿಂದ ಲಾಕಪ್ ಡೆತ್ ಆರೋಪ, ಪ್ರಕರಣ ಸಿಐಡಿಗೆ ವರ್ಗ

ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ್‌, ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ತೋಳಿ ಭರಮಣ್ಣ, ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ರಾಜ್ಯಾಧ್ಯಕ್ಷ ವಿಜಯ ತಳವಾರ, ಜಿಲ್ಲಾ ಸಂಚಾಲಕ ಜೀವನ್‌ ಮಾಂಜ್ರೇಕರ್‌, ಕರವೇ ಜಿಲ್ಲಾ ಅಧ್ಯಕ್ಷ ಮಹಾದೇವ ತಳವಾರ, ಉಪಾಧ್ಯಕ್ಷ ಸುರೇಶ, ಚನ್ನಬಸವ ಡೇಶನ್‌ ಅಧ್ಯಕ್ಷ ಎಸ್‌.ಬಿ. ಗೂಡಸ್‌, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಮಹಾಂತೇಶ ತಳವಾರ, ಕೆಪಿಸಿಸಿ ಸದಸ್ಯೆ ಸರಳಾ ಸಾತ್ಪುತೆ, ಸೈಯದ್‌ ಮನಸೂರ್‌ ಸೇರಿದಂತೆ ವಿವಿಧ ದಲಿತ ಸಂಘಟನೆಗಳು, ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಕನ್ನಡಪರ ಹೋರಾಟ ಸಮಿತಿ, ಬುದ್ದ, ಬಸವ, ಅಂಬೇಡ್ಕರ್‌ ಅನುಯಾಯಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳು ಹಾಗೂ ಸತೀಶ್‌ ಜಾರಕಿಹೊಳಿ ಅಭಿಮಾನಿ ಬಳಗದ ಸದಸ್ಯರು ಪಾಲ್ಗೊಂಡಿದ್ದರು.

ಅಭಯ ಪಾಟೀಲ ಬೋಗಸ್‌ ಹಿಂದೂ

ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ರಾಜ್ಯ ಉಪಾಧ್ಯಕ್ಷ ರಾಜಶೇಖರ ತಳವಾರ ಮಾತನಾಡಿ, ಅಭಯ್‌ ಪಾಟೀಲ್‌ ಅವರ ಎಲ್‌ಸಿಯಲ್ಲಿ ಹಿಂದೂ ಎಂಬ ಶಬ್ದ ಇದ್ದರೆ ನಾವೇ .10 ಲಕ್ಷ ಕೊಡುತ್ತೇವೆ. ಸತೀಶ ಜಾರಕಿಹೊಳಿ ಅವರ ಜನ್ಮದಾಖಲೆಯಲ್ಲಿ ಹಿಂದು ವಾಲ್ಮೀಕಿ ಅಂತಾ ಇದೆ. ಸತೀಶ ಜಾರಕಿಹೊಳಿ ಪಕ್ಕಾ ಹಿಂದೂ. ಅಭಯ ಪಾಟೀಲ್‌ ಬೋಗಸ್‌ ಹಿಂದೂ. ಇಂದು ನಕಲಿ ಹಿಂದೂಗಳು ಬಂದು ಅಸಲಿ ಹಿಂದುಗಳನ್ನು ನೀವು ಹಿಂದೂಗಳಾ ಎಂದು ಕೇಳುತ್ತಿದ್ದಾರೆ. ಹಿಂದೂಗಳ ಅಪ್ಪಗಳು ನಾವು, ಹಿಂದು ಮಾಲೀಕರು-ಯಜಮಾನರು ನಾವು, ಹಿಂದೂ ಸೃಷ್ಟಿಕರ್ತರು ನಾವು. ನೀವೆಲ್ಲಾ ಬಾಡಿಗೆ ಜನ ನೀವು, ನಮ್ಮನ್ನು ಕೇಳುವ ಹಕ್ಕು ನಿಮಗಿಲ್ಲ ಎಂದರು.
 

Latest Videos
Follow Us:
Download App:
  • android
  • ios