* ಸಾಕಷ್ಟು ಸಾಧಕರ ಹಾಗೂ ಇತರೆ ಸ್ಕೆಚ್ ಮಾಡಿ ಸೈ ಎನಿಸಿಕೊಂಡ ಸಚಿನ* ಪ್ರಧಾನಿ ಅವರ ಚಿತ್ರದ ಸ್ಕೆಚ್ ಮೋದಿ ಅವರಿಗೆ ಟ್ವೀಟ್ ಮಾಡಿದ್ದ ಕಲಾವಿದ * ಸಚಿನಗೆ ಪ್ರಶಂಸಾ ಪತ್ರ ಕಳುಹಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ
ಧಾರವಾಡ(ಜೂ.18): ತಾಲೂಕಿನ ಮಾರಡಗಿ ಗ್ರಾಮದ 16 ವರ್ಷದ ಚಿತ್ರಕಾರ ಸಚಿನ ಬಳ್ಳಾರಿ ಕೈಯಲ್ಲಿ ಅರಳಿದ ದೇಶದ ಮಹನೀಯರ ಪೆನ್ಸಿಲ್ ಚಿತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸಾ ಪತ್ರ ನೀಡಿದ್ದಾರೆ.
ಚಿಕ್ಕಂದಿನಿಂದಲೇ ಚಿತ್ರಕಲೆಯತ್ತ ಮನಸ್ಸು ಮಾಡಿದ್ದ ಸಚಿನ, ಬಾಲ್ಯದಲ್ಲಿ ಗೋಡೆಗಳಲ್ಲಿ ಗೀಚುತ್ತಿದ್ದನು. ಪ್ರೌಢಶಾಲೆಯಲ್ಲಿ ಚಿತ್ರಕಲೆ ತರಗತಿಯಲ್ಲೂ ಅತ್ಯಂತ ಉತ್ಸುಕತೆಯಿಂದ ಚಿತ್ರ ಬಿಡಿಸುತ್ತಿದ್ದನು. ಇದೀಗ ಪೆನ್ಸಿಲ್ ಸ್ಕೆಚ್‌ನತ್ತ ಹೆಚ್ಚಿನ ಗಮನ ಹರಿಸಿ ಸಾಕಷ್ಟು ಸಾಧಕರ ಹಾಗೂ ಇತರೆ ಸ್ಕೆಚ್ ಮಾಡಿ ಸೈ ಎನಿಸಿಕೊಂಡಿದ್ದಾನೆ.
18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲು ಸಿದ್ಧತೆ
ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದರು, ಕ್ರಿಕೆಟಿಗ ವಿರಾಟ ಕೋಹ್ಲಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರೆ ಚಿತ್ರಗಳನ್ನು ಅತ್ಯಂತ ಸುಂದರವಾಗಿ ಬಿಡಿಸಿರುವ ಸಚಿನ, ಪ್ರಧಾನಿ ಮೋದಿ ಅವರ ಚಿತ್ರದ ಸ್ಕೆಚ್ ಅವರಿಗೆ ಟ್ವೀಟ್ ಮಾಡಿದ್ದನು. ಇದನ್ನು ಗಮನಿಸಿರುವ ಪ್ರಧಾನಿ ಮೋದಿ ಅವರು ಸಚಿನಗೆ ಪ್ರಶಂಸಾ ಪತ್ರವನ್ನು ಕಳೆದ ಜೂನ್ 8ರಂದು ಕಳುಹಿಸಿದ್ದಾರೆ.
