ಯಾದಗಿರಿ(ಜೂ.11): ವಧುವಿನ ತಂದೆ ಹಾಗೂ ತಂಗಿಗೆ ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ಬುಧವಾರ ಇಲ್ಲಿಗೆ ಸಮೀಪದ ಅಲ್ಲಿಪೂರ ತಾಂಡಾದಲ್ಲಿ ಮದುವೆಯನ್ನು ಮುಂದೂಡಲಾಗಿದೆ. ಮುಂಬೈನಿಂದ ವಾಪಸ್ಸಾಗಿದ್ದ ಈ ಕುಟುಂಬದಲ್ಲಿ ಸೋಂಕು ಕಾಣಿಸಿಕೊಂಡಿದೆ. 

ಅಲ್ಲಿಪೂರ ತಾಂಡಾದ 11 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಮಂಗಳವಾರ ಅಲ್ಲಿಗೆ ತೆರಳಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಆಸ್ಪತ್ರೆಗೆ ಕರೆತರುವಲ್ಲಿ ಮನವೊಲೈಸಿದ್ದರೂ, ಸೋಂಕಿತರು ಬರಲು ಒಪ್ಪಿರಲಿಲ್ಲ. ಅಲ್ಲದೆ, ಬುಧವಾರ ನಾಲವಾರ ಸಮೀಪ ನಡೆಯಲಿದ್ದ ವಧುವಿನ ತಂದೆ ಹಾಗೂ ತಂಗಿಗೆ ಸೋಂಕು ತಗುಲಿದ್ದರೂ, ಸಿಬ್ಬಂದಿಗಳ ಜೊತೆಗೆ ಬರಲು ಒಪ್ಪದಿದ್ದರಿಂದ ಆತಂಕ ಮೂಡಿಸಿತ್ತು.

ನಿಮ್ಮ ಹೆಂಡತಿ, ಮಕ್ಕಳಿಗೂ ಇಂತಹದ್ದೇ ಆಹಾರ ಧಾನ್ಯ ಕೊಡ್ತೀರಾ? ಸಚಿವ ಗೋಪಾಲಯ್ಯ ಕೆಂಡಾಮಂಡಲ..!

ಬುಧವಾರ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಗ್ರಾಮಕ್ಕೆ ತೆರಳಿ ಮನವೊಲೈಸಿದೆ. ಉಳಿದ ಗ್ರಾಮಸ್ಥರು ಮನವರಿಕೆ ಮಾಡಿದಾಗ, ಮದುವೆ ಮುಂದೂಡಿದ ಪಾಲಕರು ಆಸ್ಪತ್ರೆಗೆ ತೆರಳಿದರು. ಇವರನ್ನು ಕರೆದೊಯ್ಯಲು ಸಾರಿಗೆ ಸಂಸ್ಥೆ ಬಸ್ ಬಂದಿತ್ತು.

News In 100 Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್‌

"