Asianet Suvarna News Asianet Suvarna News

ಕರ್ತವ್ಯನಿರತ ಪೊಲೀಸ್ ಪೇದೆಗೆ ಹಾರ್ಟ್ ಅಟ್ಯಾಕ್; ಆಸ್ಪತ್ರೆಯಲ್ಲಿ ಕೊನೆಯುಸಿರು!

ಬೀದರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ರಾಯಚೂರು ಮೂಲದ ಯುವಕನಾಗಿದ್ದ ಪೇದೆ, ಕಳೆದ ಐದು ವರ್ಷಗಳಿಂದ ಬೀದರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

Police constable suffers heart attack while on duty in Bidar and death sat
Author
First Published Oct 2, 2024, 1:41 PM IST | Last Updated Oct 2, 2024, 2:37 PM IST

ಬೀದರ್ (ಅ.02): ಕರ್ತವ್ಯದ ವೇಳೆಯೇ ಪೊಲೀಸ್ ಪೇದೆಗೆ ಹೃದಯಾಘಾತ ಸಂಭವಿಸಿದ್ದು, ಕೆಲವೇ ಕ್ಷಣಗಳಲ್ಲಿ ಪೊಲೀಸ್ ಸಾವಿಗೀಡಾಗಿರುವ ಘಟನೆ ಬೀದರ್‌ನ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ರಾಯಚೂರು ಮೂಲದ ಯುವಕ ಕಳೆದ 5 ವರ್ಷದ ಹಿಂದೆ ಪೊಲೀಸ್ ಪೆದೆಯಾಗಿ ಬೀದರ್‌ಗೆ ನೇಮಕಗೊಂಡಿದ್ದಾನೆ. ತಂದೆ, ತಾಯಿ ಕುಟುಂಬವನ್ನೆಲ್ಲಾ ಬಿಟ್ಟು ಬೀದರ್‌ನ ಬೀದರ್‌ನ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದನು. ಆದರೆ, ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಪೊಲೀಸ್ ಆನ್‌ ಡ್ಯೂಟಿಯಲ್ಲಿದ್ದಾಗಲೇ ಹಾರ್ಟ್ ಅಟ್ಯಾಕ್‌ಗೆ ಒಳಗಾಗಿದ್ದಾರೆ. ಕೂಡಲೇ ಅವರನ್ನು ಬೆನ್ನಲ್ಲೆ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಪೊಲೀಸ್ ಪೇದೆ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕನ್ನಡತಿ ಸೀರಿಯಲ್ ನಟಿ ಜೊತೆಗೆ ಲಿವ್ ಇನ್ ರಿಲೇಶನ್: ಮದುವೆಗೆ ನಿರಾಕರಿಸಿದ್ದಕ್ಕೆ ಪ್ರಾಣಬಿಟ್ಟ ಯುವಕ

ಮೃತ ಪೊಲೀಸ್ ಪೇದೆ ಚಂದ್ರಶೇಖರ್ (28) ಆಗಿದ್ದಾರೆ. ಇವರು ರಾಯಚೂರು ತಾಲೂಕಿನ ತಲಮಾರಿ ಗ್ರಾಮದವರಾಗಿದ್ದರು. 2018ರ ಬ್ಯಾಚ್‌ನಲ್ಲಿ ಪೊಲೀಸ್ ಇಲಾಖೆಗೆ ನೇಮಕವಾಗಿದ್ದರು. ಕಳೆದ 5 ವರ್ಷಗಳಿಂದ ನಾಗರಿಕ ಪೊಲೀಸ್ ಪೇದೆಯಾಗಿ ಬೀದರ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನು ಚಂದ್ರಶೇಖರ್ ಕುಟುಂಬಸ್ಥರು ರಾಯಚೂರಿನಲ್ಲಿದ್ದರು. ಕೆಲಸದ ಒತ್ತಡದಿಂದ ಹೀಗಾಗಿರಬಹುದು ಎಂದು ಸ್ಥಳೀಯ ಸಹ ಪೊಲೀಸ್ ಸಿಬ್ಬಂದಿ ಹೇಳಿದ್ದಾರೆ. ಆದರೆ, ಮನೆಗೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಬೀದರ್‌ಗೆ ತೆರಳಿದ್ದಾರೆ. ಮೃತ ಮಗನನ್ನು ನೋಡಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Latest Videos
Follow Us:
Download App:
  • android
  • ios