ಸಕಲೇಶಪುರ [ಅ.01]: ಸುರಕ್ಷತೆ ಎಂಬುದು ಸಂಪತ್ತಿದ್ದಂತೆ ಸಂಚಾರ ನಿಯಮಗಳು ಜೇಬಿದ್ದಂತೆ ಸಂಚಾರ ನಿಯಮಗಳನ್ನು ಪಾಲಿಸುವುದರಿಂದ ಅಧಿಕ ಅನುಕೂಲಗಳಿವೆ ಎಂದು ಗ್ರಾಮಾಂತರ ಠಾಣಾ ಪಿಎಸ್ಸೈ ಬ್ಯಾಟರಾಯಗೌಡ ಹೇಳಿದರು. 

ಅವರು ಭಾನುವಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿರುವ ವೈನ್ಸ್ ಹಾಗೂ ಬಾರ್‌ಗಳ ಬಳಿ ತೆರಳಿ ಕುಡಿದು ವಾಹನ ಚಾಲನೆ ಮಾಡಿದರೆ ಹತ್ತು ಸಾವಿರ ದಂಡ ಕಟ್ಟಬೇಕಾಗುವುದು ಎಂಬ ಪೋಸ್ಟರ್‌ಗಳನ್ನು ಅಂಟಿಸುವುದರ ಮೂಲಕ ಅರಿವು ಮೂಡಿಸುವ ಕೆಲಸ ಮಾಡಿದರು. 

ವಾಹನ ಸವಾರರು ರಸ್ತೆಗಿಳಿಯುವ ಮುನ್ನ ಜೇಬು ತುಂಬಿಸಿಕೊಳ್ಳುವ ಕಾಲ ಬಂದಿದೆ. ಸಂಚಾರ ನಿಯಮ ಉಲ್ಲಂಘಿಸಿದಲ್ಲಿ ಭಾರೀ ದಂಡ ತೆರಬೇಕಾಗಿದೆ. ಆದ್ದರಿಂದ ಸಕಲೇಶಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅ.1 ರಿಂದ ರಸ್ತೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಸ್ತೆ ಸಂಚಾರ  ನಿಯಮ ಉಲ್ಲಂಘನೆಗೆ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಈಚೆಗೆ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ  ತಂದಿರುವುದನ್ನು ಇಲ್ಲಿ ಸ್ಮರಿಸಬಹುದು.