'ಮನೆ ಮುಂದೆ ರಾಜಕಾರಣಿಗಳಿಗೆ ಪ್ರವೇಶ ಇಲ್ಲ'ಗೇಟಿಗೆ ಬ್ಯಾನರ್‌ ಹಾಕಿದ ಮತದಾರ!

ಯಾವುದೇ ರಾಜಕಾರಣಿಗಳಿಗೆ ನಮ್ಮ ಮನೆಯ ಗೇಟಿನೊಳಗೆ ಪ್ರವೇಶವಿಲ್ಲ ಎಂಬ ದೊಡ್ಡದಾದ ಫಲಕವನ್ನು ಮನೆಯೊಂದರ ಗೇಟಿನಲ್ಲಿ ಅಳವಡಿಸಿರುವ ಘಟನೆ ತಾಲೂಕಿನ ಅಜ್ಜಾವರ ಗ್ರಾಮದ ಮುಂಡೋಳಿಮೂಲೆಯಲ್ಲಿ ನಡೆದಿದೆ.

Politicians are not allowed A voter who put a banner at the front gate of the house at sulya rav

ಸುಳ್ಯ(ಏ..8):  ಯಾವುದೇ ರಾಜಕಾರಣಿಗಳಿಗೆ ನಮ್ಮ ಮನೆಯ ಗೇಟಿನೊಳಗೆ ಪ್ರವೇಶವಿಲ್ಲ ಎಂಬ ದೊಡ್ಡದಾದ ಫಲಕವನ್ನು ಮನೆಯೊಂದರ ಗೇಟಿನಲ್ಲಿ ಅಳವಡಿಸಿರುವ ಘಟನೆ ತಾಲೂಕಿನ ಅಜ್ಜಾವರ ಗ್ರಾಮದ ಮುಂಡೋಳಿಮೂಲೆಯಲ್ಲಿ ನಡೆದಿದೆ.

ಸುಳ್ಯ ತಾಲೂಕಿನಾದ್ಯಂತ ನಾನಾ ಭಾಗಗಳಲ್ಲಿ ಸಾರ್ವಜನಿಕರು ಮತದಾನ ಬಹಿಷ್ಕಾರದ ಬ್ಯಾನರ್‌ಗಳನ್ನು ಅಳವಡಿಸುವ ಮೂಲಕ ಸುಳ್ಯ ತಾಲೂಕಿನಲ್ಲಿ ಸಂಚಲನ ಮೂಡಿಸುತ್ತಿದ್ದರೆ ಇದೀಗ ಅದಕ್ಕೆ ವ್ಯತಿರಿಕ್ತವಾಗಿ ಮತದಾರರೊಬ್ಬರು ‘ಯಾವುದೇ ರಾಜಕಾರಣಿಗಳಿಗೆ ನಮ್ಮ ಮನೆಯ ಗೇಟಿನೊಳಗೆ ಪ್ರವೇಶವಿಲ್ಲ’ ಎಂಬ ಫಲಕವನ್ನು ಅಳವಡಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ವೀಸಾ ಕೊಡಿಸುವುದಾಗಿ ₹50 ಲಕ್ಷ ರು. ಅಧಿಕ ವಂಚನೆ: ಆರೋಪಿ ಸುಧೀರ್ ರಾವ್ ಬಂಧನ

ಕಾರಣವೇನು?: ಅಜ್ಜಾವರ ಮುಂಡೋಳಿ(Agnyavar mundoli) ಮೂಲೆಯ ಸೂರ‍್ಯ ಎಂಬ ಮನೆಯವರು ಈ ಭಾಗದ ರಸ್ತೆ ನಿರ್ಮಾಣ ಸಂದರ್ಭದಲ್ಲಿ ತಮ್ಮ ಕೃಷಿ ಭೂಮಿಯಿಂದ ರಸ್ತೆಗೆ ಬೇಕಾದ ಮಣ್ಣನ್ನು ನೀಡಿದ್ದರು. ಆದರೆ ರಸ್ತೆಗೆ ಸುರಿಯುವ ಮಣ್ಣು ಮಳೆಗಾಲದಲ್ಲಿ ವಾಪಸ್‌ ಬಂದು ಮೋರಿಯಲ್ಲಿ ಸಿಕ್ಕಿ ಕೊಳ್ಳುತ್ತಿದ್ದು ಈ ಭಾಗದಲ್ಲಿ ಹರಿದು ಬರುವ ನೀರು ಅವರ ಕೃಷಿ ಭೂಮಿಯಲ್ಲಿ ತುಂಬಿಕೊಳ್ಳುತ್ತಿದೆ.

ಇದನ್ನು ಸರಿಪಡಿಸಿಕೊಡುವಂತೆ ಮನವಿಯನ್ನು ಸಂಬಂಧಪಟ್ಟವರಿಗೆ ಸಲ್ಲಿಸಿದರೂ ಇದುವರೆಗೆ ಸರಿಯಾಗಿಲ್ಲ. ಅಲ್ಲದೆ ಗಂಗಾ ಕಲ್ಯಾಣ ಯೋಜನೆಯಡಿ ನೀರಿನ ಸಮಸ್ಯೆ ಬಗೆಹರಿಸುತ್ತೇವೆಂದು ಶಾಸಕರು ಭರವಸೆ ನೀಡಿದ್ದರು. ಆದರೆ ಇದುವರೆಗೂ ನೀಡಿಲ್ಲ. ಈ ಎಲ್ಲ ಸಮಸ್ಯೆಗಳು ಬಾಕಿ ಇರುವುದರಿಂದ ನಮ್ಮ ಮನೆಯ ಕಡೆಗೆ ರಾಜಕಾರಣಿಗಳು ಬರಬೇಡಿ ಎಂದು ಮುಂಡೋಳಿಮೂಲೆ ಮನೆಯವರು ಈ ಬೋರ್ಡ್‌ನ್ನು ತಮ್ಮ ಗೇಟಿಗೆ ನೇತು ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಕೋಳಿ ಸಾರು ಖಾಲಿಯಾಗಿದ್ದಕ್ಕೆ ಜಗಳ, ಮಗನನ್ನೇ ಕೊಲೆಗೈದ ತಂದೆ!

Latest Videos
Follow Us:
Download App:
  • android
  • ios