ಓಮಿನಿ ವ್ಯಾನ್‌ಗೆ ಖಾಸಗಿ ಸಂಸ್ಥೆ ಆರೆಂಜ್ ಬಸ್ ಡಿಕ್ಕಿ| ಸ್ಥಳದಲ್ಲೇ ಇಬ್ಬರ ಸಾವು, ನಾಲ್ಕು ಮಂದಿಗೆ ಗಾಯ| ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಬಳಿ ನಡೆದ ಘಟನೆ| ಗಾಯಾಳುಗಳನ್ನ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು|
ವಿಜಯಪುರ(ಮಾ.05): ಓಮಿನಿ ವ್ಯಾನ್‌ಗೆ ಹಿಂಬದಿಯಿಂದ ಖಾಸಗಿ ಸಂಸ್ಥೆ ಆರೆಂಜ್ ಬಸ್ ಗುದ್ದಿದ ಪರಿಣಾಮ ಇಬ್ಬರು ಸಾವನ್ನಪ್ಪಿ, ನಾಲ್ವರಿಗೆ ಗಾಯವಾದ ಘಟನೆ ಜಿಲ್ಲೆಯ ಕೊಲ್ಹಾರ ಪಟ್ಟಣದ ಬಳಿ ಬುಧವಾರ ತಡರಾತ್ರಿ ನಡೆದಿದೆ. ಮೃತರನ್ನ ಚಾಂದಬೀ ಅಂಗಡಿ (45) ಮಹೀರಾಬಾನು ದೊಡಮನಿ (3) ಎಂದು ಗುರುತಿಸಲಾಗಿದೆ.
ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಓಮಿನಿ ವ್ಯಾನ್‌ಗೆ ಕೊಲ್ಹಾರ ಪಟ್ಟಣದ ಬಳಿ ಯುಕೆಪಿ ವೃತ್ತದಲ್ಲಿ ನಡೆಯುತ್ತಿರುವ ಅಂಡರ್ ಪಾಸ್ ಕಾಮಗಾರಿಯ ಗುಂಡಿಗೆ ಬಿದ್ದಿದೆ. ಈ ವೇಳೆ ವ್ಯಾನ್‌ನಲ್ಲಿದ್ದ ಅಜ್ಜಿ ಹಾಗೂ ಮೊಮ್ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಗಾಯಾಳುಗಳನ್ನ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೆಂಜ್ ಖಾಸಗಿ ಬಸ್‌ನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಅಂಡರ್ ಪಾಸ್ ಅವೈಜ್ಞಾನಿಕ ಕಾಮಗಾರಿಯೇ ಘಟನೆಗೆ ಕಾರಣ ಎಂದು ಸಾರ್ವಜನಿಕರ ಆಕ್ರೋಷ ವ್ಯಕ್ತಪಡಿಸಿದ್ದಾರೆ.
