Asianet Suvarna News Asianet Suvarna News

ಬೆಳ್ಳಂಬೆಳಗ್ಗೆ SSLC ಮಕ್ಕಳ ಮನೆಗಳಿಗೆ ಶಾಸಕ ಭೇಟಿ..!

ಆಗಲೇ ಜನವರಿ ತಿಂಗಳು ಮುಗಿಯುತ್ತಾ ಬಂತು. 10 ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ತಯಾರಿ ಜೋರಾಗಿದೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಎಸ್‌ಎಸ್‌ಎಲ್‌ಸಿ ಮಕ್ಕಳನ್ನು ಪ್ರೋತ್ಸಾಹಿಸಲು ಮಾದರಿ ಕೆಲಸ ಮಾಡಿದ್ದಾರೆ. ಶಾಸಕರೇನು ಮಾಡಿದ್ರು..? ನೀವೇ ಓದಿ.

Puttur mla Sanjeeva Matandoor visits sslc students house in early morning
Author
Bangalore, First Published Jan 23, 2020, 7:40 AM IST
  • Facebook
  • Twitter
  • Whatsapp

ಮಂಗಳೂರು(ಜ.23): ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪುತ್ತೂರು ತಾಲೂಕು ಪ್ರಥಮ ಸ್ಥಾನದ ಸಾಧನೆ ಮಾಡಬೇಕೆಂಬ ಉದ್ದೇಶದಿಂದ ಖುದ್ದು ಶಾಸಕರೇ ನಸುಕಿನ ಜಾವ ವಿದ್ಯಾರ್ಥಿಗಳ ಮನೆ ಮನೆ ಭೇಟಿ ನೀಡಿ, ವಿದ್ಯಾರ್ಥಿಗಳನ್ನು ಓದಲು ಪ್ರೇರಣೆ ನೀಡಿದ ಘಟನೆ ಉಪ್ಪಿನಂಗಡಿಯ ಹಿರೆಬಂಡಾಡಿ ಗ್ರಾಮದಲ್ಲಿ ನಡೆದಿದೆ.

ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಹಿರೇಬಂಡಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವೇಕಪ್‌ಕಾಲ್‌ ಮಾದರಿಯಲ್ಲಿ ಪ್ರೌಢಶಾಲಾ ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಥಿಗಳ ಮನೆ ಮನೆ ಭೇಟಿ ಮಾಡಿ ಪರೀಕ್ಷಾ ತಯಾರಿ ಕುರಿತು ಪ್ರೇರಣೆ ನೀಡಿ ಪ್ರೋತ್ಸಾಹಿಸಿದ್ದಾರೆ.

ಕೆಲಸಕ್ಕಿದ್ದ ಹೊಟೇಲ್‌ನಲ್ಲೇ ಬಾಂಬ್‌ ತಯಾರಿಸಿದ್ದನೇ?

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಮ್ಮಬ್ಬ ಶೌಕತ್‌ ಅಲಿ ಮತ್ತು ಸದಸ್ಯರು, ಹೈಸ್ಕೂಲ್‌ ಕಾರ್ಯಾಧ್ಯಕ್ಷ ಶ್ರೀಧರ ಮಠಂದೂರು ಹಾಗೂ ಶಿಕ್ಷಕವರ್ಗ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Follow Us:
Download App:
  • android
  • ios