ಚಾಮರಾಜನಗರ(ಫೆ.01): ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಗ್ರಾಮಾಂತರ ಪೋಲಿಸ್‌ ಠಾಣೆಯು ಪ್ರಾರಂಭವಾಗಿ ಸುಮಾರು 4 ವರ್ಷಗಳಾಯಿತು. ಠಾಣೆಯ ಆವರಣದಲ್ಲಿ ಪ್ರತಿದಿನ ಕೋತಿಯೊಂದು ಠಾಣೆಯ ಆವರಣದಲ್ಲೇ ವಾಸವಾಗಿತ್ತು. ರಾತ್ರಿ ವೇಳೆಯೂ ಅಲ್ಲೇ ತಂಗಿರುತ್ತಿತ್ತು. ಅಲ್ಲದೆ ಪೊಲೀಸರ ಜತೆ ಸ್ನೇಹದಿಂದ ಇತ್ತು.

ಕೆಲವು ದಿನಗಳ ಹಿಂದೆ ಠಾಣೆ ಆವರಣದಲ್ಲಿ ಕೋತಿ ಮೃತಪಟ್ಟಿತು. ಇದರ ಸಾವಿನಿಂದ ನೊಂದ ಪೋಲೀಸರು ಮಂಗನ ನೆನಪಲ್ಲಿ ಠಾಣೆಯ ಆವರಣದಲ್ಲಿ ಮೃತ ಕೋತಿಯ ನೆನಪಿಗಾಗಿ ಒಂದು ಸ್ಮಾರಕ ನಿರ್ಮಿಸಿದ್ದಾರೆ.

ಆಪರೇಷನ್ ಕಮಲದ ಬಗ್ಗೆ ಪುಸ್ತಕ ಬರೀತಾರಂತೆ ಹಳ್ಳಿ ಹಕ್ಕಿ

 ನಿರ್ಮಿಸಿ ಪ್ರತಿ ನಿತ್ಯ ಪೂಜೆ ಮಾಡಿ ತಮ್ಮ ದೈನಂದಿನ ಕಾರ್ಯ ಅರಂಭಿಸುತ್ತಾರೆ. ದೇವಾಲಯದ ಮಂಡಲ್‌ ಪೂಜೆಯನ್ನು ಆರಕ್ಷಕ ನಿರೀಕ್ಷಕ ಹರೀಶ್‌ ನೇತೃತ್ವದಲ್ಲಿ ನೆರವೇರಿಸಿದರು.