ಬೆಂಗಳೂರು [ಮಾ.18]:  ನೈಋುತ್ಯ ರೈಲ್ವೆಯು ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ರೈಲು ನಿಲ್ದಾಣಗಳಿಗೆ ಪ್ರಯಾಣಿಕರನ್ನು ಹೊರತುಪಡಿಸಿ, ಸಾರ್ವಜನಿಕರ ಸಂಖ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಕ್ರಮ ಕೈಗೊಳ್ಳುತ್ತಿದೆ.

 ರಾಜಧಾನಿಯ ಐದು ಪ್ರಮುಖ ರೈಲು ನಿಲ್ದಾಣಗಳ ಫ್ಲಾಟ್‌ ಫಾಮ್‌ರ್‍ ಟಿಕೆಟ್‌ ದರವನ್ನು 10ರಿಂದ 50 ರು. ರವರೆಗೆ ಹೆಚ್ಚಳ ಮಾಡಿದೆ.

ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಬೆಂಗಳೂರು ದಂಡು, ಯಶವಂತಪುರ, ಯಲಹಂಕ ಮತ್ತು ಕೆ.ಆರ್‌.ಪುರ ರೈಲು ನಿಲ್ದಾಣಗಳಿಗೆ ಈ ಫ್ಲಾಟ್‌ಫಾಮ್‌ರ್‍ ಟಿಕೆಟ್‌ ದರ ಮಾ.18ರಿಂದ ಜಾರಿಗೆ ಬರಲಿದೆ.

 ಮಾ.31ರವರೆಗೆ ಜಾರಿಯಲ್ಲಿ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.