ಗುಳೆ ಹೋಗುವುದನ್ನ ತಪ್ಪಿಸಲು ರಾಯಚೂರು ಜಿ.ಪಂ. ಶತಪ್ರಯತ್ನ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾರ್ಮಿಕರಿಗೆ ಉದ್ಯೋಗ
ರಾಜ್ಯದಲ್ಲಿಯೇ ಅತೀ ಹೆಚ್ಚು ನೀರಾವರಿ ಹೊಂದಿರುವ ಜಿಲ್ಲೆ ರಾಯಚೂರಿನಲ್ಲಿ ಗುಳೆ ಹೋಗುವುದು ಕಾಮನ್ ಆಗಿದೆ. ಜನರು ಊರು ಬಿಟ್ಟು ಕೆಲಸ ಅರಸಿ ಮಹಾನಗರಗಳಾದ ಬೆಂಗಳೂರು, ಮುಂಬೈ ಮತ್ತು ಪೂನಾ ಹಾಗೂ ಹೈದರಾಬಾದ್ ಗೆ ಗುಳೆ ಹೋಗಬಾರದು ಅಂತ ನರೇಗಾದಡಿ ಕಾರ್ಮಿಕರಿಗೆ ಕೆಲಸ ನೀಡಿದೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್
ರಾಯಚೂರು (ಡಿ.19): ರಾಜ್ಯದಲ್ಲಿಯೇ ಅತೀ ಹೆಚ್ಚು ನೀರಾವರಿ ಹೊಂದಿರುವ ಜಿಲ್ಲೆ ರಾಯಚೂರಿನಲ್ಲಿ ಗುಳೆ ಹೋಗುವುದು ಕಾಮನ್ ಆಗಿದೆ. ಜನರು ಊರು ಬಿಟ್ಟು ಕೆಲಸ ಅರಸಿ ಮಹಾನಗರಗಳಾದ ಬೆಂಗಳೂರು, ಮುಂಬೈ ಮತ್ತು ಪೂನಾ ಹಾಗೂ ಹೈದರಾಬಾದ್ ಗೆ ಗುಳೆ ಹೋಗಬಾರದು ಅಂತ ನರೇಗಾದಡಿ ಕಾರ್ಮಿಕರಿಗೆ ಕೆಲಸ ನೀಡಿದೆ. ಹೀಗಾಗಿ ರಾಯಚೂರು ಜಿಲ್ಲೆಯಾದ್ಯಂತ ಏಪ್ರಿಲ್ ತಿಂಗಳಿಂದ ಡಿಸೆಂಬರ್ 18ರವರೆಗೆ ಸುಮಾರು 1 ಕೋಟಿ 4 ಸಾವಿರದ 59 ಮಾನವ ದಿನಗಳ ಸೃಜಿಸಿ ಇಡೀ ರಾಜ್ಯದಲ್ಲಿಯೇ ರಾಯಚೂರು ಪ್ರಥಮ ಸ್ಥಾನದಲ್ಲಿದೆ. ಇನ್ನೂ ಬೆಳಗಾವಿ 79,94,524 (ದ್ವಿತೀಯ ಸ್ಥಾನ), ಕೊಪ್ಪಳ 66,67,166 (ತೃತೀಯ ಸ್ಥಾನ), ಬಳ್ಳಾರಿ 59,29,693 (ನಾಲ್ಕನೇ ಸ್ಥಾನ), ವಿಜಯನಗರ 51,93,456 (ಐದನೇ ಸ್ಥಾನ)ದಲ್ಲಿದೆ.
ಗುಳೆ ತಡೆಯುವಲ್ಲಿ ಯಶಸ್ವಿ: ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ರಾಯಚೂರು ಜಿಲ್ಲೆಯಲ್ಲಿನ ಗ್ರಾಮೀಣ ಪ್ರದೇಶದ ಜನರು ತಮ್ಮ ಊರಲ್ಲಿ ಕೆಲಸವಿಲ್ಲದ ಕಾರಣದಿಂದಾಗಿ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ರಾಯಚೂರು ಜಿ.ಪಂ. ನರೇಗಾ ಯೋಜನೆಯಡಿ ಈ ಬಾರಿ ಐಇಸಿ ಚಟುವಟಿಕೆಯಡಿ ಹೆಚ್ಚು ಪ್ರಚಾರ ಕಾರ್ಯಕ್ರಮಗಳನ್ನು ಮಾಡಿ ಕೂಲಿಕಾರರಿಗೆ ನರೇಗಾದಿಂದ ಸಿಗುವ ಅಗತ್ಯ ಮಾಹಿತಿ ಒದಗಿಸಲಾಯಿತು. ಜೊತೆಗೆ 2024ರ ಏಪ್ರಿಲ್ 1ರಿಂದ ಕೇಂದ್ರ ಸರಕಾರವು ನರೇಗಾ ಕೂಲಿ ಮೊತ್ತವನ್ನು 316 ರಿಂದ 349ರೂ.ಗೆ ಹೆಚ್ಚಳ ಮಾಡಿದೆ. ಈ ಬಗ್ಗೆ ಕೂಲಿಕಾರರಿಗೆ ಅರಿವು ಮೂಡಿಸಿ ಯೋಜನೆಯತ್ತ ಕರೆತಂದು ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲಸ ನೀಡಲಾಗುತ್ತಿದೆ.
ಅದರಂತೆ ಬೆಳಗಾವಿ ಹಾಗೂ ಕಲಬುರಗಿ ವಿಭಾಗ ವ್ಯಾಪ್ತಿಯ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಳ ಹಿನ್ನೆಲೆಯಲ್ಲಿ ನರೇಗಾ ಕೆಲಸದಲ್ಲಿ ಶೇ.30ರಷ್ಟು ರಿಯಾಯತಿ ಸೌಲಭ್ಯವನ್ನು ರಾಜ್ಯ ಸರಕಾರ ನೀಡಿದೆ. ಈ ಬಗ್ಗೆ ರಾಯಚೂರು ಜಿಲ್ಲೆಯ ಕೂಲಿಕಾರರಿಗೆ ಹೆಚ್ಚು ಮಾಹಿತಿ ನೀಡಿದ್ದರಿಂದ ಜನ ಗೂಳೆ ಹೋಗುವುದನ್ನು ಬಿಟ್ಟು ನರೇಗಾದಡಿ ಇದ್ದೂರಲ್ಲೇ ಕೆಲಸ ಮಾಡಿಕೊಂಡು ನೆಮ್ಮದಿಯ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಮಹಿಳಾ ಸಬಲೀಕರಣ ಅಭಿಯಾನದಲ್ಲಿ ಮಹಿಳಾ ಭಾಗವಹಿಸುವಿಕೆ ಹೆಚ್ಚಿಸಲು ಜಿಲ್ಲೆಯಾದ್ಯಂತ ಗ್ರಾಮ ಪಂಚಾಯತ್ ಮಟ್ಟದಲ್ಲಿ ಐಇಸಿ ಚಟುವಟಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಶತ 51.81% ಮಹಿಳೆಯರಿಗೆ ನರೇಗಾ ಯೋಜನೆಯಡಿ ಉದ್ಯೋಗ ನೀಡುವಲ್ಲಿ ಯಶಸ್ಸಿಯಾಗಿದೆ.
ಈಶ ಫೌಂಡೇಶನ್ ಮೈದಾನದಲ್ಲಿ ಗ್ರಾಮೋತ್ಸವದಲ್ಲಿ ಪಾಲ್ಗೊಂಡ ನಟಿ ಶ್ರೀನಿಧಿ ಶೆಟ್ಟಿ
ಲಿಂಗತ್ವ ಅಲ್ಪಸಂಖ್ಯಾತರಿಗೂ ಉದ್ಯೋಗ ಖಾತ್ರೆಯಲ್ಲಿ ಕೆಲಸ: ರಾಯಚೂರು ಜಿಲ್ಲೆಯಲ್ಲಿ ಎರಡು ದೊಡ್ಡ ನದಿಗಳಾದ ಕೃಷ್ಣ ಮತ್ತು ತುಂಗಭದ್ರಾ ನದಿ ಹರಿದ್ರು. ಕುಡಿಯುವ ನೀರಿಗಾಗಿ ಪರದಾಟ ನಡೆಸುವ ಹತ್ತಾರು ಗ್ರಾಮಗಳು ಇವೆ. ಅಷ್ಟೇ ಅಲ್ಲದೇ ರಾಯಚೂರು ಜಿಲ್ಲೆಯ ವಿವಿಧೆಡೆ ಲಿಂಗತ್ವ ಅಲ್ಪಸಂಖ್ಯಾತರು ಸಹ ಇದ್ದು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಅವರಿಗೆ ಗುರುತಿಸಿ ಅವರಿಗೆ ಹೊಸ ಉದ್ಯೋಗ ಖಾತ್ರಿ ಚೀಟಿ ಜಿಲ್ಲೆಯಾದ್ಯಂತ 24 ಜನರಿಗೆ 100 ದಿನಗಳ ಕಾಲ ಉದ್ಯೋಗ ಸಹ ನೀಡಿದ್ದಾರೆ. ಇನ್ನೂ 1060 ವಿಕಲಾಂಗರಿಗೂ ಹೊಸ ಉದ್ಯೋಗ ಚೀಟಿ ನೀಡಿ ಸ್ವಾಲಂಬಿಯಾಗಿ ಕೆಲಸ ನಿರ್ವಹಿಸಲು ಉದ್ಯೋಗ ಖಾತ್ರಿ ಸಹಕಾರಿಯಾಗಿದೆ.