ಬೆಂಗಳೂರು(ಮೇ.18): ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಘಟನೆ ರಾಜರಾಜೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಸ್ಥಳೀಯ ನಿವಾಸಿ ವಿಜಯಕುಮಾರ್‌ (30) ಕೊಲೆಯಾದ ದುರ್ದೈವಿ. ವಿಜಯಕುಮಾರ್‌ ನಟ ಕಿಚ್ಚ ಸುದೀಪ್‌ ಅಭಿಮಾನಿ ಬಳದಲ್ಲಿ ಕ್ರಿಯಾಶೀಲರಾಗಿದ್ದರು. ಅಲ್ಲದೆ, ಸಣ್ಣಪುಟ್ಟ ವ್ಯವಹಾರ ಮಾಡಿಕೊಂಡಿದ್ದರು. ರಾಜರಾಜೇಶ್ವರಿ ನಗರದ ಆರ್ಮುಗಂ ದೇವಾಲಯದ ಪಕ್ಕದಲ್ಲೇ ವಿಜಯ್‌ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ವೈಯಕ್ತಿಕ ಕಾರಣದಿಂದ ಕೊಲೆ ನಡೆದಿರುವ ಸಾಧ್ಯತೆಗಳಿವೆ. 

17 ಗುಂಟೆ ಜಮೀನಿನ ವ್ಯಾಜ್ಯಕ್ಕೆ ಅಂಗವಿಕಲನ ಮರ್ಡರ್

ವಿಜಯಕುಮಾರ್‌ ಅವರಿಗೆ ಚೆನ್ನಾಗಿ ಪರಿಚಯವಿದ್ದವರೇ ಕರೆಸಿಕೊಂಡು ಕೊಲೆ ಮಾಡಿರುವ ಬಗ್ಗೆ ಶಂಕೆ ಇದೆ. ಸಾರ್ವಜನಿಕರು ನೋಡಿ ಮಾಹಿತಿ ಕೊಟ್ಟ ಬಳಿಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ದೇವಸ್ಥಾನ ಹಾಗೂ ಘಟನೆ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.