ಟ್ರ್ಯಾಕ್ಟರ್ ಹರಿಸಿ 2 ಎಕರೆ ಎಲೆಕೋಸು ನಾಶಪಡಿಸಿದ ರೈತ
ಬೆಲೆ ಕುಸಿತದಿಂದ ನೊಂದ ರೈತ ಸುಮಾರು ಎರಡು ಎಕರೆಯಷ್ಟು ಎಲೆಕೋಸನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ. ಬೆಲೆ ಇಲ್ಲದ ಕಾರಣ ಈ ರೀತಿ ಮಾಡಿದ್ದಾರೆ.
ಚಿಕ್ಕಮಗಳೂರು (ಮಾ.24): ಎಲೆಕೋಸು ಬೆಲೆ ಕುಸಿತದಿಂದ ಕಂಗಲಾಗಿರುವ ರೈತನೋರ್ವ ತನ್ನ ಹೊಲದಲ್ಲಿ ಬೆಳೆದಿದ್ದ ಬೆಳೆಯ ಮೇಲೆ ಟ್ರ್ಯಾಕ್ಟರ್ ಹೊಡೆದು ನಾಶಪಡಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ರೈತ ಬಸವರಾಜ್ ಅವರು ತಮ್ಮ 2 ಎಕರೆ ಹೊಲದಲ್ಲಿ ಸುಮಾರು .40 ಸಾವಿರ ಖರ್ಚು ಮಾಡಿ ಎಲೆಕೋಸು ಬೆಳೆದಿದ್ದರು. ಫಸಲು ಕೈಗೆ ಬಂದಿತಾದರೂ ಒಳ್ಳೆಯ ಬೆಲೆ ಇಲ್ಲದ್ದರಿಂದ ಎಲೆಕೋಸನ್ನು ಕೀಳದೆ ಹೊಲದಲ್ಲೇ ಬಿಟ್ಟು ಅದರ ಮೇಲೆ ಟ್ರ್ಯಾಕ್ಟರ್ ಹೊಡೆದು ನಾಶಪಡಿಸಿದರು.
ರೈತರಿಗೆ ಕಹಿಯಾದ ಹುಣಸೆ : ಭಾರೀ ದರ ಕುಸಿತ
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಎಲೆಕೋಸು ಬೆಲೆ ಕೆ.ಜಿ.ಗೆ 45 ರುಪಾಯಿ ಇತ್ತು. ಈಗ 6 ರುಪಾಯಿಗೆ ಕುಸಿದಿದೆ ಹೀಗಾಗಿ ರೈತರು ತಾವು ಬೆಳೆದ ಫಸಲನ್ನು ತಮ್ಮ ಕೈಯಾರೆ ನಾಶಪಡಿಸುವ ಸ್ಥಿತಿಗೆ ಬಂದಿದ್ದಾರೆ.