ಆರೋಗ್ಯ ಸಚಿವ ಶ್ರೀರಾಮುಲು ಜಿಲ್ಲೆಯಲ್ಲೇ ಆಂಬುಲೆನ್ಸ್ ಸಿಗದೇ ಗರ್ಭಿಣಿಯ ನರಳಾಟ
ಆಂಬುಲೆನ್ಸ್ ಸಿಗದೇ ಗರ್ಭಿಣಿಯ ಪರದಾಟ| ರಾಯಚೂರು ತಾಲೂಕಿನ ಕಟ್ಲಟ್ಕೂರು ಗ್ರಾಮದಲ್ಲಿ ನಡೆದ ಘಟನೆ| ಬೇಜಬ್ದಾರಿಯಾಗಿ ವರ್ತಿಸಿದ 108 ಸಿಬ್ಬಂದಿ| 108 ಸಿಬ್ಬಂದಿ ವಿರುದ್ಧ ಸಾರ್ವಜನಿಕರ ಆಕ್ರೋಶ|
ರಾಯಚೂರು(ಫೆ.09): ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ಜಿಲ್ಲೆಯಲ್ಲೇ ಗರ್ಭಿಣಿಯೊಬ್ಬರು ಆಂಬುಲೆನ್ಸ್ ಸಿಗದೇ ಪರದಾಡಿದ ಘಟನೆ ನಗರದಲ್ಲಿ ನಡೆದಿದೆ. ಓರಿಸ್ಸಾ ಮೂಲದ ಕಾರ್ಮಿಕ ಮಹಿಳೆ ಆಂಬುಲೆನ್ಸ್ ಸಿಗದೇ ನರಳಾಡಿದ್ದಾರೆ.
ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಮಹಿಳೆಯ ಸಂಬಂಧಿ 108ಗೆ ಫೋನ್ ಮಾಡಿದ್ದಾರೆ. ಆದರೆ, 108 ಸಿಬ್ಬಂದಿ ಸರಿಯಾಗಿ ಸ್ಪಂದಿಸದೆ ಕರೆಯನ್ನ ಕಟ್ ಮಾಡಿದ್ದಾರೆ. ಫೋನ್ ಮಾಡಿದ್ರೆ 108 ವಾಹನದ ಚಾಲಕರು ಬ್ಯುಸಿಯಾಗಿ ಇದ್ದಾರೆ ಅಂತ ಹೇಳುವ ಮೂಲಕ ಬೇಜಬ್ದಾರಿಯಾಗಿ ವರ್ತಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹೀಗಾಗಿ ಗರ್ಭಿಣಿ ಹೆರಿಗೆ ನೋವಿನಿಂದ ಕಟ್ಲಟ್ಕೂರು ಗ್ರಾಮದಿಂದ ಟಂಟಂ ವಾಹನದಲ್ಲಿ ನರಳುತ್ತಾ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಬಂದಿದ್ದಾಳೆ. ಮಹಿಳೆಯ ನರಳಾಟ ನೋಡಿದ ಸ್ಥಳೀಯರು 108 ಸಿಬ್ಬಂದಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.