Chikkamagaluru: ವಿದ್ಯುತ್ ಕಣ್ಣಾಮುಚ್ಚಾಲೆ: ಗ್ರಾಮಸ್ಥರ ಪರದಾಟ

* ನಾಡಕಛೇರಿಗೆ ಬರುವ ಸಾರ್ಜನಿಕರಿಗೆ ವಿದ್ಯುತ್ ಸಮಸ್ಯೆ.
* ವಿಧವಾ ವೇತನ, ಜಾತಿ ದೃಢೀಕರಣ ಪತ್ರ ಪಡೆಯುವ ಬರುವ ಜನರಿಗೆ ಸಿಬ್ಬಂದಿಗಳಿಂದ ಕರೆಂಟ್ ಇಲ್ಲ ಎನ್ನುವ ಉತ್ತರ.
* ಕೂಲಿ ಕೆಲಸ ಬಿಟ್ಟು ನಿತ್ಯ ಗಂಟೆಗಟ್ಟಲೆ ನಾಡ ಕಚೇರಿ ಮುಂದೆ ಕಾಯುವ ಪರಿಸ್ಥಿತಿ.

Power Supply Problem in Chikkamagaluru District gvd

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.31): ಬೇಸಿಗೆ ಆರಂಭವಾಯಿತೆಂದರೆ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಆರಂಭವಾಗುತ್ತೆ (Power Supply Problem). ಅದರಲ್ಲೂ ಮಲೆನಾಡಿನ ಭಾಗದಲ್ಲಿ ಕರೆಂಟ್ ಯಾವಾಗ ಇರುತ್ತೆ, ಯಾವಾಗ ಹೋಗುತ್ತೆ ಎನ್ನುವುದೇ ಯಕ್ಷ ಪ್ರಶ್ನೆ. ಇದರ ನಡುವೆ ಸರ್ಕಾರ ಗ್ರಾಮಾಂತರ ಪ್ರದೇಶದ ಜನರಿ ಇ  ಡಿಜಿಟಲ್ (E-Digital) ಸೇವೆಯ ಮೂಲಕ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಜನರು ವಿವಿಧ ಸೇವೆಗಳನ್ನು ಪಡೆಯುಲು ನಾಡ ಕಛೇರಿಗೆ ಜನರು ಹೋಗಲೇ ಬೇಕು. ಆದ್ರೆ ನಾಡಕಛೇರಿಯಲ್ಲಿ ವಿದ್ಯುತ್ ಸಮಸ್ಯೆಯಿಂದ ಜನರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜನರಿಗೆ  ನಾಳೆ ಬಾ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಾಡಕಛೇರಿಗೆ ಬರುವ ಜನರಿಗೆ ವಿದ್ಯುತ್ ಸಮಸ್ಯೆ: ನಾಡಕಛೇರಿ ಅಂದ್ರೆ ಈಗ ಜನರಿಗೆ ಅನೇಕ‌ ಮಾಹಿತಿ, ಸೇವೆಗಳನ್ನು ಒದಗಿಸುವ  ಕೇಂದ್ರ. ಆದ್ರೆ ಅದೇ ಕೇಂದ್ರಗಳು ಕೆಲವೊಂದು ಕಡೆ ಶಾಪವಾಗಿ ಪರಿಣಮಿಸಿದೆ. ಮಲೆನಾಡಿನ ಭಾಗವಾದ ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಜನರ ಉದ್ಯೋಗ ಕೂಲಿ ಕೆಲಸ. ಕೆಲಸಕ್ಕಾಗಿ ಜನರು ಬೆಳಿಗ್ಗೆ ಮನೆಯಿಂದ ಹೊರಗಡೆ ಹೋದರೆ ಸಂಜೆಯೇ ಬರುವುದು, ಇದರ ನಡುವೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಜನರು ನಾಡಿಕಛೇರಿಗೆ ಆಗಮಿಸಿ  ಅರ್ಜಿಗಳನ್ನು ಹಾಕಬೇಕಾಗುತ್ತೆ.

Chikkamagaluru: ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿ ಶ್ರೀಗಂಧ ಬೆಳೆಗಾರರಿಂದ ರಕ್ತದ ಚಳವಳಿ

ಆದರೆ ಚಿಕ್ಕಮಗಳೂರು ಜಿಲ್ಲೆಯ ‌ಮೂಡಿಗೆರೆಯ ತಾಲ್ಲೂಕಿನ ಜಾವಳಿ ಗ್ರಾಮದಲ್ಲಿ ಬಡಜನರು ಇ ಡಿಜಿಟಲ್ ಸೌಲಭ್ಯ ಪಡೆಯುಲು ಪರದಾಟ ನಡೆಸುತ್ತಿದ್ದಾರೆ. ಏಕೆಂದರೆ ವಿದ್ಯುತ್ ಸಮಸ್ಯೆಯಿಂದ ನಾಡಕಛೇರಿಯಲ್ಲಿ‌ಕೆಲಸವೇ ಆಗುತ್ತಿಲ್ಲ, ಇದರ ಪರಿಣಾಮ ಜನರು ಬಿಸಿಲ ಧಗೆಯಲ್ಲೇ ನಿಂತಲೇ‌ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಛೇರಿ ಸಿಬ್ಬಂದಿಗಳು ಜನರಿಗೆ ನಾಳೆ ಬನ್ನಿ ,ಇಲ್ಲವೇ  ಕರೆಂಟ್ ಬರುವ ತನಕ ಕಾಯಿರಿ ಎನ್ನುವ ಉತ್ತರವನ್ನು ನೀಡುತ್ತಿದ್ದಾರೆ. 

ನಾಡಕಚೇರಿಯಲ್ಲಿ ಸೋಲಾರ್, ಯುಪಿಎಸ್ ನಿಷ್ಕ್ರಿಯ-ಸೇವೆ ಪಡೆಯಲು ಸಾರ್ವಜನಿಕರ ಪರದಾಟ: ಮೂಡಿಗೆರೆ ತಾಲ್ಲೂಕಿನ ಜಾವಳಿ ನಾಡಕಚೇರಿಯಲ್ಲಿರುವ ಯುಪಿಎಸ್ ಮತ್ತು ಸೋಲಾರ್ ಕೆಲ ವರ್ಷದಿಂದ ನಿಷ್ಕ್ರಿಯಗೊಂಡು ಉಪಯೋಗಕ್ಕೆ ಬಾರದಂತಾಗಿದೆ. ಇದರಿಂದಾಗಿ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಸಾರ್ವಜನಿಕರು ಸೇವೆ ಪಡೆಯಲಾಗದೇ ಪರದಾಡುವಂತಾಗಿದೆ. ಈ ಭಾಗದಲ್ಲಿ ಆಗಾಗ ವಿದ್ಯುತ್ ಕಡಿತಗೊಳ್ಳುವುದು ಸಾಮಾನ್ಯವಾಗಿದ್ದು, ನಾಡಕಚೇರಿಗೆ ವಿವಿಧ ಸೇವೆ ಪಡೆಯಲು ಬರುವ ಸಾರ್ವಜನಿಕರು ಸಕಾಲಕ್ಕೆ ಸೇವೆ ಪಡೆಯಲು ಸಾಧ್ಯವಾಗದೇ ಗಂಟೆಗಟ್ಟಲೇ ಕಾಯುವಂತಾಗಿದೆ. 

Chikkamagaluru: ಸಾಲ ಮರುಪಾವತಿ ಮಾಡದ ಹಿನ್ನೆಲೆ ಹೋಂ ಸ್ಟೇ ಸೀಜ್!

ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ‌ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಒಟ್ಟಾರೆ ಮಲೆನಾಡಿನಲ್ಲಿ ಪವರ್ ಕಟ್ ಎಷ್ಟು ಸಮಯ ಅನ್ನುವುದು ಕೂಡ ಈವರೆಗೂ ನಿಗದಿಯಾಗಿಲ್ಲ, ಮೆಸ್ಕಾಂ ಇಲಾಖೆ ಮನಸ್ಸಿಗೆ ಬಂದಂತೆ ವಿದ್ಯುತ್ ಅನ್ನು ಕಡಿತಗೊಳಿಸುವ  ಮೂಲಕ ಸರ್ಕಾರಿ ಕಛೇರಿಗಳಲ್ಲಿ ಜನರ ಕೆಲಸ ವಿಳಂಬವಾಗುತ್ತದೆ. ಈ ಬಗ್ಗೆಯೂ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ.

Latest Videos
Follow Us:
Download App:
  • android
  • ios