Asianet Suvarna News Asianet Suvarna News

ಶಿವಮೊಗ್ಗ: ಹಣಕ್ಕೆ ಬೇಡಿಕೆ ಇಟ್ಟ ಸರ್ಕಾರಿ ಅಭಿಯೋಜಕ ಎಸಿಬಿ ಬಲೆಗೆ

ಸರ್ಕಾರಿ ಅಭಿಯೋಜಕರೊಬ್ಬರು ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಸರ್ಕಾರಿ ಅಭಿಯೋಜಕ ರವಿಂದ್ರ ಅವರು ನಿರಂಜನ್‌ ಕದಂ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುನಿಲ್‌ ಗಾಯಕ್ವಾಡ್‌ ಎಂಬುವರಿಂದ 20 ಸಾವಿರ ರು. ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

public prosecutor receiving bribe caught by acb
Author
Bangalore, First Published Aug 30, 2019, 12:30 PM IST

ಶಿವಮೊಗ್ಗ(ಆ.30): ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಸರ್ಕಾರಿ ಅಭಿಯೋಜಕರೊಬ್ಬರು ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ.

4ನೇ ಹೆಚ್ಚುವರಿ ನ್ಯಾಯಾಲಯದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ರವಿಂದ್ರ ಅವರು ನಿರಂಜನ್‌ ಕದಂ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುನಿಲ್‌ ಗಾಯಕ್ವಾಡ್‌ ಎಂಬುವರಿಂದ 20 ಸಾವಿರ ರು. ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಒಟ್ಟು 50 ಸಾವಿರ ರು. ಲಂಚದ ಬೇಡಿಕೆ ಇಟ್ಟಿದ್ದ ರವೀಂದ್ರ ಈಗಾಗಲೇ ಪ್ರತ್ಯೇಕ 2 ಸಾವಿರ ಮತ್ತು 5 ಸಾವಿರ ಒಟ್ಟು 7 ಸಾವಿರ ರು.ಗಳನ್ನು ಪಡೆದುಕೊಂಡಿದ್ದು, ಈ ಸಂಬಂಧ ಸುನಿಲ್‌ ಗಾಯಕ್ವಾಡ್‌ ಎಸಿಬಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಎಸಿಬಿ ಡಿವೈಎಸ್‌ಪಿ ಎಲ್‌. ವೇಣುಗೋಪಾಲ್‌ ನೇತೃತ್ವದ ತಂಡ 20 ಸಾವಿರ ರು. ಲಂಚ ಸ್ವೀಕರಿಸುತ್ತಿದ್ದಾಗ ರವೀಂದ್ರರನ್ನು ವಶಕ್ಕೆ ಪಡೆದು 1988ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದೆ.

ಶಿವಮೊಗ್ಗ: ಹಬ್ಬ ಆಚರಣೆಯಲ್ಲಿ ಡಿಜೆ, ಬೈಕ್ ರ‍್ಯಾಲಿಗಿಲ್ಲ ಅವಕಾಶ

ಎಸಿಬಿ ಠಾಣಾಧಿಕಾರಿ ವೀರೇಂದ್ರ, ಜೆ.ಎಸ್‌. ತಿಪ್ಪೇಸ್ವಾಮಿ, ಸಿಬ್ಬಂದಿ ವಸಂತ, ನಾಗರಾಜ, ರಘುನಾಯ್ಕ, ಸುರೇಂದ್ರ, ಯೋಗೇಶಪ್ಪ, ಹರೀಶ್‌ ಮತ್ತು ಶ್ರೀನಿವಾಸ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Follow Us:
Download App:
  • android
  • ios