'ಪೌರತ್ವ ಕಾಯ್ದೆ ವಿರುದ್ಧ ಧರಣಿ ಕಾಂಗ್ರೆಸ್ ಕುತಂತ್ರ'..!
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಕಾಂಗ್ರೆಸ್‌ನ ಕುತಂತ್ರ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ. ಯಾವ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಮಾಡಿಲ್ಲ. ನಮ್ಮ ದೇಶದಲ್ಲಿ ವಾಸ ಮಾಡುತ್ತಿರುವ ಮುಸ್ಲಿಮರಿಗೆ ಯಾವುದೇ ತೊಂದರೆ ಆಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಂಡ್ಯ(ಡಿ.24): ಇದು ಕಾಂಗ್ರೆಸ್ಸಿನ ಕುತಂತ್ರ ರಾಜಕಾರಣ ಎಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದಿರುವ ಪ್ರತಿಭಟನೆಗಳ ಕುರಿತು ಮಂಡ್ಯದಲ್ಲಿ ಸಚಿವ ಆರ್.ಅಶೋಕ್ ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಎನ್‌ಆರ್‌ಸಿ ಬಂದು ತಿಂಗಳುಗಳೇ ಆಗಿದೆ. ಆಗ ಯಾರೂ ಪ್ರತಿಭಟನೆ ಮಾಡಲಿಲ್ಲ. ಈಗ ಕುಮ್ಮಕ್ಕು ನೀಡಿ ಪ್ರತಿಭಟನೆ ಮಾಡಿಸುತ್ತಿದ್ದಾರೆ. ಪೌರತ್ವ ಕಾಯ್ದೆಯಿಂದ ಯಾರಿಗೂ ತೊಂದರೆ ಆಗಲ್ಲ. ಯಾವ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಮಾಡಿಲ್ಲ. ನಮ್ಮ ದೇಶದಲ್ಲಿ ವಾಸ ಮಾಡುತ್ತಿರುವ ಮುಸ್ಲಿಮರಿಗೆ ಯಾವುದೇ ತೊಂದರೆ ಆಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಂಡ್ಯ: 40 ಗ್ರಾಮಗಳಿಗೆ ‘ಕರುಣಾಳು’ ಬೆಳಕು, ಬೀದಿದೀಪಗಳಿಗೆ ಟೈಮರ್ ಸ್ವಿಚ್
ಪೌರತ್ವ ಕಾಯ್ದೆಯಲ್ಲಿ ತಪ್ಪೇನಿದೆ ಹೇಳಿ? ಈ ಕಾಯ್ದೆಯಲ್ಲಿ ಯಾವುದೇ ತಪ್ಪಿಲ್ಲ. ಬಹಳ ವರ್ಷಗಳಿಂದ ನಮ್ಮ ಪಕ್ಷದ ಪ್ರಣಾಳಿಕೆಯಲ್ಲೇ ಇದು ಇತ್ತು. ಆಗಿನಿಂದಲೂ ಯಾಕೆ ಕಣ್ಮುಚ್ಚಿ ಕುಳಿತಿದ್ರಿ?. ಈ ಹಿಂದೆಲ್ಲ ನಿಮಗೆ ಕಣ್ಣು ಕಾಣಿಸಿಲ್ವ? ರಾಜಕೀಯಕ್ಕಾಗಿ ಸುಳ್ಳು ಸುದ್ದಿ ಹಬ್ಬಿಸಿ, ಗೊಂದಲ ಉಂಟು ಮಾಡಬಾರದು. ಇದು ದೇಶದ ಗೌರವದ ಪ್ರಶ್ನೆ. ದೇಶದ ಶೇ.80ರಷ್ಟುಜನ ಈ ಕಾಯ್ದೆ ಬೇಕು ಅಂತಿದ್ದಾರೆ. ಯಾರೋ ಕೆಲವರು ಬೇಡ ಅಂದ್ರೆ ಬದಲಾವಣೆ ಮಾಡೋಕೆ ಆಗಲ್ಲ. ಯಾವುದೇ ಕಾರಣಕ್ಕೂ ಈ ಕಾಯ್ದೆ ಬದಲಾವಣೆ ಮಾಡುವುದಿಲ್ಲ ಎಂದಿದ್ದಾರೆ.
4 ತಿಂಗಳು ಗರಿಷ್ಠ ಮಟ್ಟ ಕಾಯ್ದುಕೊಂಡ KRS ಹೊಸ ದಾಖಲೆ..!