Asianet Suvarna News Asianet Suvarna News

ಕೊರೋನಾ ಕಾಟ: ಮುಂಡರಗಿ ಪೊಲೀಸರಿಗೆ ತಲೆನೋವಾದ ಕೊಡಗಿನ ವ್ಯಕ್ತಿ..!

ಖಾಸಗಿ ಕಾರ್ಯನಿಮಿತ್ತ ಕೊಡಗು ಜಿಲ್ಲೆಯ ಶನಿವಾರ ಸಂತೆಯಿಂದ ಮುಂಡರಗಿ ಪೊಲೀಸ್‌ ಠಾಣೆಗೆ ಆಗಮಿಸಿದ್ದ ವ್ಯಕ್ತಿ| ಠಾಣೆಯಲ್ಲಿನ ಕೆಲವು ಸಿಬ್ಬಂದಿ ಜತೆಗೆ ತಾನು ಆಗಮಿಸಿದ ಕೆಲಸ ಕಾರ್ಯಗಳ ಕುರಿತು ಸ್ವಲ್ಪ ಹೊತ್ತುಗಳ ಕಾಲ ಕಳೆದಿದ್ದ ವ್ಯಕ್ತಿಗೆ ಸೋಂಕು ದೃಢ| ಆರೋಗ್ಯ ಇಲಾಖೆ ಪೊಲೀಸ್‌ ಠಾಣೆಯಲ್ಲಿನ ವ್ಯಕ್ತಿಯ ಜೊತೆಗೆ ಸಂಪರ್ಕ ಹೊಂದಿದವರನ್ನ ಸ್ವ್ಯಾಬ್‌ ಟೆಸ್ವ್‌ ಪರೀಕ್ಷೆ|

Police in anxiety for Coronavirus case in Mundaragi in Koppal District
Author
Bengaluru, First Published Jun 24, 2020, 7:59 AM IST

ಮುಂಡರಗಿ(ಜೂ.24): ಗದಗ ಜಿಲ್ಲೆಯಲ್ಲಿ 79 ಕೊರೋನಾ ಕೇಸ್‌ಗಳಾಗಿದ್ದರೂ ಮುಂಡರಗಿ ತಾಲೂಕಿನಲ್ಲಿ ಒಂದೇ ಒಂದು ಪ್ರಕರಣಗಳು ಪತ್ತೆಯಾಗಿರಲಿಲ್ಲ. ಆದರೆ ಇದೇ ತಿಂಗಳು 17ರಂದು ಕೊಡಗು ಜಿಲ್ಲೆಯ ಶನಿವಾರ ಸಂತೆಯಿಂದ ವ್ಯಕ್ತಿಯೋರ್ವನು ಖಾಸಗಿ ಕಾರ್ಯನಿಮಿತ್ಯ ಮುಂಡರಗಿ ಪೊಲೀಸ್‌ ಠಾಣೆಗೆ ಬಂದು ಹೋಗಿದ್ದರು. ಆ ವ್ಯಕ್ತಿ ಮುಂಡರಗಿಯಿಂದ ಮರಳಿ ಶನಿವಾರಸಂತೆಗೆ ತೆರಳಿದ ಸಂದರ್ಭದಲ್ಲಿ ಅಲ್ಲಿನ ಆಶಾ ಕಾರ್ಯಕರ್ತೆಯರು ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಿದಾಗ ಅವನಿಗೆ ಕೊರೋನಾ ಧೃಢ ಪಟ್ಟಿರುವುದು ಬೆಳಕಿಗೆ ಬಂದಿದ್ದರಿಂದಾಗಿ ಮುಂಡರಗಿ ಪೊಲೀಸರಿಗೆ ಕೊಡಗಿನ ವ್ಯಕ್ತಿ ತಲೆನೋವಾಗಿ ಪರಿಣಮಿಸಿ, ಆತಂಕ ಹೆಚ್ಚಿಸಿದ್ದಾನೆ.

ಖಾಸಗಿ ಕಾರ್ಯನಿಮಿತ್ತ ಕೊಡಗು ಜಿಲ್ಲೆಯ ಶನಿವಾರ ಸಂತೆಯಿಂದ ಮುಂಡರಗಿ ಪೊಲೀಸ್‌ ಠಾಣೆಗೆ ವ್ಯಕ್ತಿ ಆಗಮಿಸಿದ ಸಂದರ್ಭದಲ್ಲಿ ಠಾಣೆಯಲ್ಲಿನ ಕೆಲವು ಸಿಬ್ಬಂದಿ ಜತೆಗೆ ತಾನು ಆಗಮಿಸಿದ ಕೆಲಸ ಕಾರ್ಯಗಳ ಕುರಿತು ಸ್ವಲ್ಪ ಹೊತ್ತುಗಳ ಕಾಲ ಕಳೆದಿದ್ದ ಆ ವ್ಯಕ್ತಿಗೆ (ಪಿ-9215) ಜೂ. 22ರಂದು ಸೋಂಕು ದೃಢವಾಗಿದ್ದು, ಆರೋಗ್ಯ ಇಲಾಖೆ ಪೊಲೀಸ್‌ ಠಾಣೆಯಲ್ಲಿನ ವ್ಯಕ್ತಿಯ ಜೊತೆಗೆ ಸಂಪರ್ಕ ಹೊಂದಿದವರನ್ನ ಸ್ವ್ಯಾಬ್‌ ಟೆಸ್ವ್‌ ಪರೀಕ್ಷೆ ಮಾಡಲಾಗುತ್ತಿದೆ.

ಗದಗ: ಒಂದೇ ದಿನ 18 ಜನರಿಗೆ ಕೊರೋನಾ ಸೋಂಕು ದೃಢ

ಮುಂಜಾಗ್ರತಾ ಕ್ರಮವಾಗಿ ಮುಂಡರಗಿ ಪೊಲೀಸ್‌ ಠಾಣೆ ಒಳಗೆ ಸಾರ್ವಜನಿಕರ ಪ್ರವೇಶ ನಿಷೇಧವಾಗಿದ್ದು, ಯಾರೇ ಠಾಣೆಗೆ ಬಂದರೂ ಹೊರಗಡೆಯೇ ಎಲ್ಲ ಸಾರ್ವಜನಿಕ ವ್ಯವಹಾರಗಳಿಗೆ, ದೂರುಗಳಿಗೆ ಮತ್ತು ಕೇಸ್‌ಗಳ ಇತ್ಯರ್ಥಕ್ಕೆ ಅವಕಾಶ ಕಲ್ಪಿಸಲಾಗಿದೆ. ಸೊಂಕಿತನೊಂದಿಗೆ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಜೊತೆಗೆ ಮುಂಡರಗಿ ಪೊಲೀಸ್‌ ಠಾಣೆಗೆ ಎರಡು ಬಾರಿ ಸ್ಯಾನಿಟೈಸರ್‌ ಸಿಂಪರಣೆ ಮಾಡಲಾಗಿದೆ. ಆದಾಗ್ಯೂ ಮುಂಡರಗಿ ಪೊಲೀಸ್‌ ಠಾಣೆಯ ಪೊಲೀಸರಲ್ಲಿ ಮಾತ್ರ ಆತಂಕ ಮನೆ ಮಾಡಿದಂತೆ ಕಾಣುತ್ತಿದೆ. ಇದರಿಂದಾಗಿ ಮುಂಡರಗಿ ಸಾರ್ವಜನಿಕರೂ ಸಹ ಆತಂಕದಲ್ಲಿದ್ದಾರೆ.
 

Follow Us:
Download App:
  • android
  • ios