Asianet Suvarna News Asianet Suvarna News

KSRTC : ಎಲೆಕ್ಟ್ರಿಕ್‌ ವಾಹನ ಸೇರಿ ಒಂದು ಸಾವಿರ ಬಸ್‌ ಖರೀದಿ

  ಪ್ರಯಾಣಿಕರಿಗೆ ವಿಮಾನ ಮಾದರಿಯ ಸೇವೆ ಕಲ್ಪಿಸಲು 350 ಎಲೆಕ್ಟ್ರಿಕ್‌ ವಾಹನ ಸೇರಿ ಒಂದು ಸಾವಿರ ಬಸ್‌ ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಎಂ. ಚಂದ್ರಪ್ಪ ತಿಳಿಸಿದರು

Purchase of one thousand buses including electric vehicles snr
Author
First Published Jan 24, 2023, 6:29 AM IST

 ಮೈಸೂರು :  ಪ್ರಯಾಣಿಕರಿಗೆ ವಿಮಾನ ಮಾದರಿಯ ಸೇವೆ ಕಲ್ಪಿಸಲು 350 ಎಲೆಕ್ಟ್ರಿಕ್‌ ವಾಹನ ಸೇರಿ ಒಂದು ಸಾವಿರ ಬಸ್‌ ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಎಂ. ಚಂದ್ರಪ್ಪ ತಿಳಿಸಿದರು.

ಕಳೆದ ನಾಲ್ಕು ವರ್ಷಗಳಿಂದ ಹೊಸ ಬಸ್‌ ಖರೀದಿಸದೆ ಇರುವುದರಿಂದ ಹಂತ ಹಂತವಾಗಿ ನೂತನ್‌ ಬಸ್‌ ಖರೀದಿಸಲು ತೀರ್ಮಾನಿಸಲಾಗಿದೆ. ಈಗ ಡೀಸೆಲ್‌ ಬಳಕೆಯ ಬಸ್‌ಗಳ ಖರೀದಿ ಕಡಿಮೆ ಮಾಡಿ ಎಲೆಕ್ಟ್ರಿಕ್‌ ವಾಹನಗಳಿಗೆ ಆದ್ಯತೆ ನೀಡಲಾಗುವುದು. ಆದ್ದರಿಂದ 350 ಎಲೆಕ್ಟ್ರಿಕ್‌ ಬಸ್‌ ಸೇರಿ ಒಂದು ಸಾವಿರ ಬಸ್‌ ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಫೆ. 15 ರೊಳಗೆ 50 ಇವಿ ಬಸ್‌ಗಳು ಬರಲಿವೆ. 20 ಅಂಬಾರಿ ಉತ್ಸವ, 350 ಎಲೆಕ್ಟ್ರಿಕ್‌ ವಾಹನ, 40 ನಾನ್‌ ಸ್ಲೀಪರ್‌ (222 ವ್ಹೀಲ್‌ ಬೇಸ್‌), 13.5 ಮೀಟರ್‌ ನಾಲ್ಕು ಎಸಿ ಸ್ಲೀಪರ್‌, 13.4 ಮೀಟರ್‌ 4 ನಾನ್‌ ಎಸಿ ಸ್ಲೀಪರ್‌ (222 ವ್ಹೀಲ್‌ ಬೇಸ್‌), 13.5 ಮೀಟರ್‌ ನಾಲ್ಕು ಎಸಿ ಸ್ಲೀಪರ್‌, 13.4 ಮೀಟರ್‌, 4 ನಾನ್‌ ಎಸಿ ಸ್ಲೀಪರ್‌, 50 ಸಿಟಿ ವೆಹಿಕಲ್‌ (ಡಲ್ಪ್‌), 550 ಕರ್ನಾಟಕ ಸಾರಿಗೆ ವಾಹನಗಳನ್ನು ಖರೀದಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಈಗಾಗಲೇ ಇವಿ ಬಸ್‌ಗೆ ಚೀನಾ ಮೂಲದ ಕಂಪನಿಗೆ ಟೆಂಡರ್‌ ನೀಡಲಾಗಿದೆ. ಕೊರೋನಾ ಕಾರಣಕ್ಕಾಗಿ ಬ್ಯಾಟರಿ ಉತ್ಪಾದನೆಯಲ್ಲಿ ವ್ಯತ್ಯಾಸವಾಗಿ ವಿಳಂಬವಾಗಿದೆ. ಫೆ. 15 ರೊಳಗೆ ಸಂಚಾರಕ್ಕೆ ಇಳಿಯಲಿವೆ. ರಾಜ್ಯದಲ್ಲಿ 9 ಲಕ್ಷ ಕಿ.ಮೀ. ಸಂಚರಿಸಿರುವ ಮೂರು ಸಾವಿರ ಬಸ್‌ಗಳು ಇದ್ದು, ಅವುಗಳನ್ನು ನಿಷ್ಕಿ್ರೕಯಗೊಳಿಸಿ ಗುಜರಿಗೆ ಕಳುಹಿಸಲಾಗುತ್ತದೆ. ಇದರ ಬದಲಿಗೆ ಹಂತ ಹಂತವಾಗಿ ಹೊಸ ಬಸ್‌ ಖರೀದಿಸಿ ರಸ್ತೆಗೆ ಬಿಡಲಾಗುತ್ತದೆ. ಈಗಾಗಲೇ ಹೊಸ ಬಸ್‌ ಖರೀದಿ ಸಂಬಂಧ ಸರ್ಕಾರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗಿದೆ ಎಂದರು.

50 ಎಲೆಕ್ಟ್ರಿಕ್‌ ವಾಹನಗಳಲ್ಲಿ ಮೈಸೂರು ವ್ಯಾಪ್ತಿಯಲ್ಲಿ ಮೈಸೂರು-ಬೆಂಗಳೂರು, ಬೆಂಗಳೂರು-ಮಡಿಕೇರಿ, ಬೆಂಗಳೂರು ವಿರಾಜಪೇಟೆ ಓಡಿಸಲಾಗುತ್ತಿದ್ದು, ಬೆಂಗಳೂರು- ಚಿಕ್ಕಮಗಳೂರು, ದಾವಣಗೆರೆ, ಬೆಂಗಳೂರು- ಶಿವಮೊಗ್ಗ ವಲಯದಲ್ಲಿ ಕಾರ್ಯಾಚರಣೆಗಿಳಿಸಲು ಯೋಜನೆ ರೂಪಿಸಲಾಗಿದೆ. ಅಂತೆಯೇ ಎಸಿ ಡ್ರೀಮ್‌ ಕ್ಲಾಸ್‌ ಅಂಬಾರಿ ವಾಹನವು ಮೈಸೂರು- ತಿರುಪತಿ, ಮೈಸೂರು- ಚೆನ್ನೈ, ಹೈದಾರಾಬಾದ್‌, ಮಂತ್ರಾಲಯ, ಎರ್ನಾಕುಲಂ ಮಾರ್ಗದಲ್ಲಿ ಸಂಚರಿಸಲು ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು.

ಮೈಸೂರು ವಿಭಾಗದಲ್ಲಿ ನಾನ್‌ಎಸಿ ಸ್ಲೀಪರ್‌ ವಾಹನವನ್ನು ಮೈಸೂರು- ಬೆಂಗಳೂರು- ಕ್ಯಾಲಿಕಚ್‌, ಮೈಸೂರು- ಕುಂದಾಪುರ, ಮೈಸೂರು- ಗೋಕರ್ಣ, ಉಡುಪಿ, ಬೆಳಗಾವಿಯಲ್ಲಿ ಹತ್ತು ವಾಹನಗಳನ್ನು ಸೇವೆಗೆ ಬಿಡಲು ತೀರ್ಮಾನಿಸಲಾಗಿದೆ ಎಂದು ಅವರು ನುಡಿದರು.

ವಿಭಾಗದ ವಿಲೀನ ನಷ್ಟತಪ್ಪಿಸಿದೆ

ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗವನ್ನು ವಿಲೀನಗೊಳಿಸಿ ಒಂದೇ ವಿಭಾಗ ಮಾಡಿದ ಮೇಲೆ ಆಗುತ್ತಿರುವ ನಷ್ಟದ ಪ್ರಮಾಣ ಕಡಿಮೆ ಆಗಿದೆ. 2020-21ರಲ್ಲಿ 161 ಕೋಟಿ, 2021-22ರಲ್ಲಿ 156 ಕೋಟಿ ನಷ್ಟವಾಗಿತ್ತು. ವಿಲೀನಗೊಳಿಸಿದ ಮೇಲೆ 2022-23ರ ಅವಧಿಯಲ್ಲಿ 101 ಕೋಟಿ ನಷ್ಟವಾಗಿದೆ. ಅಂತೆಯೇ ಹೆಚ್ಚುವರಿ ಸಿಬ್ಬಂದಿ, ಖರ್ಚಿನ ಪ್ರಮಾಣ ತಗ್ಗಿಸಿದಷ್ಟುಉಳಿತಾಯ ಆಗುತ್ತದೆ ಎಂದರು.

ಮೈಸೂರು ವಿಭಾಗದಲ್ಲಿ 1072 ವಾಹನ ಕಾರ್ಯಾಚರಣೆ ಮಾಡುತ್ತಿವೆ. ಪ್ರತಿದಿನ 7854 ಟ್ರಿಪ್‌ಗಳಿದ್ದು, ನಾಲ್ಕು ಲಕ್ಷ ಹೆಚ್ಚು ಪ್ರಯಾಣಿಕರಿಗೆ ಮತ್ತು ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಪ್ರತಿ ದಿನ ಸರಾಸರಿ . 1.21 ಕೋಟಿ ಸಾರಿಗೆ ಆದಾಯ ಗಳಿಸುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್‌ಕುಮಾರ್‌ ಇದ್ದರು.

Follow Us:
Download App:
  • android
  • ios