ಧಾರವಾಡ(ಮೇ.18): ಆಸ್ತಿ ವಿವಾದದ ಪ್ರಕರಣದಲ್ಲಿ ಸಹೋದರ ಉಮೇಶ ಬಾಳಗಿ ಎಂಬುವರನ್ನು ಕಬ್ಬಿಣದ ರಾಡ್‌ ಹಾಗೂ ಕಲ್ಲನ್ನು ಬಳಸಿ ಕೊಲೆ ಮಾಡಿರುವ ಘಟನೆ ಎಳೆಎಳೆಯಾಗಿ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಕೊಲೆಯಾದ ಉಮೇಶನ ದೊಡ್ಡಪ್ಪನ ಮಗ ಚನ್ನಬಸಪ್ಪ ಹಾಗೂ ಇತರರು ಕೂಡಿ ಶನಿವಾರ ಬೆಳಗ್ಗೆ ಉಮೇಶ ಅವರ ಮನೆ ಬಳಿಯೇ ಬರ್ಬರವಾಗಿ ಹೊಡೆದು ಕೊಲೆ ಮಾಡಿರುವ ದೃಶ್ಯ ನೋಡಿಗರ ಮೈ ಜುಮ್‌ ಎನಿಸುತ್ತದೆ. ಈ ಘಟನೆಯನ್ನು ನೋಡುವ ಉಮೇಶನ ಪತ್ನಿ ಉಮಾ ಅವರ ಮೇಲೂ ಹಲ್ಲೆ ಮಾಡಲು ಆರೋಪಿಗಳು ಓಡಿ ಬಂದಾಗ ಕೂಡಲೇ ಮನೆಗೆ ಹೋಗಿ ಬಾಗಿಲು ಹಾಕಿಕೊಂಡು ತನ್ನ ಜೀವ ಉಳಿಸಿಕೊಳ್ಳುವ ದೃಶ್ಯವೂ ದಾಖಲಾಗಿದೆ.

ಶಿವಮೊಗ್ಗ: ದೇವಾಲಯದ ಹಿಂದೆ ಚೆಲ್ಲಿದ ರಕ್ತ, ಕೊಲೆಯಾಗಿಹೋದ ಸುರೇಶ

ಪ್ರಸ್ತುತ ಆರೋಪಿಗಳ ಬೆನ್ನು ಬಿದ್ದಿರುವ ಉಪ ನಗರ ಠಾಣೆ ಪೊಲೀಸರು ಆರೋಪಿಗಳ ಇರುವಿಕೆ ಪತ್ತೆ ಹಚ್ಚಿದ್ದಾರೆ. ಭಾನುವಾರ ತಡರಾತ್ರಿ ಅವರನ್ನು ಬಂಧಿಸಿದರೂ ಅಚ್ಚರಿ ಏನಿಲ್ಲ.