ಬ್ಯಾನರ್ ಹಾಕಿದ್ದು ಒಪ್ಪಿಕೊಳ್ಳುವಂತೆ ಗನ್ ಇಟ್ಟು ಬೆದರಿಕೆ: ಹಿಂದೂ ಕಾರ್ಯಕರ್ತರೆಂದು ಚರ್ಮ ಸುಲಿದರು!
ಬ್ಯಾನರ್ ಹಾಕಿದ ವಿಚಾರದ ಬಗ್ಗೆ ಮಾತನಾಡುವುದಾಗಿ ಕರೆದೊಯ್ದ ಪೊಲೀಸರು ಗನ್ ಇಟ್ಟು ಶೂಟ್ ಮಾಡುವುದಾಗಿ ಬೆದರಿಸಿ ನಮ್ಮ ಮೈ ಮೇಲಿನ ಚರ್ಮ ಸುಲಿಯುವಂತೆ ಹಲ್ಲೆ ಮಾಡಿದ್ದಾರೆ.
ವರದಿ- ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಮೇ 18): ಪುತ್ತೂರಿನಲ್ಲಿ ಬ್ಯಾನರ್ ಹಾಕಿದ ವಿಚಾರಕ್ಕೆ ನೊಮ್ಮೊಂದಿಗೆ ಮಾತನಾಡುವುದಿದೆ ಎಂದು ಕರೆದೊಯ್ದ ಪೊಲೀಸರು, ಡಿವೈಎಸ್‌ಪಿ ಕಚೇರಿಗೆ ಕರೆದೊಯ್ದರು. ಅಲ್ಲಿ ಮಾತನಾಡಲಿಕ್ಕೆ ಅವಕಾಶ ನೀಡದೇ ಗನ್ ಇಟ್ಟು ಶೂಟ್ ಮಾಡಿಬಿಡ್ತೀನಿ ಎಂದು ಬೆದರಿಕೆ ಹಾಕಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರಿಂದ ಹಲ್ಲೆಗೊಳಲಾದ ಹಿಂದೂ ಕಾರ್ಯಕರ್ತ ಅವಿನಾಶ ತಿಳಿಸಿದ್ದಾರೆ.
ಪುತ್ತೂರು ಪೊಲೀಸರಿಂದ ಹಲ್ಲೆಗೊಳಗಾಗಿ ಸ್ಥಳೀಯ ಮಹಾವೀರ ಆಸ್ಪತ್ರೆಯಲ್ಲಿ ದೌರ್ಜನ್ಯದ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಅವಿನಾಶ್, ಪೊಲೀಸರು ಮಾತನಾಡಲು ಇದೆ ಅಂತ ಹೇಳಿ ಡಿವೈಎಸ್‌ಪಿ ಕಚೇರಿಗೆ ನಮ್ಮನ್ನು ಕರೆದುಕೊಂಡರು ಹೋದವರು. ಆದರೆ, ಡಿವೈಎಸ್‌ಪಿ ಕಚೇರಿಗೆ ಕರೆದುಕೊಂಡು ಹೋಗಿ ಮಾತನಾಡಲು ಬಿಡದೇ ಚೆನ್ನಾಗಿ ಹೊಡೆದಿದ್ದಾರೆ. ಪುತ್ತೂರಿನಲ್ಲಿ ಹಾಕಿದ ಬ್ಯಾನರ್ ಗೂ ನಮಗೂ ಸಂಬಂಧ ಇಲ್ಲ. ಒಟ್ಟು 9 ಜನರಿಗೆ ಲಾಠಿಯಿಂದ ಹೊಡೆದಿದ್ದಾರೆ. ಕಿವಿ, ತೊಡೆ, ಕಾಲಿನ ಭಾಗಕ್ಕೆ ಸುಮಾರು ಒಂದು ಘಂಟೆ ಹೊಡೆದಿದ್ದಾರೆ ಎಂದರು.
ಬಿಜೆಪಿ ನಾಯಕರ ಶ್ರದ್ಧಾಂಜಲಿ ಬ್ಯಾನರ್ ಹಾಕಿದವರ, ಚರ್ಮ ಸುಲಿದ ಪೊಲೀಸರು!
ಬ್ಯಾನರ್ ಹಾಕಿದ್ದು ಒಪ್ಪಿಕೊಳ್ಳುವಂತೆ ಹಲ್ಲೆ: ಡಿವೈಎಸ್‌ಪಿ, ಎಸ್‌ಐ ಶ್ರೀನಾಥ್ ರೆಡ್ಡಿ ಹಾಗೂ ಕಾನ್ಸ್‌ಟೇಬಲ್‌ಗಳು ಸೇರಿಕೊಂಡು ಒಂಭತ್ತೂ ಜನರಿಗೆ ಮನಸೋ ಇಚ್ಛೆ ಹೊಡೆದಿದ್ದಾರೆ. ಬಳಿಕ ಅರುಣ್ ಅಣ್ಣ ಬಂದು ನಮ್ಮನ್ನು ಬಿಡಿಸಿ ಕರೆದುಕೊಂಡು ಹೋದರು. ಅವರು ಬರಲಿಲ್ಲ ಅಂದ್ರೆ ಪೊಲೀಸರು ನಮನ್ನ ಬಿಡ್ತಾ ಇರಲಿಲ್ಲ. ನಾವೆಲ್ಲರೂ ಜಾಗರಣಾ ವೇದಿಕೆ ಜವಾಬ್ದಾರಿ ಇದ್ದ ಕಾರ್ಯಕರ್ತರು. ನಾವು ರಾಜಕೀಯ ವಿಷಯದಲ್ಲಿ ಇಲ್ಲ, ಹಿಂದುತ್ವದ ವಿಷಯದಲ್ಲಿ ಮಾತನಾಡಿದ್ದೇವೆ. ಹರೀಶ್ ಪೂಂಜಾ ಆಸ್ಪತ್ರೆಗೆ ಬಂದಿದ್ರು, ಶೋಭಕ್ಕ ಫೋನ್ ಮಾಡಿದ್ರು. ಪೊಲೀಸರು ಬ್ಯಾನರ್ ಹಾಕಿದ್ದು ನೀವೇ ಅಂತ ಒಪ್ಪಿಕೊಳ್ಳಿ ಅಂತ ಹೊಡೀತಾ ಇದ್ರು ಅಂತ ನೋವು ತೋಡಿಕೊಂಡಿದ್ದಾರೆ.
ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ ಚಕ್ರವರ್ತಿ ಸೂಲಿಬೆಲೆ:
ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ವಿಚಾರ ಸಂಬಂಧಿಸಿ ಪುತ್ತೂರು ಆಸ್ಪತ್ರೆಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಭೇಟಿ ನೀಡಿ ಸಾಂತ್ವನ ಹೇಳಿದರು. ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಭೇಟಿ ನೀಡಿದ ಚಕ್ರವರ್ತಿ ಸೂಲಿಬೆಲೆ, ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಹಿಂದೂ ಕಾರ್ಯಕರ್ತರ ಭೇಟಿಯಾದರು. ಹಲ್ಲೆಗೊಳಗಾದ ಅವಿನಾಶ್ ಭೇಟಿಯಾಗಿ ಮಾಹಿತಿ ಪಡೆದ ಚಕ್ರವರ್ತಿ, ಪೊಲೀಸರ ವಿರುದ್ದ ಕಠಿಣ ಕ್ರಮಕ್ಕೆ ಸೂಲಿಬೆಲೆ ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಪುತ್ತೂರಿನಲ್ಲಿ ಬಿಜೆಪಿ ನಾಯಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರಿಗೆ ಆಸ್ಪತ್ರೆಗೆ ಬರಲು ಮುಖ ಇಲ್ಲ. ಅವರದ್ದೇ ವಿರುದ್ದ ಪೋಸ್ಟರ್, ಆ ಕಾರಣಕ್ಕಾಗಿ ಕಾರ್ಯಕರ್ತರ ಬಂಧನ ಆಗಿದೆ. ಹೀಗಿರುವಾಗ ಇಲ್ಲಿಗೆ ಹೇಗೆ ಬಂದು ಅವರು ಮುಖ ತೋರಿಸ್ತಾರೆ. ಹರೀಶ್ ಪೂಂಜಾ ಬಂದಿದಾರೆ. ಅವರು ಹಿಂದೆಯೂ ಕಾರ್ಯಕರ್ತರ ಪರ ಇದ್ದಾರೆ. ಆದರೆ ಬೇರೆ ನಾಯಕರಿಗೆ ಇಲ್ಲಿ ಬಂದು ಮುಖ ತೋರಿಸೋ ಸ್ಥಿತಿ ಇಲ್ಲ. ವಿಶೇಷವಾಗಿ ಪುತ್ತೂರಿನಲ್ಲಿ ಆ ಪರಿಸ್ಥಿತಿ ಸದ್ಯ ಇಲ್ಲ.
ಹಿಂದೂ ಕಾರ್ಯಕರ್ತರ ಚರ್ಮ ಸುಲಿದ ಪೊಲೀಸರಿಗೆ ಶಿಕ್ಷೆ ಗ್ಯಾರಂಟಿ: ಇಲಾಖಾ ತನಿಖೆಗೆ ಆದೇಶ
ಧಿಮಾಕು, ದುರಂಹಕಾರ ತಲೆಗೇರಿದ್ರೆ ಜನ ಬುದ್ದಿ ಕಲಿಸ್ತಾರೆ: ಯಾರದ್ದೋ ಒತ್ತಡಕ್ಕೆ ಯಾರದ್ದೋ ಮನೆಯ ಮಕ್ಕಳನ್ನ ಈ ಥರ ಒಡೆಯೋದು ತಪ್ಪು. ಪೊಲೀಸರಿಗೆ ಕಠಿಣ ಶಿಕ್ಷೆಯಾಗಲಿ, ಹಿಂದೆ ಇರೋರು ಯಾರೂಂತ ಗೊತ್ತಾಗಲಿ. ಇದರ ಹಿಂದೆ ಯಾರು ಇದ್ದಾರೆ ಅಂತ ನನಗೆ ಗೊತ್ತಿಲ್ಲ. ಇಲ್ಲಿನ ಕಾಂಗ್ರೆಸ್ ಶಾಸಕರು ಹೊಸಬರು, ಅವರ ಬಗ್ಗೆಯೂ ಕೆಲವು ಮಾತಿದೆ. ಧಿಮಾಕು, ದುರಂಹಕಾರ ತಲೆಗೇರಿದ್ರೆ ರಾಜ್ಯದ ಜನ ಬುದ್ದಿ ಕಲಿಸ್ತಾರೆ. ಇದರ ಹಿಂದೆ ಇರೋರು ತಮ್ಮನ್ನು ತಿದ್ದಿಕೊಂಡು ಪ್ರಾಯಶ್ಚಿತ್ತ ಅನುಭವಿಸಲಿ. ಪೊಲೀಸರಿಂದ ಹಲ್ಲೆಗೊಳಗಾದ ಕಾರ್ಯಕರ್ತರನ್ನ ನೋಡಿ ಸಂಕಟ ಆಗ್ತಿದೆ. ರೇಪ್, ದರೋಡೆ ಮಾಡಿದವರಿಗೆ ಹೊಡೆದ ಹಾಗೆ ಹೊಡ್ತಿದಾರೆ. ಬ್ಯಾನರ್ ಹಾಕಿದ ಕಾರಣಕ್ಕೆ ಬಂಧಿಸಿ ಹಲ್ಲೆ ಮಾಡಿಸಿರೋದು ರಾಷ್ಟ್ರೀಯ ಪಕ್ಷಕ್ಕೆ ತಕ್ಕುದಲ್ಲ. ಆ ಹುಡುಗರು ಹಿಂದೂ ಧರ್ಮಕ್ಕೆ ತಮ್ಮನ್ನು ಸಮರ್ಪಿಸಿಕೊಂಡವರು. ಇದರ ಹಿಂದೆ ಯಾರೇ ಇದ್ದರೂ ಅವರ ಮೇಲೆ ಕಠಿಣ ಕ್ರಮ ಆಗಲಿ ಎಂದಿದ್ದಾರೆ.