ಚಿತ್ರದುರ್ಗ(ಜು.11): ಪೊಲೀಸ್‌ ಪೇದೆಗೊಬ್ಬರಿಗೆ ಮಹಾಮಾರಿ ಕೊರೋನಾ ವೈರಸ್‌ ವಕ್ಕರಿಸಿದ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆಯನ್ನ ಸೀಲ್‌ಡೌನ್‌ ಮಾಡಿದ ಘಟನೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ. 

ಮುಂಜಾಗ್ರತಾ ಕ್ರಮವಾಗಿ ಹೊಸದುರ್ಗ ಪಟ್ಟಣದ ಪೊಲೀಸ್ ಠಾಣೆಯನ್ನೂ ಕೂಡ ಸೀಲ್‌ಡೌನ್ ಮಾಡಲಾಗಿದೆ. ಇದರಿಂದ ಶ್ರೀರಾಂಪುರ ಗ್ರಾಮ ಹಾಗೂ ಹೊಸದುರ್ಗ ಪಟ್ಟಣದ ಜನರು ಭಯದಲ್ಲೇ ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿತ್ರದುರ್ಗದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್

ಶ್ರೀರಾಂಪುರ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್‌ಗೆ ಕೋವಿಡ್‌ ಸೋಂಕು ತಗುಲಿರುವುದು ದೃಢಪಡುತ್ತಿದ್ದಂತೆ ಪಿಎಸ್ಐ ಸೇರಿ 40 ಜನ ಪೊಲೀಸ್ ಸಿಬ್ಬಂದಿಯನ್ನ ಹೋಂ ಕ್ವಾರಂಟೈನ್ ಮಾಡಲಾಗಿದೆ. ಇವರೆಲ್ಲರ ಗಂಟಲು ಮಾದರಿ ದ್ರವ ತೆಗೆದು ಲ್ಯಾಬ್‌ಗೆ ಕಳುಹಿಸಲಾಗಿದೆ.