ಬೆಂಗಳೂರು(ಮೇ.11): ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ದೇಶ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿದ್ದ ಜನರನ್ನ ಕರೆತರಲು ಪ್ಯಾಸೆಂಜರ್ ರೈಲು ಓಡಾಟಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಹಿನ್ನಲೆ ನೀಡಿದೆ. ಹೀಗಾಗಿ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಸಿದ್ಧತೆ ಕುರಿತು ರೈಲ್ವೆ ಐಜಿಪಿ ಡಿ ರೂಪ ಅವರು ಪರಿಶೀಲನೆ ನಡೆಸಿದ್ದಾರೆ. 

ಸಿದ್ಧತೆ ಯಾವ ರೀತಿಯಾಗಿದೆ ತಯಾರಿಗಳು ಹೇಗೆ ತಡೆಯುತ್ತಿದೆ ಎಂಬುದರ ಐಜಿಪಿ ಡಿ ರೂಪ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿಯನ್ ಪಡೆದುಕೊಂಡಿದ್ದಾರೆ. ನಾಳೆ(ಮಂಗಳವಾರ) ಒಂದು ದಿನ ಮಾತ್ರ ಬೆಂಗಳೂರಿಂದ ದೆಹಲಿಗೆ ವಿಶೇಷ ಪ್ಯಾಸೆಂಜರ್ ರೈಲು ಪ್ರಯಾಣ ಬೆಳೆಸಲಿದೆ. ಒಂದು ರೈಲಿನಲ್ಲಿ 1200 ಮಂದಿಗೆ ಮಾತ್ರ ಪ್ರಯಾಣಿಸಲು ಅವಕಾಶಹ ಕಲ್ಪಿಸಲಾಗಿದೆ. ಒಂದು ಬೋಗಿಯಲ್ಲಿ ಕೇವಲ 52 ಮಂದಿ ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅದು ಕೂಡ ಎಲ್ಲ ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು ಕಡ್ಡಾಯವಾಗಿದೆ. 

ಬೆಂಗಳೂರು ಸೇರಿ 15 ಕಡೆಗೆ ದಿಲ್ಲಿಯಿಂದ ರೈಲು ; ಇಂದು ಸಂಜೆ 4ರಿಂದ ಆನ್‌ಲೈನ್‌ ಬುಕಿಂಗ್‌ ಶುರು

ಕೇವಲ ಆನ್ ಲೈನ್‌ನಲ್ಲಿ ಮಾತ್ರ ಟಿಕೆಟ್ ಬುಕ್ ಮಾಡಬಹುದಾಗಿದೆ. ಇಂದು(ಸೋಮವಾರ) ಸಂಜೆ 4 ಗಂಟೆಯಿಂದ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ. ಯಾವ ಟಿಕೆಟ್ ಕೌಂಟರ್‌ಗಳೂ ಸಹ ತೆರೆದಿರುವುದಿಲ್ಲ. ಕೇವಲ ಆನ್‌ಲೈನಮ್‌ನಲ್ಲಿ ಮಾತ್ರ ಬುಕಿಂಗ್ ಮಾಡಬಹುದಾಗಿದೆ.

 

ಈ ಸಂಬಂಧ ಟ್ವೀಟ್‌ ಮಾಡಿರುವ ಐಜಿಪಿ ಡಿ ರೂಪಾ ಅವರು, ಇಂದು ಸಂಜೆ 4 ಗಂಟೆಯಿಂದ ನಾಳೆ ರಾತ್ರಿ 8 ಗಂಟೆಯರೆಗೆ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್‌ ಮಾಡಬಹುದಾಗಿದೆ. ನಾಳೆ(ಮೇ.12) ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ದೆಹಲಿಗೆ ಒಂದು ರೈಲು ಮಾತ್ರ ಪ್ರಯಾಣ ಬೆಳೆಸಲಿದೆ. ಹೀಗಾಗಿ ಆನ್‌ಲೈನ್‌ನಲ್ಲಿ ಟಿಕೆಟ್‌ ಮಾಡಿದವರು ಮಾತ್ರ ರೈಲು ನಿಲ್ದಾಣಕ್ಕೆ ಆಗಮಿಸಬೇಕು, ರೈಲು ನಿಲ್ದಾಣದಲ್ಲಿ ಟಿಕೆಟ್‌ ಕೌಂಟರ್‌ಗಳು ತೆರೆದಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.