ಹಾಸನ(ಸೆ.28): ಭಾರತಾದ್ಯಂತ ಖಾಲಿ ಇರುವ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಜನರಲ್‌ ಡ್ಯೂಟಿ) ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಎಕ್ಸಿಕ್ಯೂಟಿವ್‌) (ಪುರುಷ ಮತ್ತು ಮಹಿಳೆ) ದೆಹಲಿ ಪೊಲೀಸ್‌ ಮತ್ತು ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ (ಎಕ್ಸಿಕ್ಯೂಟಿವ್‌) ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು ಅಂಗೀಕೃತ ವಿಶ್ವವಿದ್ಯಾನಿಲಯದಲ್ಲಿ ಪದವಿ ಅಥವಾ ತತ್ಸಮಾನ ಪದವಿಯನ್ನು ಪಡೆದಿರಬೇಕು ಅರ್ಜಿ ಸಲ್ಲಿಸಲು ಅ.16 ಕಡೇ ದಿನವಾಗಿದೆ.

ಪರೀಕ್ಷೆ ನಡೆಸಿ ಫಲಿತಾಂಶ ನೀಡದ ಕೆಪಿಎಸ್‌ಸಿ

ಪುರುಷರು 170 ಸೆ.ಮೀ. ಎತ್ತರ, ಸಾಮಾನ್ಯ 80-85 (ಪೂರ್ತಿ ವಿಸ್ತರಿಸಿದಾಗ) ಕನಿಷ್ಠ ವಿಸ್ತರಣೆ: 5 ಸೆಂ.ಮೀ. ಎದೆ ಸುತ್ತಳತೆ ಹೊಂದಿರಬೇಕು ಹಾಗೂ ಮಹಿಳೆಯರು 157 ಸೆ.ಮೀ. ಎತ್ತರ, 45 ಕೆ.ಜಿ.ತೂಕ ಹೊಂದಿರಬೇಕು.

ಹಾಸನ: KSRTC ಬಸ್‌ನಲ್ಲಿ ಸ್ಟೂಡೆಂಟ್ಸ್ ಫುಲ್ ರೋಮ್ಯಾನ್ಸ್.. ಎಲ್ಲಿಗೆ ಬಂತು ಕಾಲ!

ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡದ ಅಭ್ಯರ್ಥಿಗಳಿಗೆ 5 ವರ್ಷಗಳ ವಿನಾಯಿತಿಯಿದ್ದು ಒ.ಬಿ.ಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಿನಾಯಿತಿ ನೀಡಲಾಗಿದæ. ಅರ್ಜಿ ಸಲ್ಲಿಸಲು ಅ.16 ಕೊನೆಯ ದಿನವಾಗಿದ್ದು http://ssconline.nic.in ವೆಬ್‌ಸೈಟ್ನ ಮೂಲಕ ಆನ್‌ಲೈನ್‌ ಮುಖಾಂತರ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ