Udupi: ಮದ್ಯಪಾನ ವಯಸ್ಸು 18ಕ್ಕೆ ಇಳಿಸಿದ ಸರಕಾರ, ಪ್ರಮೋದ್ ಮುತಾಲಿಕ್ ಖಂಡನೆ
ಮದ್ಯಪಾನ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿ, ರಾಜ್ಯ ಸರ್ಕಾರ ಘೋಷಿಸಿರುವುದು ಖಂಡನೀಯ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಉಡುಪಿ (ಫೆ.24): ಮದ್ಯಪಾನ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿ, ರಾಜ್ಯ ಸರ್ಕಾರ ಘೋಷಿಸಿರುವುದು ಖಂಡನೀಯ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು. ಅವರು ಶುಕ್ರವಾರ ಉಡುಪಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ದೇಶಾದ್ಯಂತ ಮದ್ಯಪಾನವನ್ನು ಬ್ಯಾನ್ ಮಾಡಬೇಕು ಎಂದು ಗಾಂಧೀಜಿ ಹೇಳಿದ್ದರು. ಮಹಾತ್ಮ ಗಾಂಧೀಜಿ 75 ವರ್ಷದ ಹಿಂದೆಯೇ ಸಲಹೆ ಕೊಟ್ಟಿದ್ದರು. ಮದ್ಯಪಾನವನ್ನೇ ಅನುಸರಿಸಿ ಸರಕಾರಗಳು ರಾಜಕಾರಣ ಮಾಡುತ್ತಿವೆ, ಸರಕಾರಗಳು ಅಸಹ್ಯಕರ ಪರಿಸ್ಥಿತಿಯನ್ನು ನಿರ್ಮಾಣ ಮಾಡಿವೆ. ವಿದ್ಯಾರ್ಥಿಗಳು ಕಾರ್ಮಿಕರು ರೈತರು ಮಧ್ಯಪಾನಕ್ಕೆ ಬಲಿಯಾಗುತ್ತಿದ್ದು, ಮದ್ಯಪಾನಕ್ಕೆ ಕಡಿವಾಣ ಹಾಕದೆ ಸರಕಾರ ಪ್ರೋತ್ಸಾಹ ಮಾಡುತ್ತಿದೆ. ರಾಜ್ಯ ಸರ್ಕಾರ ಈ ಆದೇಶವನ್ನು ಕೂಡಲೇ ವಾಪಸ್ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಮಹಿಳಾ ಸಂಘಟನೆಗಳು, ದೇವಸ್ಥಾನದ ಧರ್ಮದರ್ಶಿಗಳು ಮತ್ತು ಪ್ರಜ್ಞಾವಂತರನ್ನು ಒಳಗೊಂಡು ಶ್ರೀರಾಮ ಸೇನೆ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಮಾಡುತ್ತದೆ. ಮದ್ಯಪಾನ ಮುಕ್ತ ಸಮಾಜವನ್ನು ಡಾ. ವೀರೇಂದ್ರ ಹೆಗ್ಡೆ ಘೋಷಣೆ ಮಾಡಿದ್ದರು. ಡಾ. ವೀರೇಂದ್ರ ಹೆಗ್ಗಡೆಯವರು ರಾಜ್ಯಸಭೆಯಲ್ಲಿ ಈ ಬಗ್ಗೆ ಧನಿಯೆತ್ತಬೇಕು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ತಿಳಿ ಹೇಳಬೇಕು ಎಂದರು.
ಹಂಪಿಯಲ್ಲಿ ವಿದೇಶಿ ಪ್ರವಾಸಿಗರಿಂದ ಮದ್ಯ ಸೇವನೆ!
ಹೊಸಪೇಟೆ: ಐತಿಹಾಸಿಕ ಹಂಪಿಯ ಸ್ಮಾರಕದ ಬಳಿ ವಿದೇಶಿ ಪ್ರವಾಸಿಗರು ಮದ್ಯ ಸೇವನೆ ಮಾಡಿರುವ ಆರೋಪ ಕೇಳಿ ಬಂದಿದೆ. ಹಂಪಿಯ ಪುರಂದರ ಮಂಟಪದ ಬಳಿ ವಿದೇಶಿಗರು ಮದ್ಯ ಸೇವನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಕೂಡಲೇ ಕ್ರಮವಹಿಸಬೇಕು ಎಂಬುದು ಚರಿತ್ರೆಪ್ರಿಯರ ಒತ್ತಾಯವಾಗಿದೆ.
ಕೇರಳದ ನರ್ಸಿಂಗ್ ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಸ್ನೇಹಿತರಿಂದಲೇ ಅತ್ಯಾಚಾರ
ಹಂಪಿಯಲ್ಲಿ ಮಾಂಸಾಹಾರ, ಮದ್ಯಪಾನ ಸೇವನೆ ನಿಷೇಧವಿದ್ದರೂ ಈ ರೀತಿಯ ವರ್ತನೆ ನಡೆಯುತ್ತಿರುವುದು ಖಂಡನೀಯ. ಪೊಲೀಸ್ ಇಲಾಖೆ, ಪ್ರವಾಸಿ ಮಿತ್ರರ ಕಣ್ತಪ್ಪಿಸಿ ಈ ಕುಕೃತ್ಯ ನಡೆದಿದೆ ಎನ್ನಲಾಗಿದೆ. ಈ ಘಟನೆ ಕುರಿತು ಇದುವರೆಗೆ ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಆದರೆ, ಇಂಥ ಕೃತ್ಯಗಳು ನಡೆಯಬಾರದು. ಹಂಪಿಯ ಪಾವಿತ್ರ್ಯ ಕಾಪಾಡಬೇಕು. ಹಂಪಿಯಲ್ಲಿ ಮದ್ಯಪಾನ, ಮಾಂಸಾಹಾರ ಸೇವನೆ ಮಾಡಬಾರದು ಅಂತ ಬೋರ್ಡ್‌ಗಳನ್ನು ಹಾಕಲಾಗಿದೆ. ಆದರೆ, ಈ ರೀತಿ ಮದ್ಯಪಾನ ಸೇವನೆ, ಮೋಜು, ಮಸ್ತಿ ನಡೆಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
KSRTC ಸ್ಲೀಪರ್ ಬಸ್‌ನ ಯುವತಿ ಸೀಟಿನ ಮೇಲೆ ಮೂತ್ರ ವಿಸರ್ಜನೆ: ಪ್ರಯಾಣಿಕರಿಂದ ಯವಕನಿಗೆ ಧರ್ಮದೇಟು
ಹಂಪಿ ಹಿಂದುಗಳ ಶ್ರದ್ಧಾ ಕೇಂದ್ರವೂ ಆಗಿದೆ. ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿದೆ. ಹೀಗಿದ್ದರೂ ಹಂಪಿಯಲ್ಲಿ ವಿದೇಶಿ ಪ್ರವಾಸಿಗರು ಮದ್ಯಸೇವನೆ ಮಾಡಿರುವುದು ಖಂಡನೀಯವಾಗಿದೆ. ಈ ಕೂಡಲೇ ಕ್ರಮ ವಹಿಸಬೇಕು ಎಂದು ಚರಿತ್ರೆ ಹಾಗೂ ಸ್ಮಾರಕಪ್ರಿಯರು ಒತ್ತಾಯಿಸಿದ್ದಾರೆ.