ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ ಬಂದ್
ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯಕ್ಕೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ. ಕೊರೋನಾ ಹಿನ್ನೆಲೆ 14 ದಿನಗಳ ಕಾಲ ಪ್ರವೇಶ ನಿರ್ಬಂಧಿಸಲಾಗಿದೆ.
ಗೊರವನಹಳ್ಳಿ (ಏ.23): ಕರುನಾಡಿನ ಪುಣ್ಯಕ್ಷೇತ್ರ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯ ಮತ್ತು ದಾಸೋಹ ನಿಲಯಕ್ಕೆ ಸರಕಾರದ ಕೊವೀಡ್-19 ಮಾರ್ಗಸೂಚಿ ಆದೇಶದ ಅನ್ವಯ ಮೇ 4ರವರೆಗೆ ಬಂದ್ ಮಾಡಲಾಗಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ ಮತ್ತು ದಾಸೋಹ ನಿಲಯಕ್ಕೆ ಭಕ್ತಾದಿಗಳಿಗೆ ಮತ್ತು ಸಾರ್ವಜನಿಕರಿಗೆ 14 ದಿನಗಳ ಕಾಲ ನಿರ್ಬಂಧಿಸಲಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ಕೇಶವಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಮನಿಸಿ : ನಾಡಿನ ಪ್ರಮುಖ ದೇಗುಲಗಳಿಗೆ ಸಾರ್ವಜನಿಕ ಪ್ರವೇಶ ಬಂದ್
ಸರಕಾರದ ಆದೇಶ ಮತ್ತು ಮುಂದಿನ ಮಾರ್ಗಸೂಚಿ ಬರುವ ತನಕ ಭಕ್ತಾದಿಗಳು ದೇವಾಲಯಕ್ಕೆ ಬರುವುದು ಬೇಡ. ಕೊರೋನಾ ರೋಗ ತಡೆಗೆ ಭಕ್ತಾದಿಗಳ ಸಹಕಾರ ಅಗತ್ಯವಾಗಿದೆ. ಪುಣ್ಯಕ್ಷೇತ್ರಕ್ಕೆ ಬಂದು ದರ್ಶನ ಇಲ್ಲದೇ ಹೋಗುವುದು ಬೇಡ ಎಂದು ಪತ್ರಿಕೆಯೊಂದಿಗೆ ಮನವಿ ಮಾಡಿದ್ದಾರೆ.