ಯಾದಗಿರಿ: ಕಲ್ಲು ಕ್ವಾರಿ ಮೇಲೆ ದಾಳಿ, ಸ್ಫೋಟಕ್ಕೆ ಬಳಸುವ 750 ಕೆಜಿ ಬೂಸ್ಟರ್ ಜಪ್ತಿ
ಬುಲೆರೋ ಗಾಡಿ ಸೇರಿದಂತೆ, ಸ್ಫೋಟಕ್ಕೆ ಬಳಸುವ ಸುಮಾರು 750 ಕೆಜಿ ಬೂಸ್ಟರ್ ವಶ| ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹಾಲಾಳ ಗ್ರಾಮದ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆ| ಇಂಟ್ರನಲ್ ಸೆಕ್ಯೂರಿಟಿ ಡಿವಿಜನ್ ಪಿಐ ಅಡೆಪ್ಪ ಬನ್ನಿ ನೇತೃತ್ವದಲ್ಲಿ ದಾಳಿ|
ಯಾದಗಿರಿ(ಮಾ.07): ಕಲ್ಲು ಕ್ವಾರಿ ಮೇಲೆ ದಾಳಿ ಮಾಡಿದ ಪೊಲೀಸ್ ಅಪಾರ ಪ್ರಮಾಣ ಸ್ಫೋಟಕ ವಶಪಡಿಸಿಕೊಂಡ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಹಾಲಾಳ ಗ್ರಾಮದ ವ್ಯಾಪ್ತಿಯಲ್ಲಿ ಇಂದು(ಭಾನುವಾರ) ನಡೆದಿದೆ.
ಹಾಲಾಳ ಗ್ರಾಮದ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯ ಮೇಲೆ ಕಲಬುರಗಿ-ಯಾದಗಿರಿ ಐಎಸ್‌ಡಿ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಅಕ್ರಮವಾಗಿ ಸಂಗ್ರಹಿಸಿದ್ದ 30 ಬಾಕ್ಸ್ ಐಡಿಎಲ್, 80 ಎಮ್ಎಮ್ ಬೂಸ್ಟರ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಜಾರಕಿಹೊಳಿ ರಾಸಲೀಲೆ CD: ಶೇ. 60ರಷ್ಟು ಶಾಸಕರಿಗೆ ಇದೆ ಅದೇ ಪ್ರವೃತ್ತಿ, ಸ್ಫೋಟಕ ಹೇಳಿಕೆ
ಬುಲೆರೋ ಗಾಡಿ ಸೇರಿದಂತೆ, ಸ್ಫೋಟಕ್ಕೆ ಬಳಸುವ ಸುಮಾರು 750 ಕೆಜಿ ಬೂಸ್ಟರ್‌ಅನ್ನು ವಶಪಡಿಸಿಕೊಳ್ಳಲಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮೂಲದ ಶಾಂತಗೌಡ ನಡಹಳ್ಳಿ ಎಂಬುವರಿಗೆ ಕ್ವಾರಿ ಸೇರಿದ್ದು ಎಂದು ತಿಳಿದು ಬಂದಿದೆ. ಇಂಟ್ರನಲ್ ಸೆಕ್ಯೂರಿಟಿ ಡಿವಿಜನ್ ಪಿಐ ಅಡೆಪ್ಪ ಬನ್ನಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.