ವಿಠ್ಠಲ್ ಹರಿ ವಿಠ್ಠಲ್.. ಸೀಲ್ಡೌನ್ ಹೊಟೇಲಲ್ಲಿ ಭಜನೆ- ನೃತ್ಯ..!
ಉಡುಪಿ ನಗರದ ಸಸ್ಯಾಹಾರಿ ಹೊಟೇಲೊಂದರಲ್ಲಿ ಕ್ವಾರಂಟೈನ್‌ನಲ್ಲಿದ್ದ ಹೊಟೇಲ್ ಮಾಲಕ ಮತ್ತು ಸಿಬ್ಬಂದಿ ಸಮಯವನ್ನು ಸದ್ಬಳಕೆ ಮಾಡುವುದಕ್ಕಾಗಿ ತಾಳ ಹಾಕಿ ಭಜನೆ ಮಾಡುತ್ತಾ ಕುಣಿಯುವ ದೃಶ್ಯ ಇದೀಗ ವೈರಲ್ ಆಗಿದೆ.
ಉಡುಪಿ(ಜು.28): ನಗರದ ಸಸ್ಯಾಹಾರಿ ಹೊಟೇಲೊಂದರಲ್ಲಿ ಕ್ವಾರಂಟೈನ್‌ನಲ್ಲಿದ್ದ ಹೊಟೇಲ್ ಮಾಲಕ ಮತ್ತು ಸಿಬ್ಬಂದಿ ಸಮಯವನ್ನು ಸದ್ಬಳಕೆ ಮಾಡುವುದಕ್ಕಾಗಿ ತಾಳ ಹಾಕಿ ಭಜನೆ ಮಾಡುತ್ತಾ ಕುಣಿಯುವ ದೃಶ್ಯ ಇದೀಗ ವೈರಲ್ ಆಗಿದೆ.
ಈ ಹೊಟೇಲಿನ ಸಿಬ್ಬಂದಿಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಈ ಹೊಟೇಲನ್ನು ಸೀಲ್ ಡೌನ್ ಮಾಡಲಾಗಿದೆ, ಮಾತ್ರವಲ್ಲದೇ ಹೊಟೇಲಿನಲ್ಲಿಯೇ ನಿತ್ಯ ಉಳಿದುಕೊಳ್ಳುವ ಸಿಬ್ಬಂದಿಗೆ ಅಲ್ಲಿಯೇ ಕ್ವಾರಂಟೈನ್ ಮಾಡುವಂತೆ ಆಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ 87 ವಾರ್ಡಲ್ಲಿ 100ಕ್ಕೂ ಹೆಚ್ಚು ಕೇಸ್, ಸೋಂಕಿತರ ಸಂಖ್ಯೆ 47000 ಗಡಿಗೆ
ಇದೀಗ ಕ್ವಾರಂಟೈನ್ ನಲ್ಲಿ ನಾಲ್ಕೈದು ದಿನಗಳು ಕಳೆದಿದ್ದು, ಎಲ್ಲರೂ ಸೇರಿ ಹರಟೆ ಹೊಡೆದು ಬೇಜಾರಾದ ಆದ ಮೇಲೆ ಇದೀಗ ನಿತ್ಯ ಹೊಟೇಲಿನೊಳಗೆ ಸ್ಥಳಾವಕಾಶ ಮಾಡಿಕೊಂಡಿದ್ದಾರೆ.
ವಿಠ್ಠಲ್ ಹರಿ ವಿಠ್ಠಲ್ ಎಂದು ಗಟ್ಟಿಯಾಗಿ ಹಾಡುತ್ತಾ ಕುಣಿದು ತಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಒಬ್ಬರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.