ಚುನಾವಣಾ ಕಾರ‍್ಯಕ್ಕೆ ಮಕ್ಕಳ ಬಳಕೆ ನಿಷೇಧ

2023-24ನೇ ಸಾಲಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಕಾರ್ಯಗಳಿಗೆ 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದ್ದು, ಯಾವುದೇ ರಾಜಕೀಯ ಪಕ್ಷದವರು ಚುನಾವಣಾ ಮತ್ತು ಪ್ರಚಾರ ಕಾರ್ಯಗಳಿಗೆ 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರೂ ಆದ ವೈ.ಎಸ್‌. ಪಾಟೀಲ ಅವರು ಮನವಿ ಮಾಡಿದ್ದಾರೆ.

Prohibition of using children for election work snr

ತುಮಕೂರು: 2023-24ನೇ ಸಾಲಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಕಾರ್ಯಗಳಿಗೆ 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದ್ದು, ಯಾವುದೇ ರಾಜಕೀಯ ಪಕ್ಷದವರು ಚುನಾವಣಾ ಮತ್ತು ಪ್ರಚಾರ ಕಾರ್ಯಗಳಿಗೆ 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರೂ ಆದ ವೈ.ಎಸ್‌. ಪಾಟೀಲ ಅವರು ಮನವಿ ಮಾಡಿದ್ದಾರೆ.

ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಮಕ್ಕಳ ದುಡಿಮೆಯನ್ನು ನಿಯಂತ್ರಿಸಲು ಹಾಗೂ ನಿಷೇಧಿಸಲು ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರನ್ವಯ ಯಾವುದೇ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ನಿಷೇಧಿಸಿದೆ ಹಾಗೂ 14-18 ವಯಸ್ಸಿನ ಕಿಶೋರ ಕಾರ್ಮಿಕ ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಎಲ್ಲಾ ತಾಲೂಕಿನ ತಹಸೀಲ್ದಾರರು ಮಕ್ಕಳ ರಕ್ಷಣಾ ಸಮಿತಿ ಹಾಗೂ ಬಾಲ ಕಾರ್ಮಿಕ ಯೋಜನೆಯ ಅಧ್ಯಕ್ಷರು ಆಗಿರುವುದರಿಂದ ತಮ್ಮ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಪಕ್ಷಗಳು 18 ವರ್ಷದ ಮಕ್ಕಳನ್ನು ಚುನಾವಣಾ ಪ್ರಚಾರ ಹಾಗೂ ಇನ್ನಿತರೆ ಚುನಾವಣಾ ಕಾರ್ಯಗಳಿಗೆ ಬಳಸಿಕೊಳ್ಳುತ್ತಿರುವುದು ಕಂಡು ಬಂದಲ್ಲಿ ತಮ್ಮ ಕ್ಷೇತ್ರದ ಕಾರ್ಮಿಕ ನಿರೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ಅಂತೆಯೇ, ಕಾರ್ಮಿಕ ನಿರೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನೊಳಗೊಂಡ ತಂಡ, ಸ್ಥಳೀಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ/ ವಾರ್ಡ್‌ ಸದಸ್ಯರಿಗೆ ಮಕ್ಕಳನ್ನು ಚುನಾವಣಾ ಕಾರ್ಯಗಳಿಗೆ ಬಳಸಿಕೊಳ್ಳದಂತೆ ಸೂಚಿಸುವುದು ಜೊತೆಗೆ ವಿವಿಧ ರಾಜಕೀಯ ಪಕ್ಷಗಳು ಕೈಗೊಳ್ಳುವ ಪ್ರಚಾರ ಕಾರ್ಯ ಹಾಗೂ ಇನ್ನಿತರೆ ಚುನಾವಣಾ ಕಾರ್ಯಗಳನ್ನು ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಳ್ಳುವವರೆಗೆ ನಿಯಮಾನುಸಾರ ತಪಾಸಣೆಗಳನ್ನು ಕೈಗೊಳ್ಳುವುದು ಹಾಗೂ ಯಾವುದೇ ಪಕ್ಷದವರು ಕಾಯ್ದೆಯನ್ನು ಉಲ್ಲಂಘಿಸಿ ಮಕ್ಕಳನ್ನು ಬಳಸಿಕೊಂಡಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಆದೇಶಿಸಿದ್ದಾರೆ.

ಮಕ್ಕಳ ಆತ್ಮ ವಿಶ್ವಾಸ ಹೆಚ್ಚಳಕ್ಕೆ ನಡಿಗೆ

ನಾಲ್ಕು ಹೆಜ್ಜೆ ನಡಿಗೆ ನಮಗೆ ಎಷ್ಟೊಂದು ಸಮಾಧಾನ, ನೆಮ್ಮದಿಯನ್ನು ಕೊಡುತ್ತೆ ಅಲ್ಲವಾ? ಬೆಳಗ್ಗಿನ ಚುಮು ಚುಮು ಚಳಿಯಲ್ಲೋ ಅಥವಾ ಇಬ್ಬನಿ ತುಂಬಿದ ರಸ್ತೆಯಲ್ಲೋ ಅಥವಾ ಸಂಜೆಯ ತಿಳಿ ಬೆಳಕಿನ ಜೊತೆಗೆ ನಡೆಯುತ್ತಿದ್ದರೆ ಇನ್ನಷ್ಟು ದೂರ ಮತ್ತಷ್ಟು ದೂರ ನಡೆದೇ ಹೋಗಬೇಕಿನುವಷ್ಟು ಹಿತ ಎನಿಸುತ್ತದೆ.

ಈಗಿನ ಜೀವನಶೈಲಿಯಲ್ಲಿ ಮನೆಯ ಹೊರಗೆ ಕಾಲಿಟ್ಟರೆ ಬೈಕ್, ಕಾರು ಅಥವಾ ಕ್ಯಾಬ್ ಹತ್ತಿ ಓಡಾಡುವ ಮಂದಿಯೇ ತುಂಬಿಹೋಗಿದ್ದಾರೆ. ದೊಡ್ಡವರ ಜೊತೆಗೆ ಮಕ್ಕಳಿಗೂ ಕೂಡ ನಡಿಗೆಯ ಅನುಭವವನ್ನು ಸವಿಯುವ ಅವಕಾಶವಿಲ್ಲ ಎಂಬುದು ದುಃಖದ ಸಂಗತಿ. ಮೊದಲೆಲ್ಲ ಶಾಲೆಗೆ ಹೋಗುವಾಗ ಬರುವಾಗ ನಡೆದೇ ಹೋಗಬೇಕಿತ್ತು. ಆದರೆ ಈಗಿನ ಮಕ್ಕಳು ಅದರಿಂದಲೂ ವಂಚಿತರಾಗಿದ್ದಾರೆ. ಶಾಲೆಗೆ ಹೋಗಲು ಸ್ಕೂಲ್ ಬಸ್ ಅಥವಾ ಆಟೋ ವ್ಯವಸ್ಥೆ ಇರುವುದರಿಂದ ಅವರು ಅದರಲ್ಲೇ ಹೋಗಬೇಕಾಗುತ್ತದೆ. ಅದರಿಂದ ಮಕ್ಕಳ ಶರೀರಕ್ಕೆ ಸರಿಯಾದ ವ್ಯಾಯಾಮ ಸಿಗುವುದಿಲ್ಲ. ಮಕ್ಕಳು ಅವಶ್ಯಕವಾಗಿ ವಾಕಿಂಗ್ ಮಾಡಬೇಕು. ವಾಕಿಂಗ್ ಮಾಡುವುದರಿಂದ ಕ್ಯಾಲೊರಿ ಬರ್ನ್ ಆಗುತ್ತದೆ, ರಕ್ತದ ಸಂಚಲನ ಸರಿಯಾಗಿ ಆಗುತ್ತದೆ, ಡಯಾಬಿಟೀಸ್ ನಿಂದ ದೂರವಿರಬಹುದು, ಇಮ್ಯುನಿಟಿ ಕೂಡ ಹೆಚ್ಚುತ್ತದೆ ಮತ್ತು ಮಾಂಸಖಂಡಗಳು ಕೂಡ ಗಟ್ಟಿಯಾಗುತ್ತದೆ. 

ಕೆಲವು ಹಣ್ಣು ತಿಂದ ಮೇಲೆ ನೀರು ಕುಡೀಬಾರದು ಅನ್ನೋದು ಗೊತ್ತಾ?

ಕುಟುಂಬ, ಮಕ್ಕಳ ಜೊತೆ ವಾಕ್ (Walk) ಮಾಡಿ : ವಾಕಿಂಗ್ ಅನ್ನು ಎಲ್ಲ ವಯಸ್ಸಿನವರೂ ಮಾಡಬಹುದು. ಇದರಿಂದ ಆಮ್ಲಜನಕದ ಹರಿವು ಹೆಚ್ಚುತ್ತದೆ. ಇದು ದೇಹದಲ್ಲಿ ಅಡ್ರಿನಾಲಿನ್ ಮತ್ತು ಎಂಡೊರ್ಫಿನ್ ಮಟ್ಟವನ್ನು ಹೆಚ್ಚಿಸುತ್ತದೆ. ನಡೆಯುವುದರಿಂದ ಖಿನ್ನತೆ, ಕೋಪ ಮತ್ತು ಒತ್ತಡದಿಂದ ಕೂಡ ದೂರವಿರಬಹುದು. ಕೆಲಸದ ಕಾರಣಕ್ಕೆ ಸದಾ ಮನೆಯಿಂದ ಹೊರಗೆ ಇರುವವರ ಮಕ್ಕಳು ಪ್ರೀತಿಯಿಂದ ವಂಚಿತರಾಗುತ್ತಾರೆ. ಅಂತವರು ದಿನದ ಸ್ವಲ್ಪ ಸಮಯವನ್ನು ತಮ್ಮ ಮಕ್ಕಳಿಗಾಗಿ ಮೀಸಲಿಟ್ಟು, ಮಕ್ಕಳನ್ನು ಪಾರ್ಕ್ ಗಳಿಗೆ ಕರೆದುಕೊಂಡು ಹೋದರೆ ಮಕ್ಕಳು ಆನಂದದಿಂದ ಇರುತ್ತಾರೆ. ಇದರಿಂದ ಅವರ ಮಾನಸಿಕ ಸ್ಥಿತಿ ಕೂಡ ಉತ್ತಮವಾಗಿರುತ್ತದೆ.

ಮಕ್ಕಳು (Children) ವಾಕಿಂಗ್ ಮಾಡೋದ್ರಿಂದ ಈ ಎಲ್ಲ ಲಾಭ  :  ಮಕ್ಕಳು ಪಟಾಣಿ ಹೆಜ್ಜೆಯಿಟ್ಟು ನಡೆದಾಡಲು ಶುರು ಮಾಡಿದ ನಂತ್ರ ಮಕ್ಕಳನ್ನು ಆದಷ್ಟು ನಡೆಯಲು ಬಿಡಿ. ಇದರಿಂದ ಮಗುವಿನ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತೆ. ಮಕ್ಕಳು ವಾಕಿಂಗ್ ಮಾಡುವುದು ಮತ್ತು ಆಟ ಆಡುವುದರಿಂದ ಮಗುವಿನ ಆರೋಗ್ಯ ಸುಧಾರಿಸುತ್ತದೆ. ಮಗುವಿನ ದೈಹಿಕ ಬೆಳವಣಿಗೆ ಕೂಡ ಸುಧಾರಿಸುತ್ತದೆ.

Latest Videos
Follow Us:
Download App:
  • android
  • ios