Tumakur : ಪ್ಲಾಸ್ಟಿಕ್‌ ಮುಕ್ತ ನಗರಕ್ಕೆ ವಿದ್ಯುಕ್ತ ಚಾಲನೆ

ತುಮಕೂರನ್ನು ಪ್ಲಾಸ್ಟಿಕ್‌ ಮುಕ್ತ ನಗರವಾಗಿಸುವ ನಿಟ್ಟಿನಲ್ಲಿ ತುಮಕೂರು ಮಹಾನಗರ ಪಾಲಿಕೆ, ಬ್ಯೂಗಲ್‌ ಟ್ರಸ್ಟ್‌ , ಪೊಲೀಸ್‌ ಇಲಾಖೆ, ಪರ್ಯಾವರಣ್‌ ಸಂರಕ್ಷಣಾ ಗತಿವಿಧಿ ಮುಂದಾಗಿದ್ದು ಆರಂಭಿಕವಾಗಿ 26ನೇ ವಾಡ್‌ನಿಂದ ಆರಂಭ ಮಾಡಿದೆ.

Plastic Free Campaign  Started in Tumakur snr

  ತುಮಕೂರು ( ನ.06):  ತುಮಕೂರನ್ನು ಪ್ಲಾಸ್ಟಿಕ್‌ ಮುಕ್ತ ನಗರವಾಗಿಸುವ ನಿಟ್ಟಿನಲ್ಲಿ ತುಮಕೂರು ಮಹಾನಗರ ಪಾಲಿಕೆ, ಬ್ಯೂಗಲ್‌ ಟ್ರಸ್ಟ್‌ , ಪೊಲೀಸ್‌ ಇಲಾಖೆ, ಪರ್ಯಾವರಣ್‌ ಸಂರಕ್ಷಣಾ ಗತಿವಿಧಿ ಮುಂದಾಗಿದ್ದು ಆರಂಭಿಕವಾಗಿ 26ನೇ ವಾಡ್‌ನಿಂದ ಆರಂಭ ಮಾಡಿದೆ.

ನಗರ ಪಾಲಿಕೆ ಆಯುಕ್ತ ಯೋಗಾನಂದ ಮಾತನಾಡಿ, ನಗರವನ್ನು ಪಾಲಿಥೀನ್‌ (Plastic)  ಮುಕ್ತವಾಗಿಸುವ ಮಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಈಗಾಗಲೇ ಪ್ಲಾಸ್ಟಿಕ್‌ ಬ್ಯಾನ್‌ ಮಾಡಿ ಆದೇಶ ಹೊರಡಿಸಿ ಬಹಳ ದಿನಗಳೇ ಆಗಿವೆ. ನಾವೇ ತಡವಾಗಿ ಆಭಿಯಾನ ನಡೆಸುತ್ತಿದ್ದೇವೆ. ಯುವಜನತೆ ಪಾಲಿಕೆಯೊಂದಿಗೆ ಕೈ ಜೋಡಿಸುವ ಮೂಲಕ ಈ ಪ್ರಾಯೋಗಿಕ ಅಭಿಯಾನದ ಯಶಸ್ವಿ ಗೆ ಸಹಕರಿಸಿ, ನಿಮ್ಮ ವಾಟ್ಸಪ್‌,ಪೇಸ್‌ಬುಕ್‌ ನಂತಹ ಸೋಷಿಯಲ್‌ ಮೀಡಿಯಾದಲ್ಲಿಯೂ (Social Media)  ನಿಮ್ಮ ಗೆಳೆಯರಿಗೂ ಈ ಸಂದೇಶ ಕಳುಹಿಸಿ ಎಂದು ಸಲಹೆ ನೀಡಿದರು.

ನಗರಪಾಲಿಕೆ ವ್ಯಾಪ್ತಿಯಲ್ಲಿ ಶೇ. 40 ಮೈಕ್ರಾನ್‌ ಗಿಂತ ಕಡಿಮೆ ಇರುವ ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧಿಸಲಾಗಿದೆ. ಅದರ ಬಳಕೆ ಕಾನೂನು ಅಡಿಯಲ್ಲಿ ಅಪರಾಧವಾಗಿದೆ. ಪ್ರಾಯೋಗಿಕ ವಾಗಿ 26 ನೇ ವಾರ್ಡಿನಲ್ಲಿ ಆಯೋಜಿಸಿದ್ದು, ಮುಂದಿನ ದಿನಗಳಲ್ಲಿ ಇಡೀ ನಗರಕ್ಕೆ ವಿಸ್ತರಿಸಲಾಗುವುದು ಎಂದರು.

ಪ್ಲಾಸ್ಟಿಕ್‌ ಮುಕ್ತ ಅಭಿಯಾನಕ್ಕೆ ಚಾಲನೆ ನೀಡಿದ ಸ್ಪೂರ್ತಿ ಡೆವಲಪರ್‌ ನ ಎಸ್‌.ಪಿ.ಚಿದಾನಂದ್‌, ತುಂಬಿದ ನಗರವನ್ನು ಪ್ಲಾಸ್ಟಿಕ್‌ ಮುಕ್ತ ನಗರವಾಗಿಸಲು ಯುವಜನತೆ ಸಹಕರಿಸಬೇಕಿದೆ. ಗಂಧದಗುಡಿ ಚಿತ್ರದ ಮೂಲಕ ಪುನೀತ್‌ ರಾಜ್‌ಕುಮಾರ್‌ ಇಂದು ಪರಿಸರ ಸಂರಕ್ಷಣೆಗೆ ನಮ್ಮೆರಿಗೂ ಮಾದರಿಯಾಗಿದ್ದಾರೆ. ಮನೆಯಲ್ಲಿರು ಹಸಿ ಮತ್ತು ಒಣ ಕಸಗಳನ್ನು ಬೇರ್ಪಡಿಸಿ,ಪಾಲಿಕೆಯ ಕಸದ ಆಟೋಗೆ ನೀಡುವ ಮೂಲಕ ನಮ್ಮ ಮನೆಯಿಂದಲೇ ಪ್ಲಾಸ್ಟಿಕ್‌ ಮುಕ್ತ ಅಭಿಯಾನಕ್ಕೆ ಚಾಲನೆ ನೀಡೋಣ.ಸಂಗ್ರಹವಾಗುವ ಪ್ಲಾಸ್ಟಿಕ್‌ನಿಂದಲೇ ನಗರದ ರಸ್ತೆಗೆ ಪಾಲಿಥೀನ್‌ ಕೋಟಿಂಗ್‌ ಮಾಡಿಸಿ, ನಗರದ ಸೌಂದರ್ಯ ಹೆಚ್ಚಿಸಲು ಸಹಕರಿಸಿ ಎಂದು ಕರೆ ನೀಡಿದರು.

ತುಮಕೂರು ಮೇಯರ್‌ ಪ್ರಭಾವತಿ ಎಂ ಸುಧೀಶ್ವರ್‌ ಮಾತನಾಡಿ, ಮಣ್ಣಿನಲ್ಲಿ ಕರಗದ ಪ್ಲಾಸ್ಟಿಕ್‌ ಬಳಕೆಯಿಂದ ಪ್ರಕೃತಿಯ ಮೇಲೆ ಅನೇಕ ದುಷ್ಪರಿಣಾಮ ಉಂಟಾಗಲಿದೆ. ಹಾಗಾಗಿ ನಾವೆಲ್ಲರೂ ತುಮಕೂರು ನಗರವನ್ನು ಪ್ಲಾಸ್ಟಿಕ್‌ ಮುಕ್ತವಾಗಿಸಲು ಸ್ಥಳೀಯ ಸಂಸ್ಥೆ ಗಳೊಂದಿಗೆ ಕೈಜೋಡಿಸಿ, ಭವಿಷ್ಯದ ಪ್ರಜೆಗಳಾದ ಮಕ್ಕಳಿಗೆ ಉತ್ತಮ,ಮಾಲಿನ್ಯ ರಹಿತ ಪರಿಸರವನ್ನು ಕೊಡುಗೆಯಾಗಿ ನೀಡೋಣ ಎಂದು ಸಲಹೆ ನೀಡಿದರು.

ಉಪಮೇಯರ್‌ ಟಿ.ಕೆ.ನರಸಿಂಹಮೂರ್ತಿ ಮಾತನಾಡಿ, ಪ್ಲಾಂಟ್‌ ಮುಕ್ತ ನಗರ ಅಭಿಯಾನಕ್ಕೆ ನಗರದ 35 ವಾರ್ಡುಗಳ ಕೌನ್ಸಿಲರ್‌ ಗಳು, ನಾಗರಿಕರು ಸಹಕಾರ ನೀಡಬೇಕಾಗಿದೆ. ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಪಾಲಿಕೆ ಕಸದ ಆಟೋಗಳಿಗೆ ಹಾಕುವ ಮೂಲಕ ನಗರದ ಸ್ವಚ್ಚತೆಗೆ ಕೈಜೋಡಿಸಿ, ಪೌರಕಾರ್ಮಿಕರಿಗೆ ಬೆಂಬಲವಾಗಿ ನಿಲ್ಲಬೇಕಿದೆ ಎಂದರು

ಬ್ಯೂಗಲ್‌ ಟ್ರಸ್ಟ್‌ ತುಮಕೂರು ಇದರ ಪರವಾಗಿ ಮಾತನಾಡಿದ ಭೂಮಿಕ, ಕಳೆದ ಐದು ವರ್ಷಗಳ ಹಿಂದೆ ಶಿಕ್ಷಣ,ಪರಿಸರ ಸಂರಕ್ಷಣೆ ಹಾಗು ಜನಜಾಗೃತಿ ಮೂಲ ಉದ್ದೇಶಗಳೊಂದಿಗೆ ಆರಂಭವಾದ ಬ್ಯೂಗಲ್‌ ಟ್ರಸ್ಟ್‌ ನಗರದಲ್ಲಿ ಪರಿಸರ ಸಂರಕ್ಷಣೆ ಕುರಿತಂತೆ ಹಲವಾರು ಕಾರ್ಯಕ್ರಮ ಆಯೋಜಿಸಿದೆ ಎಂದರು.

ಪಾಲಿಕೆæಯ 26 ನೇ ವಾರ್ಡಿನ ಸದಸ್ಯ ಮಲ್ಲಿಕಾರ್ಜುನಯ್ಯ ಮಾತನಾಡಿ, ನಮ್ಮ ವಾರ್ಡಿನಲ್ಲಿ ಪ್ರಾಯೋಗಿಕ ವಾಗಿ ಹಮ್ಮಿಕೊಂಡಿರುವ ಈ ಪ್ಲಾಸ್ಟಿಕ್‌ ಮುಕ್ತ ಅಭಿಯಾನ ಮುಂದಿನ ಒಂದು ತಿಂಗಳ ಕಾಲ ನಡೆಯಲಿದ್ದು, ಕಾಲೇಜು ವಿಧ್ಯಾರ್ಥಿಗಳು, ಶಾಲಾ ಮಕ್ಕಳು ಮನೆಯ ಬಳಿ ಬಂದಾಗ ಸಾರ್ವಜನಿಕರು ಬೇಸರ ಪಟ್ಟುಕೊಳ್ಳದೆ, ಅವರು ಹೇಳುವ ಕರಾರುಗಳನ್ನು ಆಲಿಸಿ, ಸಹಕರಿಸುವಂತೆ ಮನವಿ ಮಾಡಿದರು.

ಈ ವೇಳೆ ಬ್ಯೂಗಲ್‌ ಟ್ರಸ್ಟ್‌ ನ ಯಧು ಎನ್‌.ರಾಮು, ಮುರುಳಿ, ಶ್ಯಾಮಸ್ಕಂದ, ಎನ್‌.ಸಿ.ಸಿ.ಲೆಪ್ಟಿನೆಂಟ್‌ ಪ್ರದೀಪ್‌ ಕುಮಾರ್‌, ಪಾಲಿಕೆಯ ಆರೋಗ್ಯಾಧಿಕಾರಿ ಡಾ.ರಕ್ಷಿತ್‌, ಪೊಲೀಸ್‌ ತರಬೇತಿ ಕೇಂದ್ರ ಅಂಜನಪ್ಪ ಶಾರದಾಂಭ, ವಿಜಯ ಕಾಲೇಜುಗಳ ಮುಖ್ಯಸ್ಥರು, ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios