ರಾಗಿ ಮಾರಿದ ರೈತರ ಹಣ ಜಮಾ ಮಾಡದಿದ್ದರೆ ಪ್ರತಿಭಟನೆ : ಜಯಣ್ಣ
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವತಿಯಿಂದ ರೈತರಿಂದ ಬೆಂಬಲ ಬೆಲೆಗೆ ಸಾವಿರಾರು ಕ್ವಿಂಟಲ್ ರಾಗಿ ಖರೀದಿಸಿದ್ದು, ಅದರಲ್ಲಿ ಬಹುತೇಕ(ಶೇ.40ರಷ್ಟು) ರೈತರ ಖಾತೆಗೆ ಇನ್ನೂ ಹಣ ಪಾವತಿಸದೆ ರೈತರು ಅಲೆದಾಡುವಂತಾಗಿದೆ ಎಂದು ತಾಲೂಕು ನಾಗರಿಕ ವೇದಿಕೆ ಅಧ್ಯಕ್ಷರು ಹಾಗೂ ವಕೀಲರಾದ ಜಯಣ್ಣ ನಿಗಮದ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಿಪಟೂರು: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವತಿಯಿಂದ ರೈತರಿಂದ ಬೆಂಬಲ ಬೆಲೆಗೆ ಸಾವಿರಾರು ಕ್ವಿಂಟಲ್ ರಾಗಿ ಖರೀದಿಸಿದ್ದು, ಅದರಲ್ಲಿ ಬಹುತೇಕ(ಶೇ.40ರಷ್ಟು) ರೈತರ ಖಾತೆಗೆ ಇನ್ನೂ ಹಣ ಪಾವತಿಸದೆ ರೈತರು ಅಲೆದಾಡುವಂತಾಗಿದೆ ಎಂದು ತಾಲೂಕು ನಾಗರಿಕ ವೇದಿಕೆ ಅಧ್ಯಕ್ಷರು ಹಾಗೂ ವಕೀಲರಾದ ಜಯಣ್ಣ ನಿಗಮದ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೆ ರಾಗಿ ರಾಗಿ ಖರೀದಿ ನಿಲ್ಲಿಸಿದ್ದು, ರೈತರು ನಗರದ ಎಪಿಎಂಸಿ ಆವರಣದಲ್ಲಿ ರಾಗಿ ಮಾರಾಟ ಮಾಡಿದ್ದ ಸ್ಥಳಕ್ಕೆ ರಾಗಿ ಮಾರಾಟದ ವೋಚರ್ ಹಿಡಿದು 2 ತಿಂಗಳಿನಿಂದ ಅಲೆದಾಡುತ್ತಿದ್ದಾರೆ. ಆದರೆ ಅಲ್ಲಿ ವಿಚಾರಿಸಿದರೆ ತುಮಕೂರಿನಲ್ಲಿರುವ ಆಹಾರ ನಿಗಮದ ಕಚೇರಿಗೆ ಹೋಗಿ ವಿಚಾರಿಸಿ ಎಂಬ ಅಪೂರ್ಣ ಮಾಹಿತಿ ಮಾತ್ರ ರೈತರಿಗೆ ಸಿಗುತ್ತಿದೆ. ಆದರೆ ರೈತರು ಬಸ್ ಚಾಜ್‌ರ್ ಇಟ್ಟುಕೊಂಡು ಹಣಕ್ಕಾಗಿ ತುಮಕೂರಿಗೆ ಅಲೆದಾಡಲು ಸಾಧ್ಯವಿಲ್ಲವಾಗಿದ್ದು ಜಿಲ್ಲಾಧಿಕಾರಿಗಳು ಕೂಡಲೆ ಹಣ ಬಿಡುಗಡೆಗೊಳಿಸಲು ಕ್ರಮ ಜರುಗಿಸಬೇಕು. ರೈತರು ಕಷ್ಟಪಟ್ಟು ಬೆಳೆದ ರಾಗಿಯನ್ನು ತಮ್ಮ ದೈನಂದಿನ ಕಷ್ಟಗಳನ್ನು ತೀರಿಸಿಕೊಳ್ಳುವ ಸಲುವಾಗಿ ಹಗಲು-ರಾತ್ರಿ ಖರೀದಿ ಕೇಂದ್ರದ ಮುಂದೆ ಕಾಯ್ದು ಕುಳಿತು ರಾಗಿ ಮಾರಾಟ ಮಾಡಿದ್ದರೂ ಪ್ರಯೋಜನವಾಗಿಲ್ಲ. ವರ್ಷವೆಲ್ಲಾ ಬಂಡವಾಳ ಮತ್ತು ಶ್ರಮ ಹಾಕಿ ಬೆಳೆದ ರಾಗಿಯನ್ನು ಕೊಂಡುಕೊಂಡ ನಿಗಮ ರೈತರ ಖಾತೆಗಳಿಗೆ ಹಣ ಜಮಾ ಮಾಡದೆ ತಮ್ಮ ಕೆಲಸದಲ್ಲಿ ಉದಾಸೀನತೆ ತೋರಿದ್ದು, ಕೂಡಲೆ ಹಣ ಜಮಾ ಆಗದ ರೈತರ ವಿವರಗಳನ್ನು ಕಲೆ ಹಾಕಿ ಕೂಡಲೆ ರಾಗಿ ಖರೀದಿ ಮಾಡಿರುವ ಹಣವನ್ನು ಅವರವರ ಖಾತೆಗಳಿಗೆ ಕೂಡಲೆ ಜಮಾ ಮಾಡಬೇಕು ಎಂದು ಜಯಣ್ಣ ಹೇಳಿದ್ದಾರೆ.
ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್
ಅಮರಾವತಿ: ಆಂಧ್ರಪ್ರದೇಶ ಸರ್ಕಾರ ಇನ್ನು ಮುಂದೆ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ನೀಡಲು ತೀರ್ಮಾನಿಸಿದೆ. ಈ ಯೋಜನೆಯನ್ನು ಈಗಿರುವ ಜಗನಾನ್ನ ಗೋರುಮುದ್ದ ಯೋಜನೆ ಅಡಿಯಲ್ಲೆ ತರಲಾಗಿದೆ. ಇದಕ್ಕಾಗಿ ವರ್ಷಕ್ಕೆ 86 ಕೋಟಿ ವೆಚ್ಚವಾಗಲಿದ್ದು, ಸತ್ಯ ಸಾಯಿ ಕೇಂದ್ರ ಟ್ರಸ್ಟ್ 42 ಕೋಟಿ ನೀಡಲಿದೆ. ಈ ಯೋಜನೆಯಿಂದಾಗಿ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಒಟ್ಟು 37.6 ಲಕ್ಷ ಮಕ್ಕಳಿಗೆ ಅನುಕೂಲವಾಗಲಿದೆ. ಇದರಿಂದಾಗಿ ರಾಜ್ಯದ ಶಾಲಾ ಮಕ್ಕಳಿಗೆ ಬೇಯಿಸಿದ ಮೊಟ್ಟೆ(Egg), ಕಡ್ಲೆ ಚಿಕ್ಕಿ ಜೊತೆಗೆ ಇದೀಗ ರಾಗಿ ಮಾಲ್ಟ್ ಲಭಿಸಿದಂತಾಗುತ್ತದೆ.
ಶಾಲಾ ಮಕ್ಕಳಿಗೆ ವಿಶೇಷ ಭೋಜನ ಯೋಜನೆ
ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ (Govt school) ಪಿಎಂ ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯಡಿ ಮಕ್ಕಳಿಗೆ ‘ವಿಶೇಷ ಭೋಜನ ಮತ್ತು ಶಾಲೆಗಾಗಿ ನಾವು ನೀವು’ ಕಾರ್ಯಕ್ರಮ ಆಯೋಜಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಹಬ್ಬ ಹರಿದಿನಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಈ ಸವಲತ್ತು ಮಕ್ಕಳಿಗೆ ಲಭಿಸಲಿದೆ.