Gadag: ಗ್ಯಾಸ್ ಫಿಲ್ಲಿಂಗ್ ಅಕ್ರಮ ಅಡ್ಡೆ ಮೇಲೆ ಆಹಾರ ಇಲಾಖೆ ಅಧಿಕಾರಿಗಳಿಂದ ದಾಳಿ!
ಬೆಟಗೇರಿಯ ಕುರಟ್ಟಿಪೇಟಿಯಲ್ಲಿದ್ದ ಅಕ್ರಮ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್ ಅಡ್ಡೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು. ಆಹಾರ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ನಾಯಕ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ವರದಿ: ಗಿರೀಶ್ ಕಮ್ಮಾರ್, ಗದಗ
ಗದಗ (ಏ.30): ಬೆಟಗೇರಿಯ ಕುರಟ್ಟಿಪೇಟಿಯಲ್ಲಿದ್ದ ಅಕ್ರಮ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್ (Gas Filling) ಅಡ್ಡೆ ಮೇಲೆ ಅಧಿಕಾರಿಗಳು ದಾಳಿ (Raid) ನಡೆಸಿದರು. ಆಹಾರ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ನಾಯಕ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ಸ್ಥಳದಲ್ಲಿದ್ದ 14.2 ಕೆಜಿಯ 14 ಸಿಲಿಂಡರ್, 19 ಕೆಜಿಯ 2 ಕರ್ಮರ್ಷಿಯಲ್ ಸಿಲಿಂಡರ್ ಸೇರಿದಂತೆ ಫಿಲ್ಲಿಂಗ್ ಮಷಿನ್ ವಶಕ್ಕೆ ಪಡೆಯಲಾಗಿದೆ. ಭಾರತ್ ಕಂಪನಿಗೆ ಸೇರಿದ್ದ ಸಿಲಿಂಡರ್ ಬಳಸಿ ಇಲ್ಲಿ ಫಿಲ್ಲಿಂಗ್ ನಡೀತಿತ್ತು. ಸಾರ್ವಜನಿಕರ ದೂರು ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳು, ಅಕ್ರಮ ಸಿಲಿಂಡರ್ ಅಡ್ಡೆ ಮಾಲೀಕ ಮಲ್ಲಿಕರ್ಜುನ್ ಕುಂಬಾರ್, ಗಿರೀಶ್ ಕುಂಬಾರ್ ಎಂಬಾತರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಆಟೋ ಸೀಜ್‌ಗೆ ಮುಂದಾಗಿದ್ದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಗರಂ: ವಾಟರ್ ಪಂಪ್ ಬಳಸಿ ತಯಾರಿಸಲಾಗಿದ್ದ ಉಪಕರಣ ಬಳಸಿ ಸಿಲಿಂಡರ್ ನಲ್ಲಿನ ಗ್ಯಾಸನ್ನ ಆಟೋಗಳಿಗೆ ತುಂಬಲಾಗ್ತಿತ್ತು. ಸಿಎನ್‌ಜಿ ಬಂಕ್‌ನಲ್ಲಿ ಕೆಜಿಗೆ 120 ಇದ್ರೆ, ಅಕ್ರಮ ದಂಧೆಕೋರರು 90 ರೂಪಾಯಿಗೆ ಗ್ಯಾಸ್ ಮಾರಾಟ ಮಾಡ್ತಿದ್ರು. ಹೀಗಾಗಿ ಆಟೋ ಮಾಲೀಕರು ಅಕ್ರಮ ದಂಧೆಕೋರರ ಬಳಿ ಗ್ಯಾಸ್ ಫಿಲ್ ಮಾಡಿಸುತ್ತಿದ್ದರು. ದಾಳಿ ವೇಳೆಯೂ ಕೆಲ ಆಟೋ ಡ್ರೈವರ್ಸ್ ಗ್ಯಾಸ್ ಫಿಲ್ ಮಾಡಿಸುತ್ತಿದ್ದರು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಎರಡು ಆಟೋಗಳು ಸ್ಥಳದಲ್ಲಿದ್ದವು.. ಆವೂಗಳನ್ನ ಸೀಜ್ ಮಾಡೋ ಬಗ್ಗೆ ಅಧಿಕಾರಿಗಳು ಚಿಂತಿಸಿದರು. ಇದ್ರಿಂದಾಗಿ ಆಟೋ ಚಾಲಕರು ಆಕ್ರೋಶಗೊಂಡಿದರು. ಇಷ್ಟು ದಿನ ಇಲ್ಲಿ ಅಕ್ರಮ ನಡೆಯೋದಕ್ಕೆ ಯಾಕೆ ಬಿಟ್ರಿ ಅಂತಾ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಆಟೋಗಳನ್ನ ಸೀಜ್ ಮಾಡಿದ್ರೆ ಹೋರಾಟ ಮಾಡೋದಾಗಿಯೂ ಎಚ್ಚರಿಕೆ ನೀಡಿದರು.
Gadaga ಅಪ್ರಾಪ್ತೆಯ ಕಿಡ್ನಾಪ್ ಮಾಡಿ ಅತ್ಯಾಚಾರ, ಬಿಜೆಪಿ ಮುಖಂಡನ ವಿರುದ್ಧ ಆರೋಪ!
ಸ್ಮೈಲ್ ಮಾಡ್ತಾ ಪೊಲೀಸ್ ಜೀಪ್ ಏರಿದ ಅಕ್ರಮ ಸರದಾರ ಗಿರೀಶ್ ಕುಂಬಾರ್: ಕುರಟ್ಟಿಪೇಟೆಯಲ್ಲಿ ಕಳೆದ ಕೆಲ ವರ್ಷದಿಂದ ಅಕ್ರಮ ಸಿಲಿಂಡರ್ ಫಿಲ್ಲಿಂಗ್ ದಂಧೆ ನಡೆಯುತ್ತೆ. ಇಲ್ಲಿ ಗಿರೀಶ್, ಮಲ್ಲಿಕಾರ್ಜುನ್ ಕುಂಬಾರ ದಂಧೆ ನಡೆಸ್ತಿದ್ರು.. ದಾಳಿ ನಡೆದಾಗಲೂ ಕೂಲಾಗಿದ್ದ ಗಿರೀಶ್ ನಗುನಗುತ್ತಲೇ ಓಡಾಡ್ಕೊಂಡಿದ್ದ. ಯಾರೂ ಏನೂ ಮಾಡಲ್ಲ ಅನ್ನೋ ರೇಂಜಿಗೆ ಸ್ಮೈಲ್ ಮಾಡ್ತಾನೆ ಪೊಲೀಸ್ ಜೀಪೂ ಏರಿದ್ದ. ಈ ಹಿಂದೆಯೂ ಇದೇ ಅಡ್ಡೆ ಮೇಲೆ ದಾಳಿ ನಡೆದಿತ್ತಾದರೂ ಗಿರೀಶ್ ಮತ್ತೊಮ್ಮೆ ಅಡ್ಡೆ ಓಪನ್ ಮಾಡಿ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್ ಮಾಡ್ತಿದ್ದ.
ನರಗುಂದದಲ್ಲಿ ಹೈಡ್ರಾಮಾ : ಸಚಿವರ ಮನೆ ಮುಂದೆ ಧರಣಿ ನಡೆಸಲು ಬಂದ ದಿಂಗಾಲೇಶ್ವರ ಶ್ರೀಗೆ ತಡೆ
ಒಂದೇ ಅಡ್ಡೆ ಮೇಲೆ ದಾಳಿ: ಕುರಟ್ಟಿಪೇಟೆಯಷ್ಟೆಯಲ್ಲ. ನಗರದ ಹಲವೆಡೆ ಅಕ್ರಮ ಫಿಲ್ಲಿಂಗ್ ದಂಧೆ ನಡೆಯುತ್ತೆ. ಆದರೆ ಅಧಿಕಾರಿಗಳು ಒಂದೇ ಕಡೆ ದಾಳಿ ಮಾಡಿದ್ದಾರೆ. ನಗರದ ಜೈನ್ ಸ್ಕೂಲ್ ಬಳಿ ಮನೆಯೊಂದ್ರದಲ್ಲೇ ಫಿಲ್ಲಿಂಗ್ ನಡೆಯುತ್ತೆ.. ನಗರದ ಕೂಗಳತೆ ದೂರದಲ್ಲಿನ ಮಲ್ಲಸಮುದ್ರ ಗ್ರಾಮದಲ್ಲೂ ಅಕ್ರಮ ಫಿಲ್ಲಿಂಗ್ ದಂಧೆ ನಡೀತಿದೆ.. ಸುರಕ್ಷತೆ ಕ್ರಮಗಳನ್ನ ಬಳಸದೇ ಅವ್ಯಾಹತವಾಗಿ ಸಿಲಿಂಡರ್ ಫಿಲ್ ಮಾಡಲಾಗುತ್ತೆ..ಅಧಿಕಾರಿಗಳು ಒಂದೆಡೆ ರೈಡ್ ಮಾಡೋ ಮೂಲಕ ಅಕ್ರಮ ದಂಧೆಕೋರರಲ್ಲಿ ನಡುಕ ಹುಟ್ಟಿಸುವ ಕೆಲಸ ಆರಂಭ ಮಾಡಿದರಾರೆ.. ಬರೋ ದಿನಗಳಲ್ಲಿ ಮತ್ತಷ್ಟು ಗ್ಯಾಸ್ ಫಿಲ್ಲಿಂಗ್ ಅಡ್ಡೆ ಮೇಲೆ ರೈಡ್ ಮಾಡ್ಬೇಕು ಅನ್ನೋದು ಜನರ ಒತ್ತಾಯ.