ಶಿವಮೊಗ್ಗ(ಆ.01): ಕಳೆದ ವಾರ ಚುರುಕುಗೊಂಡಿದ್ದ ಮಳೆ ಮತ್ತೊಮ್ಮೆ ಕುಂಠಿತವಾಗಿದೆ. ಮಲೆನಾಡಿನ ಯಾವ ತಾಲೂಕಿನಲ್ಲಿಯೂ ಉತ್ತಮ ಮಳೆ ಸುರಿದಿಲ್ಲ. ಬಿಸಿಲಿನ ನಡುವೆಯೇ ಒಂದಿಷ್ಟು ತುಂತುರು ಮಳೆಯಾಗಿದ್ದು, ಜಲಾಶಯದ ಒಳಹರಿವಿನಲ್ಲಿಯೂ ಇಳಿಕೆ ಕಂಡುಬಂದಿದೆ.

ಕಳೆದ ವಾರ ಸ್ವಲ್ಪ ಚುರುಕುಗೊಂಡಿದ್ದ ಮಳೆ ಬುಧವಾರ ಸಂಪೂರ್ಣ ಕುಂಠಿತಗೊಂಡಿತ್ತು. ಮಲೆನಾಡಿನ ಯಾವ ತಾಲೂಕುಗಳಲ್ಲಿಯೂ ಒಳ್ಳೆಯ ಮಳೆ ಸುರಿದಿಲ್ಲ. ಬಿಸಿಲಿನ ನಡುವೆ ಆಗಾಗ್ಗೆ ತುಂತುರು ಮಳೆಯಾಗಿದೆ. ಜಲಾಶಯದ ಒಳಹರಿವಿನಲ್ಲಿಯೂ ಇಳಿಕೆ ಕಂಡಿದೆ.

ಮೈತ್ರಿಯಿಂದ ಮಳೆ ಬರಲಿಲ್ಲ, ಬಿಜೆಪಿ ಬರುತ್ತಿದ್ದಂತೆ ಮಳೆ ಬರ್ತಿದೆ: ರೈತರ ವಿಡಿಯೋ ವೈರಲ್!

ಬುಧವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ ಈ ರೀತಿಯಿದೆ. ಶಿವಮೊಗ್ಗ -4.40 ಮಿ.ಮೀ., ಭದ್ರಾವತಿ -6.60 ಮಿ.ಮೀ., ತೀರ್ಥಹಳ್ಳಿ -23.40 ಮಿ.ಮೀ., ಸಾಗರ -16.20 ಮಿ.ಮೀ., ಶಿಕಾರಿಪುರ -5.60 ಮಿ.ಮೀ., ಸೊರಬ- 10 ಮಿ.ಮೀ. ಹಾಗೂ ಹೊಸನಗರ- 25.20 ಮಿ.ಮೀ. ಮಳೆಯಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ