ವರುಣ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿ : ಈಶ್ವರಪ್ಪ
ಈಶಾನ್ಯ ರಾಜ್ಯಗಳಲ್ಲಿ ವಿಜಯ ಪತಾಕೆ ಹಾರಿಸಿರುವ ಬಿಜೆಪಿ ರಾಜ್ಯದಲ್ಲಿಯೂ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಪಕ್ಷದ ಕಾರ್ಯಕರ್ತರು ಒಟ್ಟಾಗಿ ಕೆಲಸ ನಿರ್ವಹಿಸುವ ಮೂಲಕ ವರುಣ ಕ್ಷೇತ್ರವನ್ನು ಕಮಲದ ತೆಕ್ಕೆಗೆ ತಂದು ಕೊಡುವಂತೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮನವಿ ಮಾಡಿದರು.
ನಂಜನಗೂಡು : ಈಶಾನ್ಯ ರಾಜ್ಯಗಳಲ್ಲಿ ವಿಜಯ ಪತಾಕೆ ಹಾರಿಸಿರುವ ಬಿಜೆಪಿ ರಾಜ್ಯದಲ್ಲಿಯೂ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಪಕ್ಷದ ಕಾರ್ಯಕರ್ತರು ಒಟ್ಟಾಗಿ ಕೆಲಸ ನಿರ್ವಹಿಸುವ ಮೂಲಕ ವರುಣ ಕ್ಷೇತ್ರವನ್ನು ಕಮಲದ ತೆಕ್ಕೆಗೆ ತಂದು ಕೊಡುವಂತೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮನವಿ ಮಾಡಿದರು.
ವರುಣ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಹದಿನಾರು ಗ್ರಾಮದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಅವರು ಮಾತನಾಡಿದರು.
ದೇಶದೆಲ್ಲೆಡೆ ಕಾಂಗ್ರೆಸ್ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿದೆ ಕರ್ನಾಟಕದಲ್ಲೂ ಈ ಬಾರಿ ಚುನಾವಣೆ ಬಳಿಕ ಕಾಂಗ್ರೆಸ್ ಜನರಿಂದ ತಿರಸ್ಕೃತಗೊಳ್ಳಲಿದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿಕೊಡುವ ಮೂಲಕ ಮತದಾರರ ಬೆಂಬಲ ಪಡೆದುಕೊಳ್ಳಲು ಕಾರ್ಯಕರ್ತರು ಮುಂದಾಗಬೇಕು, ಇನ್ನು ವರುಣದಲ್ಲಿ ಪಕ್ಷದ ಕಾರ್ಯಕರ್ತರ ಸಲಹೆಯನ್ನು ಪರಿಗಣಿಸಿ ಚುನಾವಣೆಗೆ ಸೂಕ್ತ ಅಭ್ಯರ್ಥಿಯನ್ನು ವರಿಷ್ಟರು ನಿರ್ಣಯಿಸಲಿದ್ದಾರೆ, ಹೀಗಾಗಿ ಯಾರಿಗೇ ಟಿಕೆಟ್ ಸಿಕ್ಕರೂ ಆಕಾಂಕ್ಷಿಗಳೆಲ್ಲರೂ ಒಟ್ಟಾಗಿ ಚುನಾವಣೆಯಲ್ಲಿ ಕೆಲಸ ನಿರ್ಬಹಿಸುವ ಮೂಲಕ ವರುಣದಲ್ಲಿ ಬಿಜೆಪಿ ಗೆಲುವು ಸಾಧಿಸುವಂತೆ ನೋಡಿಕೊಳ್ಳುವಂತೆ ಅವರು ಸಲಹೆ ನೀಡಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಿಸಾನ್ ಸಮ್ಮಾನ್‌ನಂತಹ ಯೋಜನೆ ಜಾರಿಯ ಮೂಲಕ ರೈತರಿಗೆ ನೆರವಾಗಿದ್ದಾರೆ, ಜಾತಿ, ಮತ ಹಾಗೂ ಧರ್ಮದ ಆಧಾರದಲ್ಲಿ ಇತರರು ಮತ ಕೇಳುತ್ತಿದ್ದರೆ ಬಿಜೆಪಿ ಅಭಿವೃದ್ಧಿ ಮೂಲಕ ಮತಯಾಚಿಸುತ್ತಿದೆ ಎಂದು ಹೇಳಿದರು.
ಮೂಡಹಳ್ಳಿ ವೃತ್ತದಿಂದ ಹದಿನಾರುಕೆರೆ ಮುಂಭಾಗದವರೆಗೆ ಬೈಕ್ ರಾರಯಲಿ ನಡೆಸಲಾಯಿತು. ರೋಡ್ ಶೋನಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ವಿಜಯ ಸಂಕಲ್ಪಯಾತ್ರೆ ಸಂಚಾಲಕ ಎಸ್. ಮಹದೇವಯ್ಯ, ವರುಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಬಿ.ಎನ್. ಸದಾನಂದ್, ಪ್ರವಾಸೋದ್ಯಮ ನಿಗಮ ಅಧ್ಯಕ್ಷ ಕಾ.ಪು. ಸಿದ್ಧಲಿಂಗಸ್ವಾಮಿ, ಜಿಪಂ ಮಾಜಿ ಸದಸ್ಯ ಗುರುಸ್ವಾಮಿ, ಎಲ್.ಆರ್. ಮಹದೇವಸ್ವಾಮಿ, ದೇವನೂರು ಪ್ರತಾಪ್, ಶರತ್ ಪುಟ್ಟಬುದ್ಧಿ, ಚಿಕ್ಕಮಾದಯ್ಯ, ವಿಜಯ್‌ಕುಮಾರ್, ಮಲ್ಲಿಕಾರ್ಜುನ, ತೋಟದಪ್ಪ ಬಸವರಾಜು, ಶಿವಯ್ಯ, ಕಾಪು ಸಿದ್ದವೀರಪ್ಪ ಭಾಗವಹಿಸಿದ್ದರು.
ಪಕ್ಷ ಸೇರಲು ಜನರ ಅಭಿಪ್ರಾಯ ಕೇಳುವೆ
ಮದ್ದೂರು (ಮಾ.02): ನಾನು ಯಾವ ಪಕ್ಷ ಸೇರಬೇಕು, ಚುನಾವಣೆಗೆ ಸ್ಪರ್ಧಿಸಬೇಕೋ, ಬೇಡವೋ ಎಂಬ ಬಗ್ಗೆ ಮತ್ತೊಮ್ಮೆ ಜನಾಭಿಪ್ರಾಯ ಕೇಳುತ್ತೇನೆ. ಸಮಯ ಬಂದಾಗ ನನ್ನ ನಿರ್ಧಾರ ತಿಳಿಸುತ್ತೇನೆ ಎಂದು ಹೇಳುವ ಮೂಲಕ ಸಂಸದೆ ಸುಮಲತಾ ಪಕ್ಷ ಸೇರ್ಪಡೆ ನಿಲುವನ್ನು ಸ್ಪಷ್ಟಪಡಿಸದೆ ಗೊಂದಲದಲ್ಲೇ ಉಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ರಾಜಕಾರಣಕ್ಕೆ ಬರಬೇಕು, ಚುನಾವಣೆಗೆ ನಿಲ್ಲಬೇಕು ಎನ್ನುವುದು ಅಷ್ಟುಸುಲಭದ ವಿಚಾರ ಅಲ್ಲ. ಅದೊಂದು ದೊಡ್ಡ ನಿರ್ಧಾರ ಆಗುತ್ತೆ. ಚುನಾವಣೆಗೆ ಎಷ್ಟು ದಿನ ಎನ್ನುವುದು ಮುಖ್ಯವಲ್ಲ.
ಗೆಲ್ಲಲು ಅನುಕೂಲಕರ ವಾತಾವರಣ ಎಷ್ಟಿದೆ ಎನ್ನುವುದು ಮುಖ್ಯ. ಹಾಗಾಗಿ ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎಂದು ಹೇಳಲು ಇದು ಸಮಯವಲ್ಲ. ಆ ಸಮಯ ಬಂದಾಗ ನಾನು ಎಲ್ಲರ ಸಮ್ಮುಖದಲ್ಲಿ ನಿರ್ಧಾರ ಮಾಡುತ್ತೇನೆ ಎಂದರು. ನಾನು ರಾಜಕೀಯಕ್ಕೆ ಬಂದಿರೋದೆ ಒಂದು ಆಕಸ್ಮಿಕ. ನಾನು ಪೂರ್ಣ ಪ್ರಮಾಣದಲ್ಲಿ ಇಲ್ಲೇ ಇರಲೂ ಬಂದಿಲ್ಲ. ಚುನಾವಣೆಗೆ ನಿಲ್ಲುವ, ರಾಜಕೀಯ ಪಕ್ಷ ಸೇರುವ ಅಥವಾ ಸ್ವತಂತ್ರವಾಗಿ ಉಳಿಯುವ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರವಾಗಿಲ್ಲ ಎಂದ ಸುಮಲತಾ, ಬಿಜೆಪಿ, ಕಾಂಗ್ರೆಸ್ ಪಕ್ಷದಿಂದ ನನಗೆ ಆಹ್ವಾನವಿದೆ.