ದೇಹದ ಸದೃಢತೆ ಕಾಪಾಡಿಕೊಳ್ಳುವುದು ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವಲ್ಲಿ ಯುವ ಸಮೂಹಕ್ಕೆ ಕರ್ನಾಟಕ ರತ್ನ ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಪ್ರೇರಣೆಯಾಗಿದ್ದರು ಎಂದು ಮಾಜಿ ಸಚಿವ ಎಸ್‌.ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರು (ಜೂ.26): ದೇಹದ ಸದೃಢತೆ ಕಾಪಾಡಿಕೊಳ್ಳುವುದು ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವಲ್ಲಿ ಯುವ ಸಮೂಹಕ್ಕೆ ಕರ್ನಾಟಕ ರತ್ನ ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಪ್ರೇರಣೆಯಾಗಿದ್ದರು ಎಂದು ಮಾಜಿ ಸಚಿವ ಎಸ್‌.ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

ರಾಜಾಜಿ ನಗರದ ಡಾ. ರಾಜ್‌ಕುಮಾರ್‌ ಕಲಾಕ್ಷೇತ್ರದಲ್ಲಿ ಶನಿವಾರ ‘ಮೆಟ್ರೋ ಫ್ಲೆಕ್ಸ್‌ ಜಿಮ್‌’ ಮತ್ತು ‘ಬಾಡಿ ಕ್ರಾಫ್ಟ್‌ ಜಿಮ್‌’ ಆಯೋಜಿಸಿದ್ದ ಅಖಿಲ ಭಾರತ ಮಟ್ಟದ ಎರಡು ದಿನಗಳ ರಾಷ್ಟ್ರೀಯ ದೇಹದಾಢ್ರ್ಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಲು ಮತ್ತು ಮದ್ಯ ವ್ಯಸನ ಸೇರಿದಂತೆ ಕೆಟ್ಟಚಟಗಳಿಂದ ದೂರ ಉಳಿಯಲು ದೇಹದಾಢ್ರ್ಯದಂತಹ ಕಸರತ್ತನ್ನು ಯುವಕರು ಕಲಿಯಬೇಕು ಎಂದರು.

ಹಿಜಾಬ್ ಸಂಘರ್ಷದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕಾಯುವ ಕೆಲಸ ಮಾಡಬೇಕಿದೆ, ಸಿಎಂಗೆ ಪತ್ರ ಬರೆದ ಸುರೇಶ್ ಕುಮಾರ್‌

ಕಳೆದ ಎರಡು ವಾರಗಳಲ್ಲಿ ರಾಜಾಜಿ ನಗರ ಕ್ಷೇತ್ರದಲ್ಲಿ ಸಾಮಾಜಿಕ ಕಾರ್ಯಕ್ರಮಗಳ ಸರಮಾಲೆ ನಡೆಯುತ್ತಿದೆ. ಮಂಗಳವಾರ ಸುಮಾರು 1 ಸಾವಿರಕ್ಕೂ ಹೆಚ್ಚು ಮಂದಿ ಯೋಗದಿನ ಆಚರಣೆಯಲ್ಲಿ ಭಾಗಿಯಾಗಿ ಮೆಚ್ಚುಗೆಗೆ ಪಾತ್ರರಾಗಿದ್ದೇವೆ. ಭಾನುವಾರ ಉದ್ಯೋಗ ಮೇಳ ನಡೆಸಿ ಸುಮಾರು 500ಕ್ಕೂ ಹೆಚ್ಚು ಯುವ ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಟ್ಟಿದ್ದೇವೆ ಎಂದು ಅವರು ತಿಳಿಸಿದರು.

ದೇಹದಾಢ್ರ್ಯ ಸ್ಪರ್ಧೆಗೆ ದೇಶದ ವಿವಿಧ ರಾಜ್ಯಗಳಿಂದ 400ಕ್ಕೂ ಹೆಚ್ಚು ಮಂದಿ ಸ್ಪರ್ಧಿಗಳು ಆಗಮಿಸಿದ್ದು, ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ‘ಭಾರತ ಶೇಷ್ಠ’ ಪ್ರಶಸ್ತಿಗೆ .1 ಲಕ್ಷ ಬಹುಮಾನ, ‘ಭಾರತ ಉದಯ’ಕ್ಕೆ .50 ಸಾವಿರ, ‘ಭಾರತ ಕೇಸರಿ’ .25 ಸಾವಿರ, ‘ಭಾರತ ಫಿಟ್ನೆಸ್‌ .25 ಸಾವಿರ, ‘ಭಾರತ ಕಿಶೋರ’ .50 ಸಾವಿರ, ‘ಭಾರತ ಕುಮಾರ’ .50 ಸಾವಿರ, ‘ಭಾರತ ಶ್ರೀ’ಗೆ .50 ಸಾವಿರ ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು ಎಂದು ಅವರು ವಿವರಿಸಿದರು.

ಸಂಸದ ಪಿ.ಸಿ.ಮೋಹನ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದೇಹದಾಢ್ರ್ಯ ಪ್ರದರ್ಶನ ಮಾಡುವುದು ಟ್ರೆಂಡ್‌ ಆಗಿದೆ. ಪ್ರತಿದಿನ 2 ತಾಸು ಜಿಮ್‌ಗಳಲ್ಲಿ ಶ್ರಮಿಸುತ್ತಿದ್ದಾರೆ. ಯುವ ಸಮೂಹ ತಮ್ಮ ದೇಹವನ್ನು ಸದೃಢವಾಗಿರಿಸಿಕೊಳ್ಳುವುದಕ್ಕೆ ಈ ರೀತಿಯ ಸ್ಪರ್ಧೆಗಳು ಹೆಚ್ಚು ಪ್ರೋತ್ಸಾಹ ನೀಡುತ್ತವೆ ಎಂದು ತಿಳಿಸಿದರು.

Kannada FM ಮುಚ್ಚಲು ರಮಾಕಾಂತ್‌ ಸಂಚು: ಮಾಜಿ ಸಚಿವ ಸುರೇಶ್‌ ಕುಮಾರ್‌

ನಗರದ ಶ್ರೀರಾಮಪುರ ಪೊಲೀಸ್‌ ಠಾಣೆಯ ಪೇದೆ ಶ್ರೀನಿವಾಸ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿದೆ. ರಾಜಾಜಿ ನಗರ ಮಂಡಲ ಅಧ್ಯಕ್ಷರಾದ ರಾಘವೇಂದ್ರರಾವ್‌, ಮಾಜಿ ಉಪ ಮೇಯರ್‌ ರಂಗಣ್ಣ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಮುನಿರಾಜು, ರಾಜಣ್ಣ, ಚಲನಚಿತ್ರ ನಿರ್ಮಾಪಕ ಗಂಗಾಧರ್‌ ಇದ್ದರು.