ಕಾರವಾರ [ಅ.02]:  ಕಾರವಾರದ ಕಡಲ ತೀರದಲ್ಲಿ ಇಂದು ಅಚ್ಚರಿಯೊಂದು ಕಂಡು ಬಂತು. ಇಲ್ಲಿನ ಆಳ ಸಮುದ್ರದಲ್ಲಿ ಸುಂದರವಾದ ಏಳು ಬಣ್ಣಗಳ ಕಾಮನ ಬಿಲ್ಲೊಂದು ಮೂಡಿತ್ತು.

ಬಿಸಿಲು ಮಳೆ ಉಂಟಾದ ವೇಳೆ ಆಕಾಶದಲ್ಲಿ ಕಾಣುವ ಕಾಮನ ಬಿಲ್ಲಿನ ಸುಂದರ ದೃಶ್ಯ ಕಾರವಾರದ ಕಡಲ ತಡಿಯಲ್ಲಿ ಕಂಡು ಬಂತು.  

ಏಳು ಬಣ್ಣಗಳ ಈ ಕಾಮನ ಬಿಲ್ಲಿನ ಸುಂದರ ಚಿತ್ತಾರ ಕಾರವಾರದ ಕಡಲ ತಡಿಯಲ್ಲಿ ಮೂಡಿದ್ದು ನೋಡುಗರ ಕಣ್ಮನ ಸೆಳೆಯಿತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಲ್ಲಿ ಆಳ ಸಮುದ್ರದಲ್ಲಿ ಕಾಮನಬಿಲ್ಲು ಮೂಡಿದ್ದು, ಈ ಅದ್ಭುತ ದೃಶ್ಯ ಕಡಲ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು. ನೀಲಿ ಕಡಲಿನೊಂದಿಗೆ 7 ಬಣ್ಣಗಳ ಚಿತ್ತಾರ ಎಲ್ಲರ ಗಮನ ಸೆಳೆಯಿತು.