ಶಿವಮೊಗ್ಗ : ರಸ್ತೆ ಬಿಟ್ಟು ಚರಂಡಿಗೆ ಇಳಿದ ಬಸ್ - ತಪ್ಪಿದ ಭಾರಿ ಅವಘಡ
ಖಾಸಗಿ ಬಸ್ಸೊಂದು ರಸ್ತೆ ಬಿಟ್ಟು ಚರಂಡಿಗೆ ಇಳಿದಿದ್ದು, ಭಾರೀ ಅವಘಡವೊಂದು ತಪ್ಪಿದಂತಾಗಿದೆ.
ಶಿವಮೊಗ್ಗ(ಅ.06): ಖಾಸಗಿ ಬಸ್ ರಸ್ತೆ ಬಿಟ್ಟು ಚರಂಡಿಗೆ ನುಗ್ಗಿದ್ದು, ಅವಘಡವೊಂದು ತಪ್ಪಿದೆ.
ಶಿವಮೊಗ್ಗ ಜಿಲ್ಲೆಯ ಸಾಗರಿಂದ ಬರುತ್ತಿದ್ದ ಬಸ್ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಚರಂಡಿಗೆ ನುಗ್ಗಿದ್ದು ಬಸ್ಸಲ್ಲಿದ್ದ ಪ್ರಯಾಣಿಕರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸಾಗರ ತಾಲೂಕಿನ ಆನಂದಪುರ ಕಾಲೇಜು ಬಳಿ ಖಾಸಗಿ ಬಸ್ಸಿಗೆ ಇನೋವ ಕಾರು ಎದುರಾದಾಗ ಅಪಘಾತ ತಪ್ಪಿಸಲು ಬಸ್ಸನ್ನು ರಸ್ತೆಯ ಬಲಬದಿಯ ಚರಂಡಿಗೆ ಚಾಲಕ ಇಳಿಸಿ, ಅವಘಡ ತಪ್ಪಿಸಿದ್ದಾನೆ.
ಸಾಗರ ಗ್ರಾಮಾಂತರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.