Kolar : ಜಿಲ್ಲಾದ್ಯಂತ ಮಳೆ: ಗೃಹ ಬಂಧನದಲ್ಲಿ ಜನತೆ
ಸತತ ಎರಡು ದಿನಗಳಿಂದ ಜಿಲ್ಲೆಯ ವಾತಾವರಣದಲ್ಲಿ ಭಾರೀ ಏರುಪೇರು ಕಂಡಿದ್ದು ಜಿಲ್ಲಾದ್ಯಂತ ಚಂಡಮಾರುತದಿಂದ ಬೀಳುತ್ತಿರುವ ತುಂತರು ಮಳೆಯ ಜನ ಜೀವನಕ್ಕೆ ಸಂಕಷ್ಟಕ್ಕೆ ತಂದರೆ ಚಂಡಮಾರುತ ಸೃಷ್ಟಿಸುತ್ತಿರುವ ಚಿಮು ಚಿಮು ಚಳಿ ಜಿಲ್ಲೆಯ ಜನರನ್ನು ಅಕ್ಷರಶಃ ನಡಗುಸುತ್ತಿದೆ.
![Rain across the kolar district People under house arrest snr Rain across the kolar district People under house arrest snr](https://static-gi.asianetnews.com/images/01esx2vtcwcve62ybz8xqhsvgq/q-jpg_363x203xt.jpg)
ಚಿಕ್ಕಬಳ್ಳಾಪುರ (ನ.13): ಸತತ ಎರಡು ದಿನಗಳಿಂದ ಜಿಲ್ಲೆಯ ವಾತಾವರಣದಲ್ಲಿ ಭಾರೀ ಏರುಪೇರು ಕಂಡಿದ್ದು ಜಿಲ್ಲಾದ್ಯಂತ ಚಂಡಮಾರುತದಿಂದ ಬೀಳುತ್ತಿರುವ ತುಂತರು ಮಳೆಯ ಜನ ಜೀವನಕ್ಕೆ ಸಂಕಷ್ಟಕ್ಕೆ ತಂದರೆ ಚಂಡಮಾರುತ ಸೃಷ್ಟಿಸುತ್ತಿರುವ ಚಿಮು ಚಿಮು ಚಳಿ ಜಿಲ್ಲೆಯ ಜನರನ್ನು ಅಕ್ಷರಶಃ ನಡಗುಸುತ್ತಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿರುವ ಚಂಡ ಮಾರುತ (Cyclone) ಮಳೆಯಿಂದ (Rain) ಜಿಲ್ಲೆಯಲ್ಲಿ ಅಕ್ಷರಶಃ ಜನ ಜೀವನ ಹೈರಾಣಾಗಿದ್ದು ಕೃಷಿ (Agriculture) ಚಟವಟಿಕೆಗಳು ಸ್ತಬ್ಧಗೊಂಡಿದ್ದು ವಿಶೇಷವಾಗಿ ಮೂಡ ಕವಿದ ವಾತಾವರಣ ಹೆಚ್ಚಾಗಿರುವ ಪರಿಣಾಮ ಜಿಲ್ಲೆಯ ಜನರನ್ನು ತುಂತರು ಮಳೆಯು ಹೊರ ಬಾರದೇ ಗೃಹ ಬಂಧನದಲ್ಲಿಸಿದೆ.
2 ವರ್ಷದಿಂದ ಉತ್ತಮ ಮಳೆ
ಹಲವು ವರ್ಷಗಳಿಂದ ಮಳೆಯ ತೀವ್ರ ಕೊರತೆಯಿಂದ ಸದಾ ಉಷ್ಣಾಂಶದ ಹವಮಾನದ ವಾತಾವರಣವನ್ನು ಹೊಂದಿದ್ದ ಜಿಲ್ಲೆ ಎರಡು ವರ್ಷಗಳಿಂದ ಸಮೃದ್ಧ ಮಳೆಯಿಂದ ಸಾಕಷ್ಟುತಂಪಾಗಿದ್ದು ಸದ್ಯ ಚಂಡಮಾರುತ ಸೃಷ್ಠಿಸಿರುವ ತುಂತರು ಮಳೆಯಿಂದ ಜಿಲ್ಲೆಯಲ್ಲಿ ದಿನನಿತ್ಯದ ಚುಟುವಟಿಕೆಗಳಿಗೆ ಮಳೆ ಬ್ರೇಕ್ ಹಾಕಿದೆ. ಅದರಲ್ಲೂ ಚಳಿಯ ತೀವ್ರತೆ ಜೋರಾಗದಿು್ದ ವೃದ್ದರ ಹಾದಿಯಾಗಿ ಮಕ್ಕಳು, ಮಹಿಳೆಯರು ಮನೆಗಳಿಂದ ಹೊರ ಬಾರದ ರೀತಿ ಜಿಲ್ಲೆಯಲ್ಲಿ ಮೂಡ ಕವಿದ ವಾತಾವಣ ಜನರನ್ನು ಚಳಿಯಿಂದ ನಡುಗುತ್ತಿದೆ.
ಮೋಡ ಕವಿದ ಪರಿಸ್ಥಿಯಿಂದ ಮಧ್ಯಾಹ್ನ ಕಳೆದರೂ ಸೂರ್ಯ ಕಾಣದ ಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮ ರೈತರ ದಿನ ನಿತ್ಯದ ಚುವಟಿಕೆಗಳ ಮೇಲೆ ಸಾಕಷ್ಟುದುಷ್ಪರಿಣಾಮ ಬೀರಿದ್ದು, ಹೂವು, ಹಣ್ಣು, ತರಕಾರಿಗಳನ್ನು ಮಾರುಕಟ್ಟೆಗೆ ತರಲು ಮಳೆ ಅಡ್ಡಿಯಾಗಿದೆ. ಮಳೆಯಿಂದ ರೇಷ್ಮೆ, ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಸಾಕಷ್ಟುಹಾನಿಯಾಗುವ ಭೀತಿ ರೈತರಲ್ಲಿ ಆವರಿಸಿದೆ.
ಮಂಜುಗಡ್ಡೆಯಷ್ಟುತಂಪಾದ ನೀರು
ಜಿಲ್ಲೆಯಲ್ಲಿ ಚಂಡಮಾರುತ ಪರಿಣಾಮ ಮನೆಗಳಲ್ಲಿ ಕುಡಿಯುವ ನೀರು ಕೂಡ ತಂಪಾಗಿದೆ. ಬಿಂದಿಗೆಗಳಲ್ಲಿ ಸಂಗ್ರಹಿಸಿಟ್ಟಿರುವ ಕುಡಿಯಲು ಸಾಧ್ಯವಾಗದಷ್ಟುತಂಪಾಗುತ್ತಿದ್ದು ದಾಹ ತೀರಿಸಿಕೊಳ್ಳಲು ಕುಡಿದರೆ ಮೈ ಜುಮ್ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜನರ ಆರೋಗ್ಯದ ಮೇಲೆಯು ಕೂಡ ಚಂಡಮಾರುತ ವ್ಯತಿರಿಕ್ತ ಪರಿಣಾಮ ಬೀರಿದೆ. ಚಳಿಯಿಂದ ಪಾರಾಗಲು ಜನ ಬಿಸಿ ಬಿಸಿ ಟೀ, ಕಾಫಿ, ಬಿಸಿ ನೀರಿನ ಮೊರೆ ಹೋಗುತ್ತಿದ್ದು ವಿಶೇಷವಾಗಿ ಬೋಂಡಾ, ಬಜ್ಜಿ ಮತ್ತಿತರ ಖಾದ್ಯಗಳ ಘಮಘಮಿಸುತ್ತಿವೆ.
ಶೀಥ, ಕೆಮ್ಮು, ನೆಗಡಿ, ಜ್ವರ
ಚಂಡ ಮಾರುತದ ಪರಿಣಾಮ ದಿಢೀರನೆ ಜಿಲ್ಲೆಯ ಹವಮಾನದಲ್ಲಿ ಸಾಕಷ್ಟು ಬದಲಾವಣೆ ಕಂಡಿದ್ದು ತೀವ್ರ ಚಳಿಯ ಪರಿಣಾಮ ಜನತೆ ಶೀಥ, ನೆಗಡಿ., ಕೆಮ್ಮು, ಜ್ವರದಿಂದ ಬಳಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಆಸ್ಪತ್ರೆಗಳ ಹೊರ ರೋಗಿಗಳ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಮಕ್ಕಳಿಗೆ ನೆಗಡಿ, ಶೀಥ ಕಾಣಿಸಿಕೊಂಡಿದ್ದು ಪೋಷಕರನ್ನು ಕಂಗಾಲಾಗಿಸಿದೆ. ಮಕ್ಕಳನ್ನು ಚಳಿಯಿಂದ ಪಾರು ಮಾಡಿ ಬೆಚ್ಚಿಗೆ ಇಡಲು ಪೋಷಕರು ಹರಸಾಹಸ ಮಾಡುತ್ತಿದ್ದಾರೆ.
ತಪಮಾನ 20 ಡಿಗ್ರಿಗೆ ಕುಸಿತ
ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಕನಿಷ್ಠ 22 ರಿಂದ 23 ಡಿಗ್ರಿ ವರೆಗೂ ತಪಮಾನ ಇರುತ್ತಿತ್ತು. ಸದ್ಯ ಚಂಡಮಾರುತದ ಪರಿಣಾಮ ಜಿಲ್ಲೆಯ ತಪಮಾನ ಸದ್ಯ 20 ಡಿಗ್ರಿಗೆ ಕುಸಿದಿದೆ. ಸದ್ಯದ ಹವಮಾನ ಪರಿಸ್ಥಿತಿ ಗಮನಿಸಿದರೆ ಇನ್ನಷ್ಟುಕುಸಿಯುವ ಸಾಧ್ಯತೆ ಇದೆ. ಇದರ ಪರಿಣಾಮ ಜಿಲ್ಲೆಯಲ್ಲಿ ಚಳಿತ ಅಬ್ಬರ ಜೋರಾಗಿ ಜನರನ್ನು ನಡುಗಿಸುತ್ತಿದೆ.
ಜಿಲ್ಲಾದ್ಯಂತ ಮಳೆ: ಗೃಹ ಬಂಧನದಲ್ಲಿ ಜನತೆ
ಸತತ ಎರಡು ದಿನಗಳಿಂದ ಜಿಲ್ಲೆಯ ವಾತಾವರಣದಲ್ಲಿ ಭಾರೀ ಏರುಪೇರು
ಚಿಮು ಚಿಮು ಚಳಿಗೆ ನಡುಗುತ್ತಿದೆ ಜಿಲ್ಲೆ
ಚಂಡಮಾರುತ ಅಬ್ಬರಕ್ಕೆ ಜಿಲ್ಲಾದ್ಯಂತ ತುಂತರು ಮಳೆ
ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಕನಿಷ್ಠ 22 ರಿಂದ 23 ಡಿಗ್ರಿ ವರೆಗೂ ತಪಮಾನ ಇರುತ್ತಿತ್ತು. ಸದ್ಯ ಚಂಡಮಾರುತದ ಪರಿಣಾಮ ಜಿಲ್ಲೆಯ ತಪಮಾನ ಸದ್ಯ 20 ಡಿಗ್ರಿಗೆ