Asianet Suvarna News Asianet Suvarna News

ಕೊಡಗಿನ ವಿವಿಧೆಡೆ ಮಳೆಯ ಸಿಂಚನ: ಅನ್ನದಾತನ ಮೊಗದಲ್ಲಿ ಮಂದಹಾಸ..!

ಕೆಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣವಿದ್ದರೂ ಮಳೆಯಾಗಿಲ್ಲ. ಇದರಿಂದ ಬೆಳೆಗಾರರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಕಾಫಿ ಫಸಲಿಗೆ ಹೂವು ಅರಳಲು ಮಳೆ ಅಗತ್ಯವಾಗಿದೆ. ಇದರಿಂದ ಕಾಫಿ ಬೆಳೆಗಾರರು ಸ್ಪ್ರಿಂಕ್ಲರ್‌ಗಳ ಮೂಲಕ ಕೃಷಿ ಹೊಂಡಗಳಿಂದ ಕೃತಕವಾಗಿ ನೀರು ಸಿಂಪಡಿಸುತ್ತಿದ್ದಾರೆ. ಇದರಿಂದ ಬೆಳೆಗಾರರಿಗೆ ದುಬಾರಿ ವೆಚ್ಚ ತಗುಲುತ್ತಿದೆ. ಹಾಗಾಗಿ ಬೆಳೆಗಾರರು ಮಳೆಯನ್ನು ಎದುರು ನೋಡುತ್ತಿದ್ದಾರೆ.

Rain in Various Parts of Kodagu on March 18th grg
Author
First Published Mar 19, 2024, 10:49 AM IST

ಮಡಿಕೇರಿ(ಮಾ.19): ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಸೋಮವಾರ ಮಳೆ ಸುರಿದಿದೆ. ಕಳೆದ ಹಲವು ದಿನಗಳಿಂದ ಬಿಸಿಲಿನ ವಾತಾವರಣದಿಂದ ಕೂಡಿದ್ದ ಜಿಲ್ಲೆಯಲ್ಲಿ ಮಳೆಯ ಸಿಂಚನವಾಗಿದ್ದು, ಇಳೆಯನ್ನು ತಂಪು ಮಾಡಿದೆ. 

ಕೊಡಗಿನ ಚೆಯ್ಯಂಡಾಣೆ, ಕುಂಜಿಲಗೇರಿ, ಬೊಳ್ಳುಮಾಡು, ದುಬಾರೆ, ಸಿದ್ದಾಪುರ, ಒಂಟಿಯಂಗಡಿ ಮತ್ತಿತರ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ಈ ಭಾಗದ ಜನರು ಸಂತಸಗೊಂಡಿದ್ದಾರೆ. 

ಶುಭಸುದ್ದಿ: ಮುಂದಿನ 3 ದಿನಗಳಲ್ಲಿ ಕರ್ನಾಟಕದ 12ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆ ಸಂಭವ!

ಕೆಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣವಿದ್ದರೂ ಮಳೆಯಾಗಿಲ್ಲ. ಇದರಿಂದ ಬೆಳೆಗಾರರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಕಾಫಿ ಫಸಲಿಗೆ ಹೂವು ಅರಳಲು ಮಳೆ ಅಗತ್ಯವಾಗಿದೆ. ಇದರಿಂದ ಕಾಫಿ ಬೆಳೆಗಾರರು ಸ್ಪ್ರಿಂಕ್ಲರ್‌ಗಳ ಮೂಲಕ ಕೃಷಿ ಹೊಂಡಗಳಿಂದ ಕೃತಕವಾಗಿ ನೀರು ಸಿಂಪಡಿಸುತ್ತಿದ್ದಾರೆ. ಇದರಿಂದ ಬೆಳೆಗಾರರಿಗೆ ದುಬಾರಿ ವೆಚ್ಚ ತಗುಲುತ್ತಿದೆ. ಹಾಗಾಗಿ ಬೆಳೆಗಾರರು ಮಳೆಯನ್ನು ಎದುರು ನೋಡುತ್ತಿದ್ದಾರೆ.

Follow Us:
Download App:
  • android
  • ios