ವಿದ್ಯುತ್‌ ಸುರಕ್ಷತೆಗೆ ಮೊದಲ ಆದ್ಯತೆ: ಬೆಸ್ಕಾಂ ಇಇ ಜಗದೀಶ್‌ ಸಲಹೆ

ವಿದ್ಯುತ್‌ ಅಪಘಾತಗಳ ಬಗ್ಗೆ ಅರಿವು ಮುಖ್ಯ, ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಆಕಸ್ಮಿಕವಾಗಿ ನಡೆಯುವ ಅವಘಡಗಳ ಬಗ್ಗೆ ಸಾರ್ವಜನಿಕರು 1912 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಬೆಸ್ಕಾಂ ಇಇ ಜಗದೀಶ್‌ ಕರೆ ನೀಡಿದರು.

Power safety first priority: Jagadish advises snr

 ಮಧುಗಿರಿ :  ವಿದ್ಯುತ್‌ ಅಪಘಾತಗಳ ಬಗ್ಗೆ ಅರಿವು ಮುಖ್ಯ, ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಆಕಸ್ಮಿಕವಾಗಿ ನಡೆಯುವ ಅವಘಡಗಳ ಬಗ್ಗೆ ಸಾರ್ವಜನಿಕರು 1912 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಬೆಸ್ಕಾಂ ಇಇ ಜಗದೀಶ್‌ ಕರೆ ನೀಡಿದರು.

ಪಟ್ಟಣದ ಶಿರಾ ಗೆಟ್‌ ಬಳಿಯಿರುವ ಕೆಪಿಟಿಸಿಎಲ್‌ ಹಾಗೂ ಬೆಸ್ಕಾಂ ಇಲಾಖೆಯಿಂದ ವಿದ್ಯುತ್‌ ಅವಘಡ ಮತ್ತು ಸುರಕ್ಷತೆ ಬಗ್ಗೆ ಸಾರ್ವನಿಕರಿಗೆ ಅರಿವು ಮೂಡಿಸುವ ಸುರಕ್ಷತಾ ಜಾಥಗೆ ಚಾಲನೆ ನೀಡಿ ಮಾತನಾಡಿದರು.

ಸಾರ್ವಜನಿಕರಿಗೆ ಇಲಾಖೆಯ ಬಗ್ಗೆ ಅರಿವು ಮೂಡಿಸುವುದೆ ಇದರ ಉದ್ದೇಶ, ವಿದ್ಯುತ್‌ ಚಾಲನೆಯಲ್ಲಿರುವ ಮಾರ್ಗಗಳಲ್ಲಿ ವಿದ್ಯುತ್‌ ತಂತಿಗಳು ತುಂಡಾಗಿ ಬಿದ್ದಾಗ ಕೂಡಲೇ ಸಾರ್ವಜನಿಕರು ಇಲಾಖೆಗೆ ತಿಳಿಸಿ, ಅಧಿಕಾರಿಗಳು ಸ್ಥಳ್ಕಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲಾಗುವುದು. ಐಎಸ್‌ಐ ಗುರುತಿನ ವಿದ್ಯುತ್‌ ಪರಿಕರಗಳ ಬಳಕೆ ಮಾಡಬೇಕು. ದೊಡ್ಡ ವಿದ್ಯುತ್‌ ಲೈನ್‌ಗಳ ಬಳಿ ದನ ಕರುಗಳನ್ನು ಕಟ್ಟ ಬಾರದು. ಅನಗತ್ಯವಾಗಿ ವಿದ್ಯುತ್‌ ಕಂಬಗಳನ್ನು ಮುಟ್ಟದೆ ಕಂಬಗಳಿಂದ ದೂರವಿರಬೇಕು. ವಿದ್ಯುತ್‌ ಅವಘಡಗಳ ನಿಯಂತ್ರಣದ ಬಗ್ಗೆ ನಮ್ಮ ಸಿಬ್ಬಂದಿಗೆ ಇಲಾಖೆಯಿಂದ ತರಬೇತಿ ನೀಡಲಾಗಿದೆ. ನಾಗರಿಕರು ಒದ್ದೆಯಾದ ಕೈಗಳಿಂದ ವಿದ್ಯುತ್‌ ಸ್ವಿಚ್‌ಗಳನ್ನು ಮುಟ್ಟ ಬಾರದು ಎಂದರು.

ಕೆಪಿಟಿಸಿಎಲ್‌ ಅಧಿಕಾರಿ ಪುರುಷೋತ್ತಮ್‌ ಮಾತನಾಡಿ, ಬೆಸ್ಕಾಂ ಹಾಗೂ ಕೆಪಿಟಿಸಿಎಲ್‌ ಅವರ ಸಹಯೋಗದೊಂದಿಗೆ ವಿದ್ಯುತ್‌ ಸುರಕ್ಷತೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಥವನ್ನು ಇಲಾಖೆಯಿಂದ ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ವಿದ್ಯುತ್‌ ಸಂಪರ್ಕವು ಇಂದು ಎಲ್ಲರಿಗೂ ಅವಶ್ಯಕವಾಗಿದೆ. ಸುರಕ್ಷತೆ ಜೊತೆಗೆ ಗುಣ ಮಟ್ಟದ ವಿದ್ಯುತನ್ನು ಪೂರೈಕೆ ಮಾಡುವ ಉದ್ದೇಶವನ್ನು ಇಲಾಖೆ ಹೊಂದಿದೆ ಎಂದರು.

ಪ್ರಮುಖ ಬೀದಿಗಳಲ್ಲಿ ಸುರಕ್ಷತೆ ಬಗ್ಗೆ ಬಿತ್ತಿ ಪತ್ರಗಳನ್ನು ಸಾರ್ವಜನಿಕರಿಗೆ ಬೆಸ್ಕಾಂ ಸಿಬ್ಬಂದಿ ವಿತರಿಸಿದರು. ಕಾರ್ಯಕ್ರಮದಲ್ಲಿ ಶೈಲೇಂದ್ರ ಕುಮಾರ್‌,ಮಲ್ಲಣ್ಣ,ಎಎಇಇ ಮಾಯಕಣ್ಣ ನಾಯಕ್‌, ತಿಮ್ಮಯ್ಯ, ಪ್ರಸನ್ನಕುಮಾರ್‌. ಎಓ ಸುನೀಲ್‌, ಮಹೇಶ್‌,ಎಚ್‌. ಅಂಜಯ್ಯ,,ಶ್ರೀರಂಗಪ್ಪ, ಸೀನಪ್ಪ, ರಾಮಣ್ಣ, ರವೀಂದ್ರ, ದಾಸರಹಳ್ಳಿ ಮಂಜುನಾಥ್‌, ಶಿವಣ್ಣಿ, ನಾಗೇಂದ್ರ, ಗುತ್ತಿಗೆದಾರರು ಸೇರಿದಂತೆ ಇತರರಿದ್ದರು.

Latest Videos
Follow Us:
Download App:
  • android
  • ios