ಬೀದರ್ (ಆ. 13): ರಾಹುಲ್ ಗಾಂಧಿ ಜನಧ್ವನಿ. ಅಭಿನಂದನಾ ಸಮಾವೇಶಕ್ಕಾಗಿ ಬೀದರ್ ಗೆ ಆಗಮಿಸಿದ್ದಾರೆ. ಸಮಾವೇಶದಲ್ಲಿ ಬಿಜೆಪಿ ನಾಯಕರಿಗೆ ರಾಹುಲ್ ಸವಾಲ್ ಹಾಕಿದ್ದಾರೆ. 

ರೆಫೇಲ್ ಡೀಲ್ ವಿಚಾರದಲ್ಲಿ ನೀವು ಎಲ್ಲಿ ಕರೆದರು ಬಂದು ಚರ್ಚಿಸಲು ಸಿದ್ಧ. ನಿಮಗೆ ಧಮ್ ಇದ್ರೆ, ತಾಕತ್ತಿದ್ರೆ ಮೋದಿ ಅವರನ್ನ ನನ್ನ ಮುಂದೆ ತಂದು ನಿಲ್ಲಿಸಿ. ರೆಫೇಲ್ ಡೀಲ್ ಬಗ್ಗೆ ನೇರಾ ನೇರ ಚರ್ಚೆಯಾಗಲಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 

ಕೇಂದ್ರ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ರಾಷ್ಟ್ರದ ಜನರಿಗೆ ಸುಳ್ಳು ಹೇಳಿದ್ದಾರೆ. ಒಪ್ಪಂದಲ್ಲಿ ಹೇಳಲಾಗಿರುವ ಯುದ್ಧ ವಿಮಾನಗಳ ಬೆಲೆಯನ್ನ ಬಹಿರಂಗವಾಗಿ ಹೇಳಬಹುದು. ನಾನು ಫ್ರಾನ್ಸ್ ಅಧ್ಯಕ್ಷರನ್ನೇ  ಕೇಳಿದ್ದೇನೆ. ಭಾರತ ಬಯಸಿದರೆ ಯುದ್ಧ ವಿಮಾನಗಳ ಬೆಲೆಯನ್ನ ಬಹಿರಂಗಪಡಿಸಬಹುದು ಎಂದಿದ್ದರು. ಈ ಬಗ್ಗೆ ಚರ್ಚಿಸಿದ್ರೆ ಮೋದಿ ಅವರನ್ನ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಾಗಲಿಲ್ಲ. ಕಳ್ಳತನ ಮಾಡಿದವರಿಗೆ ಹೀಗೆ ಕಣ್ಣಲ್ಲಿ ಕಣ್ಣಟ್ಟು ನೋಡಲು ಸಾಧ್ಯವಾಗುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 

ಬಸವಣ್ಣನ ಕರ್ಮ ಭೂಮಿಯಲ್ಲೇ ಬಸವಣ್ಣನನ್ನ ರಾಹುಲ್ ಗಾಂಧಿ ಮರೆತಿದ್ದಾರೆ.  ಈ ಹಿಂದೆ ತಮ್ಮ ಪ್ರತಿ ಭಾಷಣದಲ್ಲಿ ಬಸವಣ್ಣನ ಹೆಸರು ಉಲ್ಲೇಖಿಸಿ ಬಸವಣ್ಣನವರ ವಚನಗಳನ್ನ‌ ಹೇಳುತ್ತಿದ್ದ ರಾಹುಲ್ ಇಂದು ಅವರನ್ನು ಮರೆತಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಸವಣ್ಣನವರ ನುಡಿದಂತೆ ನಡೆ ಎಂಬ ವಚನ ಪ್ರಸ್ತಾಪಿಸಿದ್ದರು.