ಮಡಿಕೇರಿ(ಮೇ 10): ಹೋಂ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೊಬ್ಬ ಬೇಕರಿಯಲ್ಲಿ ವ್ಯಾಪಾರಕ್ಕೆ ಮುಂದಾಗಿದ್ದು, ವ್ಯಕ್ತಿಯನ್ನ ವಶಕ್ಕೆ ಪಡೆದು ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್‌ಗೆ ದಾಖಲಿಸಲಾಗಿದೆ.

ಮಡಿಕೇರಿ ನಗರದ ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ಘಟನೆ ನಡೆದಿದ್ದು, ಚಚ್‌ರ್‍ ಕಾಂಪ್ಲೆಕ್ಸ್‌ನಲ್ಲಿರುವ ಬೇಕರಿಯೊಂದರಲ್ಲಿ ಕೈಯಲ್ಲಿ ಸೀಲ್‌ ಇದ್ದರೂ ವ್ಯಾಪಾರಕ್ಕೆ ಮುಂದಾಗಿದ್ದ. ಲಾಕ್‌ಡೌನ್‌ ವೇಳೆ ಚಿತ್ರದುರ್ಗದಲ್ಲಿದ್ದು, ಮಡಿಕೇರಿಗೆ ವಾಪಸ್‌ ಆಗಿದ್ದ ವ್ಯಕ್ತಿಗೆ ಹೋಂಕ್ವಾರಂಟೈನ್‌ಗೆ ಸೂಚನೆ ನೀಡಲಾಗಿತ್ತು.

ಮೀನುಗಾರಿಕೆಗೆ ಅವಕಾಶ ಇದ್ರೂ, ಮೀನುಗಾರರಿಗಿಲ್ಲ ಆಸಕ್ತಿ..!

ಆದರೂ ಕೂಡ ಹೋಂಕ್ವಾರಂಟೆನ್‌ ನಿಯಮ ಉಲ್ಲಂಘನೆ ಮಾಡಿ ವ್ಯಾಪಾರ ಮಾಡುತ್ತಿದ್ದ. ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ಮಡಿಕೇರಿ ನಗರಸಭೆ ಅಧಿಕಾರಿಗಳು. ಬೇಕರಿಗೆ ಬೀಗ ಜಡಿದಿದ್ದಾರೆ.