ಮೊರಾರ್ಜಿ ವಸತಿ ಶಾಲೆಯಲ್ಲಿ ಹಲ್ಲಿ ಬಿದ್ದ ಪಲಾವ್‌ ತಿಂದು 45 ಮಕ್ಕಳು ಅಸ್ವಸ್ಥ; ಇಬ್ಬರ ಸ್ಥಿತಿ ಗಂಭೀರ

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬೆಳಗ್ಗೆ ತಿಂಡಿಗೆ ಮಾಡಿದ್ದ ಪಲಾವ್‌ನಲ್ಲಿ ಹಲ್ಲಿ ಬಿದ್ದಿದೆ. ಈ ಪಲಾವ್ ತಿಂದ 45 ಮಕ್ಕಳು ತೀರ್ವ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Raichur Morarji Desai Residential School Lizard in morning tiffin 45 children fell ill sat

ರಾಯಚೂರು (ಜು.24): ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬೆಳಗ್ಗೆ ತಿಂಡಿಗೆ ಮಾಡಿದ್ದ ಪಲಾವ್‌ನಲ್ಲಿ ಹಲ್ಲಿ ಬಿದ್ದಿದೆ. ಈ ಪಲಾವ್ ತಿಂದ 45 ಮಕ್ಕಳು ತೀರ್ವ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಳಗ್ಗೆ ಹಲ್ಲಿ ಬಿದ್ದ ಪಲಾವ್ ಸೇವಿಸಿ ಹಾಸ್ಟೆಲ್ ನ 45 ಮಕ್ಕಳು ಅಸ್ವಸ್ಥರಾಗಿದ್ದಾರೆ. ರಾಯಚೂರು ‌ನಗರದ ಚಂದ್ರಬಂಡಾ ಹಾಸ್ಟೆಲ್ ನಲ್ಲಿ ಘಟನೆ ನಡೆದಿದೆ. ರಾಯಚೂರು ನಗರದ ಅಲ್ಪಸಂಖ್ಯಾತರ ಇಲಾಖೆಗೆ ಸೇರಿದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಘಟನೆ ಸಂಭವಿಸಿದೆ. ತಿಂಡಿ ಸೇವನೆ ಮಾಡಿದ ಮಕ್ಕಳಿಗೆ ವಾಂತಿ ಭೇದಿ ಕಾಣಿಸಿಕೊಂಡಿದ್ದು, ಅಸ್ವಸ್ಥರಾಗಿ ಬಿದ್ದಿದ್ದಾರೆ. ಕೆಲ ಮಕ್ಕಳಿಗೆ ತಲೆ ಸುತ್ತು ಬಂದಿದ್ದು, ನಡೆಯಲು ಸಾಧ್ಯವಾಗದೇ ನರಳಾಡಿದ್ದಾರೆ. ಕೂಡಲೇ ಎಚ್ಚೆತ್ತ ಹಾಸ್ಟೆಲ್ ಸಿಬ್ಬಂದಿ ಎಲ್ಲ ಮಕ್ಕಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ‌ದಾಖಲು ಮಾಡಿದ್ದಾರೆ.

500 ಕಿಮೀ ದೂರ ಹೋದರೂ ಕಚ್ಚಿದ ನಾಗಪ್ಪ, ಇನ್ನೆಲ್ಲಿಗೆ ಹೋಗಲೆಂದು ಯುವಕ ಕಣ್ಣೀರು!

ಇನ್ನು ಅಸ್ವಸ್ಥಗೊಂಡ ಮಕ್ಕಳ ಪೈಕಿ ಇಬ್ಬರು ಮಕ್ಕಳ ಸ್ಥತಿ ಗಂಭೀರವಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಪಂಚಾತಿಯಿ ಸಿಇಒ ರಾಹುಲ್ ಪಾಂಡ್ವೆ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯ ಸ್ಥಿತಿಯ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ಇನ್ನಿ ರಿಮ್ಸ್ ವೈದ್ಯರಿಂದ ಅಸ್ವಸ್ಥಗೊಂಡ ಮಕ್ಕಳ ಆರೋಗ್ಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇನ್ನು ಹಾಸ್ಟೆಲ್ ಸಿಬ್ಬಂದಿಗೆ ಇದಕ್ಕೆ ಕಾರಣವೇನೆಂದು ಕೇಳಿದಾಗ ಎಲ್ಲ ಪಲಾವ್ ಅನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ ಹಲ್ಲಿ ಬಿದ್ದಿರುವುದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹಲ್ಲಿ ಬಿದ್ದ ಆಹಾರ ತಿಂದ ಮಕ್ಕಳಿಗೆ ವಾಂತಿ, ಬೇಧಿ, ತಲೆ ನೋವು, ಹೊಟ್ಟೆನೋವು, ತಲೆ ತಿರುಗುವಿಕೆ ಶುರುವಾಗಿದೆ. ಇನ್ನು ಹಲ್ಲಿ ಬಿದ್ದ ಪಲಾವ್ ಅನ್ನು ಹಾಸ್ಟೆಲ್‌ನ 400ಕ್ಕೂ ಅಧಿಕ ವಿದ್ಯಾರ್ಥಿಗಳು ಸೇವನೆ ಮಾಡಿದ್ದಾರೆ. ಆದರೆ, ಅದರಲ್ಲಿ 45 ಮಕ್ಕಳಲ್ಲಿ ಮಾತ್ರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಈಗ ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಉಳಿದಂತೆ ಎಲ್ಲ ಮಕ್ಕಳ ಆರೋಗ್ಯ ಸ್ಥಿತಿಯ ಬಗ್ಗೆಯೂ ನಿಗಾವಹಿಸಲಾಗಿದೆ ಎಂದು ಹಾಸ್ಟೆಲ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಎಲ್ಲ ಅನಾರೋಗ್ಯದಿಂದ ಬಳಲುತ್ತಿದ್ದ ಎಲ್ಲ ಮಕ್ಕಳಿಗೆ ಚಿಕಿತ್ಸೆ ಮುಂದುವರೆಸಲಾಗುತ್ತದೆ ಎಂದು ಹಾಸ್ಟೆಲ್ ವಾರ್ಡನ್ ಮಾಹಿತಿ ನೀಡಿದ್ದಾರೆ.

Bengaluru: ವೈಯಕ್ತಿಕ ಮನಸ್ತಾಪ ಹಿನ್ನೆಲೆ ನ್ಯಾಯಾಲಯದಲ್ಲೇ ಗೆಳತಿಗೆ ಚಾಕು ಇರಿದ ರಿಯಲ್ ಎಸ್ಟೇಟ್ ಉದ್ಯಮಿ!

ಬೆಳಗಾವಿಯಲ್ಲಿ ಶಾಲಾ ಮಕ್ಕಳ ಬಸ್ ಪಲ್ಟಿ: ಬೆಳಗಾವಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಶಾಲಾ ವಾಹನ ಪಲ್ಟಿ, ನಾಲ್ವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. 40ಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳು ಸಾಗಿಸುತ್ತಿದ್ದ ಖಾಸಗಿ  ಸಂಸ್ಥೆಗೆ ಸೇರಿದ ಬಸ್ ಇದಾಗಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿಬಿದ್ದಿದೆ. ಮರಡಿಮಠ ಗ್ರಾಮದ ಜೈ ಹನುಮಾನ್ ಸಂಜೀವ ನಾಯಕ‌ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದ ಶಾಲಾ ಬಸ್ ಸುತ್ತಲಿನ ಹಳ್ಳಿಗಳಾದ ಮಾವನೂರ ಮೇಲ್ಮನಹಟ್ಟಿ, ಗೋಡಚಿನಮಲ್ಕಿ ಗ್ರಾಮದಿಂದ ಎಲ್ ಕೆಜಿಯಿಂದ 8ನೇ ತರಗತಿವರೆಗೆ ಓದುತ್ತಿದ್ದ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದು, ಬಸ್‌ನಲ್ಲಿದ್ದ ಬಹುತೇಕ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ, ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಗೋಕಾಕ ಗ್ರಾಮೀಣ ಠಾಣೆ‌‌‌ ಪೋಲೀಸ್ ಭೇಟಿ, ಪರಿಶೀಲನೆ ಮಾಡಿದ್ದಾರೆ. ಗೋಕಾಕ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Raichur Morarji Desai Residential School Lizard in morning tiffin 45 children fell ill sat

Latest Videos
Follow Us:
Download App:
  • android
  • ios