ಬೆಸ್ಕಾಂ-ಗ್ರಾಪಂ ಚೆಲ್ಲಾಟ: ಸಾರ್ವಜನಿಕರ ಆರೋಗ್ಯಕ್ಕೆ ಕುತ್ತು

ನೀರಿನ ಘಟಕಗಳ ವಿದ್ಯುತ್‌ ಬಿಲ್‌ ಪಾವತಿ ಮಾಡಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದು, ಸಮರ್ಪಕ ನಿರ್ವಹಣೆಯ ವೈಫಲ್ಯದಿಂದ ಸಾರ್ವಜನಿಕರಿಗೆ ಮತ್ತೆ ಫೊ್ಲೕರೈಡ್‌ ನೀರು ಕುಡಿಯಬೇಕಾದ ಪರಿಸ್ಥಿತಿಗೆ ಒದಗಿದೆ.

Power cut of water plants  problem for drinking water snr

 ಎಚ್‌.ಎನ್‌.ನಾಗರಾಜು ಹೊಳವನಹಳ್ಳಿ.

 ಹೊಳವನಹಳ್ಳಿ (ಡಿ.19):  ನೀರಿನ ಘಟಕಗಳ ವಿದ್ಯುತ್‌ ಬಿಲ್‌ ಪಾವತಿ ಮಾಡಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದು, ಸಮರ್ಪಕ ನಿರ್ವಹಣೆಯ ವೈಫಲ್ಯದಿಂದ ಸಾರ್ವಜನಿಕರಿಗೆ ಮತ್ತೆ ಫೊ್ಲೕರೈಡ್‌ ನೀರು ಕುಡಿಯಬೇಕಾದ ಪರಿಸ್ಥಿತಿಗೆ ಒದಗಿದೆ.

ಕೊರಟಗೆರೆ ತಾಲೂಕಿನ 24 ಗ್ರಾಪಂಗಳಲ್ಲಿ 154 ಶುದ್ದ ಕುಡಿಯುವ ನೀರಿನ (Drinking Water)  ಘಟಕಗಳಿದ್ದು. 154 ಘಟಕಗಳಲ್ಲಿ 20 ಘಟಕ ಗ್ರಾಪಂಗೆ ಹಸ್ತಾಂತರ ಆಗಿವೆ. 77ಘಟಕಗಳಿಗೆ ಮರು ಟೆಂಡರ್‌ಗೆ ಆಹ್ವಾನಿಸಿ 2 ವರ್ಷ ಕಳೆದಿದೆ. ಇನ್ನೂಳಿದ ಬಹುತೇಕ ನೀರಿನ ಘಟಕ ದುಸ್ಥಿತಿಗೆ ತಲುಪಿವೆ. ಘಟಕಗಳ ನಿರ್ವಹಣೆ ವಿಚಾರದಲ್ಲಿ ಅಧಿಕಾರಿಗಳ ಆಡಳಿತ ವೈಫಲ್ಯ ಕಂಡುಬಂದಿದೆ. 4 ವರ್ಷದಿಂದ ಬಾಕಿ ಉಳಿದಿರುವ 84 ಲಕ್ಷ ವಿದ್ಯುತ್‌ (electricity) ಶುಲ್ಕ ಪಾವತಿಸದ ಪರಿಣಾಮ ಬೆಸ್ಕಾಂ ಇಲಾಖೆ ವಿದ್ಯುತ್‌ ಸಂಪರ್ಕ ಕಡಿತ ಮಾಡಿದೆ.

2019-20ರಲ್ಲಿ 24 ಗ್ರಾಪಂಗಳ 154 ಘಟಕದ ವಿದ್ಯುತ್‌ ಬಾಕಿ ಶುಲ್ಕ 64 ಸಾವಿರ ಮಾತ್ರ. 154 ಘಟಕ ನಿರ್ವಹಣೆ ಮಾಡುತ್ತಿದ್ದ ಆಂಧ್ರ ಮೂಲದ ಗುತ್ತಿಗೆದಾರರ 5ವರ್ಷದ ಅವಧಿ​ಯು 2020ಕ್ಕೆ ಮುಕ್ತಾಯವಾಗಿದೆ. ಬೆಸ್ಕಾಂ ಇಲಾಖೆಗೆ 4 ವರ್ಷದಿಂದ ವಿದ್ಯುತ್‌ ಶುಲ್ಕ ಪಾವತಿಸದೇ ಪ್ರಸ್ತುತ ವಿದ್ಯುತ್‌ ಶುಲ್ಕ 67 ಲಕ್ಷಕ್ಕೆ ಏರಿದೆ. 67 ಲಕ್ಷಕ್ಕೆ ಬಡ್ಡಿಯೇ ಈಗ 17 ಲಕ್ಷ ಬಂದಿದ್ದು ಒಟ್ಟು 84 ಲಕ್ಷ ಬಾಕಿ ಕಟ್ಟಬೇಕಿದೆ. ಬೆಸ್ಕಾಂ ಮತ್ತು ಗ್ರಾಪಂ ಚೆಲ್ಲಾಟಕ್ಕೆ ತಾಲೂಕಿನ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ.

4 ವರ್ಷದಿಂದ 24 ಗ್ರಾಪಂಗಳ 154 ಶುದ್ದ ನೀರಿನ ಘಟಕಗಳ ವಸೂಲಾತಿ ಹಣದ ಅಂಕಿ ಅಂಶ ಎಷ್ಟು. ಜನರಿಂದ ವಸೂಲಿ ಮಾಡಿದ ಲಕ್ಷಾಂತರ ರು. ಹಣದಲ್ಲಿ ವಿದ್ಯುತ್‌ ಶುಲ್ಕ ಪಾವತಿಗೆ ತಡಮಾಡಿದ್ದೇಕೆ. 4ವರ್ಷದಿಂದ ಬೆಸ್ಕಾಂ ಇಲಾಖೆಯು 154ಘಟಕಗಳ ವಿದ್ಯುತ್‌ ಶುಲ್ಕ ವಸೂಲಿ ಮಾಡದೇ ಹಾಗೇ ಬಿಡಲು ಕಾರಣವೇನು. ಗ್ರಾಪಂ ಪಿಡಿಓ ನಮಗೇ ಗೊತ್ತೇ ಇಲ್ಲ ಅಂತಾರೇ.. ಬೆಸ್ಕಾಂ ಸಿಬ್ಬಂದಿ ನಾವು ಪ್ರತಿ ತಿಂಗಳು ಬಿಲ್‌ ಕೊಟ್ಟಿದ್ದೀವಿ ಅಂತಾರೇ. ಇವೆಲ್ಲದರ ಸಾರ್ವಜನಿಕರು ಪೇಚಿಗೆ ಸಿಲುಕಿದ್ದಾರೆ.

ಬೆಸ್ಕಾಂ ಇಲಾಖೆ, 24 ಗ್ರಾಪಂ ಪಿಡಿಓ, ತಾಪಂ ಇಓ, ಗ್ರಾಮೀಣ ಕುಡಿಯುವ ನೀರು ಎಇಇ ಮತ್ತು ಕೊರಟಗೆರೆ ಆಡಳಿತ ವೈಫಲ್ಯದಿಂದ ಕೊರಟಗೆರೆ ಕ್ಷೇತ್ರದ ಜನರಿಗೆ ಶುದ್ದ ನೀರಿನ ಸಮಸ್ಯೆ ಎದುರಾಗಿದೆ. ಪಾವಗಡದಲ್ಲಿ 4 ಕೋಟಿಗೂ ಅಧಿಕ ನೀರಿನ ವಿದ್ಯುತ್‌ಶುಲ್ಕ ಬಾಕಿಇದೆ. ತುಮಕೂರು ಜಿಲ್ಲೆಯಲ್ಲಿಯೇ ಇಲ್ಲದಂತಹ ಬೆಸ್ಕಾಂ ಇಲಾಖೆಯ ವಸೂಲಾತಿ ಕಾರ್ಯಚರಣೆ ಕೊರಟಗೆರೆಯಲ್ಲೇ ಮಾತ್ರ ಏಕೆ ಎಂಬುದಕ್ಕೆ ಶಾಸಕ, ಸಂಸದ, ಸಚಿವರೇ ಕೊರಟಗೆರೆಯ ಜನರಿಗೆ ಉತ್ತರ ನೀಡಬೇಕಿದೆ.

ಜನರ ಆರೋಗ್ಯ ಏರುಪೇರು ಸಾಧ್ಯತೆ..

ಎಲೆರಾಂಪುರ, ನೀಲಗೊಂಡನಹಳ್ಳಿ, ಹಂಚಿಹಳ್ಳಿ, ಹುಲೀಕುಂಟೆ ಗ್ರಾಪಂ ವ್ಯಾಪ್ತಿಯ ಬೋಡಬಂಡೇನಹಳ್ಳಿ, ಕೆರೆಯಾಗಲಹಳ್ಳಿ, ಡಿ.ನಾಗೇನಹಳ್ಳಿ, ತಂಗನಹಳ್ಳಿ, ದೊಡ್ಡಪಾಲನಹಳ್ಳಿ, ಬೈಚೇನಹಳ್ಳಿ, ಎಲೆರಾಂಪುರ, ಐ.ಕೆ.ಕಾಲೋನಿ, ಅಳಾಲಸಂದ್ರ, ಎ.ವೆಂಕಟಾಪುರ, ಕಾಮರಾಜನಹಳ್ಳಿ, ಗೌರಗಾನಹಳ್ಳಿ ಗ್ರಾಮದ ನೀರಿನ ಘಟಕದ ವಿದ್ಯುತ್‌ ಸಂಪರ್ಕ ಕಡಿತವಾದ ಪರಿಣಾಮ 3ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಶುದ್ಧ ನೀರು ದೊರಕದೇ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ.

ಸರ್ಕಾರಿ ಕಚೇರಿಯ ವಿದ್ಯುತ್‌ ಶುಲ್ಕ ಬಾಕಿ ಇದ್ರೇ ಮುಲಾಜಿಲ್ಲದೇ ವಿದ್ಯುತ್‌ ಸಂಪರ್ಕ ಕಡಿತ ಮಾಡುತ್ತೇವೆ. ಈಗ ನಾವು ಯಾರ ಸಬೂಬು ಕೇಳೊದಿಲ್ಲ. ನಾವು ಯಾರಿಗೂ ಕಾಯುವ ಪ್ರಶ್ನೆಯು ಇಲ್ಲ. ನಮ್ಮ ಎಚ್ಚರಿಕೆಯ ನೊಟೀಸ್‌ಗೆ ಗ್ರಾಪಂಯಿಂದ ಉತ್ತರ ಬಂದಿಲ್ಲ. ನೀರಿನ ಸಮಸ್ಯೆ ಆದರೇ ಘಟಕಗಳ ಮೇಲ್ವಿಚಾರಕರೇ ಜವಾಬ್ದಾರಿ.

- ಜಗದೀಶ್‌. ಇಇ. ಬೆಸ್ಕಾಂ ಇಲಾಖೆ. ಮಧುಗಿರಿ

ಕೊರಟಗೆರೆಯ ನೀರಿನ ಘಟಕಗಳ ವಿದ್ಯುತ್‌ ಸಂಪರ್ಕ ಕಡಿತದ ಬಗ್ಗೆ ತಕ್ಷಣ ಪರಿಶೀಲನೆ ನಡೆಸುವಂತೆ ತುಮಕೂರು ಜಿಪಂ ಸಿಇಓಗೆ ಸೂಚಿಸುತ್ತೇನೆ. ಮೇಲ್ವಿಚಾರಣೆ ವಹಿಸಿರುವ ಗ್ರಾಪಂಯಿಂದ ಬೆಸ್ಕಾಂ ಇಲಾಖೆಗೆ ಪ್ರತಿತಿಂಗಳು ಬೆಸ್ಕಾಂ ಇಲಾಖೆಗೆ ವಿದ್ಯುತ್‌ ಶುಲ್ಕ ಪಾವತಿಸಬೇಕು. ಕುಡಿಯುವ ನೀರಿನ ವಿಚಾರದಲ್ಲಿ ಅಧಿಕಾರಿ ವರ್ಗ ಜಾಗೃತೆ ವಹಿಸಬೇಕಿದೆ.

- ಅತೀಕ್‌.ಎಲ್‌.ಕೆ. ಅಪರ ಮುಖ್ಯ ಕಾರ್ಯದರ್ಶಿ. ಗ್ರಾಮೀಣಾಭಿವೃದ್ಧಿ ಇಲಾಖೆ

Latest Videos
Follow Us:
Download App:
  • android
  • ios