ರಾಜಕಾರಣಿಗಳೇ ಅಧಿಕಾರ ಶಾಶ್ವತವಲ್ಲ, ರೈತರ ಕಷ್ಟಕ್ಕೆ ಸ್ಪಂದಿಸಿ: ಶ್ರೀ

ಕೊಬ್ಬರಿ ಬೆಲೆ ತುಂಬಾ ಕಡಿಮೆಯಾಗಿರುವುದರಿಂದ ಹಾಗೂ ಬೆಂಬಲ ಬೆಲೆಯನ್ನೂ ಹೆಚ್ಚಿಸದಿರುವುದರಿಂದ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ, ಹಸಿರು ಸೇನೆ, ರೈತ ಸಂಘದ ವತಿಯಿಂದ ಕ್ವಿಂಟಲ್‌ ಕೊಬ್ಬರಿಗೆ 20 ಸಾವಿರ ರು. ಬೆಂಬಲ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸೋಮವಾರಕ್ಕೆ 8ನೇ ದಿನಕ್ಕೆ

 Politicians power is not permanent respond to the plight of farmers Shri snr

  ತಿಪಟೂರು :  ಕೊಬ್ಬರಿ ಬೆಲೆ ತುಂಬಾ ಕಡಿಮೆಯಾಗಿರುವುದರಿಂದ ಹಾಗೂ ಬೆಂಬಲ ಬೆಲೆಯನ್ನೂ ಹೆಚ್ಚಿಸದಿರುವುದರಿಂದ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ, ಹಸಿರು ಸೇನೆ, ರೈತ ಸಂಘದ ವತಿಯಿಂದ ಕ್ವಿಂಟಲ್‌ ಕೊಬ್ಬರಿಗೆ 20 ಸಾವಿರ ರು. ಬೆಂಬಲ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸೋಮವಾರಕ್ಕೆ 8ನೇ ದಿನಕ್ಕೆ ಕಾಲಿಟ್ಟಿದ್ದು, ಧರಣಿ ನಿರತ ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ತಾಲೂಕಿನ ಕುಪ್ಪೂರು-ತಮ್ಮಡಿಹಳ್ಳಿ ಮಠದ ಡಾ. ಅಭಿನವಮಲ್ಲಿಕಾರ್ಜುನದೇಶಿಕೇಂದ್ರ ಸ್ವಾಮೀಜಿ ಭೇಟಿ ನೀಡಿ ಬೆಂಬಲ ಸೂಚಿಸಿದರು.

ಈ ವೇಳೆ ಅಭಿನವ ಶ್ರೀಗಳು ಮಾತನಾಡಿ, ಕಳೆದ ಒಂದು ವಾರದಿಂದ ಈ ಭಾಗದ ರೈತರು ಕೊಬ್ಬರಿ ಬೆಂಬಲ ಬೆಲೆಗಾಗಿ ನಿರಂತರ ಧರಣಿ ಮೂಲಕ ಹೋರಾಟ ಮಾಡುತ್ತಿದ್ದರೂ ಸರ್ಕಾರ ಅಥವಾ ಜಿಲ್ಲಾಡಳಿತದಿಂದ ಯಾರೂ ಸ್ಪಂದಿಸಿಲ್ಲದಿರುವುದು ನೋವಿನ ಸಂಗತಿ. ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳಿಗೆ ರೈತರ ಬಗ್ಗೆ ಕನಿಷ್ಠ ಮಾನವೀಯತೆ ಇಲ್ಲದಂತಾಗಿರುವುದು ದುರ್ದೈವದ ಸಂಗತಿ. ರಾಜಕಾರಣಿಗಳೇ ನಿಮ್ಮ ಅಧಿಕಾರ ಶಾಶ್ವತವಲ್ಲ. ಜನಪ್ರತಿನಿಧಿಗಳೇ ನಿಮಗೆ ಅಧಿಕಾರ ಯಾರು ಕೊಟ್ಟರು ಎಂಬುದನ್ನ ಸುಮ್ಮನೆ ನೆನಪು ಮಾಡಿಕೊಂಡಾದರೂ ತೆಂಗುಬೆಳೆಗಾರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ. ದೇಶದಲ್ಲಿ ಶೇ. 70ರಷ್ಟುರೈತಾಪಿ ವರ್ಗದವರಿದ್ದು ಅವರಿಂದಲೇ ದೇಶಕ್ಕೆ ಆಹಾರ ಸಿಗುತ್ತಿದ್ದರೂ ರೈತರ ಕಷ್ಟಸರ್ಕಾರಕ್ಕೇಕೆ ಅರ್ಥವಾಗುತ್ತಿಲ್ಲ. ಅಧಿಕಾರ ಇರುತ್ತದೆ ಹೋಗುತ್ತದೆ. ಆದರೆ ಮಾಡಿದ ಕೆಲಸ ಶಾಶ್ವತವಾಗಿರುತ್ತದೆ. ಅಂತಹ ಕೆಲಸವನ್ನು ರಾಜಕಾರಣಿಗಳು ಮಾಡಬೇಕಿದೆ ಎಂದರು.

ಧರಣಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಬಿ.ಬಿ. ಸಿದ್ದಲಿಂಗಮೂರ್ತಿ, ಹೋರಾಟಗಾರ ಟಿ.ಬಿ. ಜಯಾನಂದಯ್ಯ, ಆರ್‌ಕೆಎಸ್‌ನ ಜಿಲ್ಲಾ ಸಂಚಾಲಕ ಸ್ವಾಮಿ, ಹಿರಿಯ ರೈತ ಮುಖಂಡ ಶಂಕರಪ್ಪ, ತುಮಕೂರು ಮಾನವಹಕ್ಕು ಹೋರಾಟಗಾರ ನಾರಾಯಣಚಾರ್‌, ಸಹ ಕಾರ್ಯದರ್ಶಿ ಜಯಚಂದ್ರ ಶರ್ಮ, ತಾ. ಉಪಾಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ಸಹ ಕಾರ್ಯದರ್ಶಿ ಸಿದ್ದಯ್ಯ, ರೈತ ಮುಖಂಡರುಗಳಾದ ಮನೋಹರ ಪಟೇಲ್‌, ದೇವರಾಜು ತಿಮ್ಲಾಪುರ, ಬಿಳಿಗೆರೆ ತಿಮ್ಲಾಪುರ ಗ್ರಾಮದ ರೈತರಾದ ಸಿದ್ದರಾಮಣ್ಣ, ಮುನೀಶ್‌, ರೇಣುಕಯ್ಯ, ರಾಜೇಶ್ವರಿ, ವನಿತಾ, ಚಿದಾನಂದ್‌, ಉಮಾಶಂಕರ್‌, ರಾಮಕೃಷ್ಣಯ್ಯ, ಗಡಬನಹಳ್ಳಿ ತಿಮ್ಮಯ್ಯ, ಲೋಕೇಶ್‌ ಕೊಡಲಾಗರ, ಲತಾಮಣಿ, ದಿನೇಶ್‌, ಶಂಕರಲಿಂಗಪ್ಪ, ಗೌರೀಶ್‌, ಗೋಪಾಲನಹಳ್ಳಿ ಬಸವರಾಜು, ಭ್ರಮರಾಂಬಿಕಾ, ಗ್ರಾ.ಪಂ ಸದಸ್ಯ ಬಿಳಿಗೆರೆಪಾಳ್ಯ ರವಿ ಸೇರಿದಂತೆ ಮತ್ತಿತರರು ಭಾಗವಹಿಸಿ ಬೆಂಬಲ ಸೂಚಿಸಿದರು.

 ರೈತರಿಂದಲೆ ದೇಶ ನಡೆಯುತ್ತಿದ್ದು ಶೇ. 70ರಷ್ಟುಭಾಗ ರೈತರು ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದ್ದಾರೆ. ರೈತರ ಹೆಸರೇಳಿಕೊಂಡು ಚುನಾವಣೆಯಲ್ಲಿ ಗೆದ್ದ ಜನಪ್ರತಿನಿಧಿಗಳು ರೈತರಿಂದಲೇ ಸಬ್ಸಿಡಿ ರೂಪದಲ್ಲಿ ಹಣ ಮಾಡುತ್ತಿದ್ದಾರೆ. ಆದ್ದರಿಂದ ನಾವು ಒಗ್ಗಟ್ಟಾಗುವ ಮೂಲಕ ನಮ್ಮ ಶಕ್ತಿಯನ್ನು ಪ್ರದರ್ಶಿಸೋಣ. ನಾವು ಸರ್ಕಾರಕ್ಕೆ ಬೇಕಿಲ್ಲ ಎಂದರೆ ನಮಗೂ ರಾಜಕಾರಣಿಗಳ, ಸರ್ಕಾರದ ಅವಶ್ಯಕತೆ ಇಲ್ಲ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ತೆಂಗು ಬೆಳೆಗಾರರೆಲ್ಲ ಒಗ್ಗಟ್ಟಾಗಬೇಕಿದೆ.

ಬಿ. ಯೋಗೀಶ್ವರಸ್ವಾಮಿ

ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ

Latest Videos
Follow Us:
Download App:
  • android
  • ios