Asianet Suvarna News Asianet Suvarna News

ಮಂಡ್ಯ: ಪಿಒಪಿ, ಬಣ್ಣ ಲೇಪಿತ ಗಣೇಶ ಮೂರ್ತಿಗಳ ಬಳಕೆ ನಿಷೇಧ

ಗಣೇಶ ಚತುರ್ಥಿ ಹಬ್ಬ ಸಮೀಪಿಸಿದ್ದು, ಪಿಒಪಿ ಗಣಪತಿ ಮೂರ್ತಿ ಬಳಕೆ ನಿಷೇಧಿಸಲಾಗಿದೆ. ಪರಿಸರಕ್ಕೆ ಹಾನಿಕಾರಕ ಬಣ್ಣದ ವಿಗ್ರಹಗಳನ್ನು ಮತ್ತು ಪಿಒಪಿಗಳಿಂದ ಮಾಡಿದ ವಿಗ್ರಹಗಳನ್ನು ತಯಾರಿಸಿ, ಮಾರಾಟ ಮಾಡುವುದು ಮತ್ತು ಜಲಮೂಲಗಳಿಗೆ ಬಿಡುವುದನ್ನು ನಿಷೇಧಿಸಿದೆ.

Plaster Of Paris Ganesh Idol prohibited in Mandya
Author
Bangalore, First Published Aug 21, 2019, 8:35 AM IST

ಮಂಡ್ಯ(ಆ.21): ರಾಜ್ಯದಲ್ಲಿ ಪಿಒಪಿ ಮತ್ತು ಬಣ್ಣ ಲೇಪಿತವಾದಂತಹ ವಿಗ್ರಹಗಳನ್ನು ಆಗಸ್ವ್‌ 20ರಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ನಿಷೇಧಿಸಲಾಗಿದೆ.

ಇದರ ಪ್ರಕಾರ ಇನ್ನುಮುಂದೆ ಯಾವುದೇ ಬಣ್ಣದ ವಿಗ್ರಹಗಳನ್ನು ಮತ್ತು ಪಿಒಪಿಗಳಿಂದ ಮಾಡಿದ ವಿಗ್ರಹಗಳನ್ನು ತಯಾರಿಸಿ, ಮಾರಾಟ ಮಾಡುವುದು ಮತ್ತು ಜಲಮೂಲಗಳಿಗೆ ಬಿಡುವುದನ್ನು ನಿಷೇಧಿಸಿದೆ.

ಯಾವುದೇ ಜಲಮೂಲದಲ್ಲಿ ಪಿಒಪಿ ಮೂರ್ತಿ ವಿಸರ್ಜಿಸುವಂತಿಲ್ಲ:

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಲಮಾಲಿನ್ಯ( ತಡೆ ಮತ್ತು ನಿಯಂತ್ರಣ) ಕಾಯ್ದೆ 1974 ರ ಕಲಂ 33(ಆ) ನಲ್ಲಿ ತಿಳಿಸಿರುವ ಪ್ರದತ್ತ ಅಧಿಕಾರವನ್ನು ಚಲಾಯಿಸಿ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌/ ಬಣ್ಣ ಲೇಪಿತವಾದಂತಹ ವಿಗ್ರಹಗಳನ್ನು ಇನ್ನು ಮುಂದೆ ರಾಜ್ಯದ ಯಾವುದೇ ಜಲಮೂಲ, ನದಿ, ಕಾಲುವೆ, ಬಾವಿಗಳಲ್ಲಿ ವಿಸರ್ಜಿಸುವುದನ್ನು ಈ ಮೂಲಕ ನಿಷೇಧಿಸಲಾಗಿದೆ.

ಮಂಡ್ಯ: ಹಾಲು ಉತ್ಪಾದಕರಿಗೆ ಸಂತಸದ ಸುದ್ದಿ

10 ಸಾವಿರ ದಂಡ:

ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಜಲ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ 1974ರ ಕಲಂ 45-ಎ ಅನ್ವಯ ದಂಡವನ್ನು 10 ಸಾವಿರ ರು. ದಂಡ ಮತ್ತು ಜೈಲುವಾಸವನ್ನು ವಿಧಿಸುವ ಅವಕಾಶವಿರುತ್ತದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಾರ್ವಜನಿಕರು ರಾಸಾಯನಿಕ ಬಣ್ಣಗಳಿಂದ ತಯಾರಾದ ಹಾಗೂ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌(ಪಿಒಪಿ) ಗಣಪತಿ ಮೂರ್ತಿಗಳನ್ನು ಬಳಕೆ ಮಾಡದೆ ಬಣ್ಣ ಹಚ್ಚಿಲ್ಲದ ಮಣ್ಣಿನಿಂದ ಮಾಡಿರುವ ಗಣಪತಿ ವಿಗ್ರಹಗಳನ್ನು ಮಾತ್ರ ಖರೀರಿಧಿಸಬೇಕೆಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

Follow Us:
Download App:
  • android
  • ios