ರಾಮನಗರ (ಅ.12): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಸ್ವಾಮಿತ್ವ’ ಯೋಜನೆಯಡಿ  ರಾಮನಗರದ ಫಲಾನುಭವಿಗಳಿಗೆ ಆಸ್ತಿಪತ್ರ ವಿತರಣೆ ಮಾಡಲಾಯಿತು. 

ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಆರು ರಾಜ್ಯಗಳ ಫಲಾನುಭವಿಗಳಿಗೆ ಸ್ವಾಮಿತ್ವ ಆಸ್ತಿಪತ್ರ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು, ಅದರಂತೆ ಕರ್ನಾಟಕದಲ್ಲಿ ಮೊದಲ ಬಾರಿಗೆ ರಾಮನಗರದ 157 ಫಲಾನುಭವಿಗಳಿಗೆ ಆಸ್ತಿಪತ್ರ ವಿತರಿಸಲಾಯಿತು. ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಇಕ್ರಂ ಅವರು ಜಿಪಂನಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಾಂಕೇತಿಕವಾಗಿ 4 ಗ್ರಾಮಗಳ ಫಲಾನುಭವಿಗಳಿಗೆ ಆಸ್ತಿ ಕಾರ್ಡುಗಳನ್ನು ವಿತರಿಸಿದರು. ‘ಸ್ವಾಮಿತ್ವ’ ಯೋಜನೆಗೆ ರಾಜ್ಯದಲ್ಲೇ ಪ್ರಥಮವಾಗಿ ರಾಮನಗರ ಜಿಲ್ಲೆಯ 4 ಗ್ರಾಮಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿತ್ತು.

ಗ್ರಾಮೀಣ ಜನರಿಗೆ ಮೋದಿಯಿಂದ ಹೊಸ ಆರ್ಥಿಕ ಭದ್ರತೆ, ಪ್ರಾಪರ್ಟಿ ಕಾರ್ಡ್! ..

ಮೋದಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಂತೆ ರಾಮನಗರ ತಾಲೂಕಿನ ಎಂ.ಜಿ ಪಾಳ್ಯ, ಮಜರೆ ಸೀಬಕಟ್ಟೆಹಾಗೂ ಮಾಗಡಿ ತಾ​ಲೂಕಿನ ಬಸವಾಪಟ್ಟಣ ಮತ್ತು ಮಜರೆ ಶಂಭಯ್ಯನ ಪಾಳ್ಯ ಗ್ರಾಮಗಳಲ್ಲಿನ 157 ಫಲಾನುಭವಿಗಳು ತಮ್ಮ ಮೊಬೈಲ್‌ನಲ್ಲಿ ಲಿಂಕ್‌ ಅನ್ನು ಸ್ವೀಕರಿಸಿದರು. ನಂತರ

ಅಡ್ಡಿಯಾದ ನೀತಿ ಸಂಹಿತೆ: ಪ್ರಧಾನ ಮಂತ್ರಿಗಳು ಆಸ್ತಿಪತ್ರಗಳನ್ನು ವಿತರಿಸಿದ ಬಳಿಕ ಆರು ರಾಜ್ಯಗಳ ಆಯ್ದ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದರು. ಪೂರ್ವ ನಿಗದಿಯಂತೆ ಜಿಲ್ಲೆಯ ಫಲಾನುಭವಿ ಮಂಜುಳಾ ಅವರೊಂದಿಗೆ ಪ್ರಧಾನಿ ಮೋದಿ ಅವರು ಸಂವಾದ ನಡೆಸಬೇಕಾಗಿತ್ತು. ಆದರೆ, ಬೆಂಗಳೂರು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ರಾಮನಗರದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಈ ಸಂವಾದ ಸಾಧ್ಯವಾಗಲಿಲ್ಲ.