ಬೆಂಗಳೂರು [ಸೆ.08]: ಒಂದೇ ಬಸ್ಸಿನಲ್ಲಿ ಮುನಿಸಿಕೊಂಡ ಮುಖಂಡರಿಬ್ಬರು ಪ್ರಯಾಣಿಸಿದ್ದಾರೆ. ಉಪ ಮುಖ್ಯಮಂತ್ರಿಗಳಾದ ಆರ್. ಅಶೋಕ್ ಹಾಗೂ ಅಶ್ವತ್ಥ್ ನಾರಾಯಣ್ ಎದುರಾದರು ಒಬ್ಬರಿರಿಗೊಬ್ಬರು ಮಾತನಾಡಿಲ್ಲ. 

ಮುಖ್ಯಮಂತ್ರಿ ಯಡಿಯೂರಪ್ಪ ಜೊತೆಗೆ ಸಿಟಿ ರೌಂಡ್ಸ್ ಗೆ ತೆರಳಿದ್ದ ವೇಳೆ ಅಶ್ವತ್ಥ್ ನಾರಾಯಣ್ ಹಿಂಬದಿಯಲ್ಲಿ ರವಿ ಸುಬ್ರಹ್ಮಣ್ಯ ಜೊತೆ ಕುಳಿತಿದ್ದರು. 

ಅಶೋಕ್ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಜೊತೆಗೆ ಕುಳಿತುಕೊಂಡಿದ್ದರು. ಬಸ್ ಹತ್ತುವಾಗಲೂ ಎದುರು ಬದುರಾದರೂ ಒಬ್ಬರಿಗೊಬ್ಬರು ಮುಖವನ್ನೂ ನೋಡಿಲ್ಲ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಶೋಕ್ ಪಕ್ಕದಲ್ಲಿ ಕುಳಿತಿದ್ದ ಬಸವರಾಜ ಬೊಮ್ಮಾಯಿ ಅವರನ್ನಷ್ಟೇ ಮಾತನಾಡಿಸಿದ ಅಶ್ವತ್ಥ್ ನಾರಾಯಣ್ ಅವರ ಕೈ ಕುಲುಕಿ ತೆರಳಿದರು. ಇದರಿಂದ ಮುನಿಸಿನಿಂದಲೇ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಮುನಿಸಿನ ಪ್ರಯಾಣ ನಡೆಯಿತು.